ಬೈಂದೂರು: ತಾಯಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಕೇರಳ ಮೂಲದ ಆರೋಪಿ ಬಂಧನ

ಉಡುಪಿ: ಕೇರಳ ರಾಜ್ಯದ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ತಾಯಿಯ ಕೊಲೆ ಪ್ರಕರಣದ ಆರೋಪಿಯನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ. ಮೆಲ್ವಿನ್ (38) ಬಂಧಿತ ಕೊಲೆ ಆರೋಪಿ. ಈತ ಕಾಸರಗೋಡು ಜಿಲ್ಲೆಯ ಮಂಜೇಶ್ವರ ನಿವಾಸಿಯಾಗಿದ್ದಾನೆ. ಬೈಂದೂರು ಠಾಣೆ ವ್ಯಾಪ್ತಿಯ ಕಾಲೊಡು ಬ್ಯಾತಿಯಾನಿ ಎಂಬಲ್ಲಿ ಈತ ತಲೆಮರೆಸಿಕೊಂಡಿದ್ದ. ಕೇರಳ ಪೊಲೀಸರ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಿ ಮಂಜೇಶ್ವರ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಈ ಕಾರ್ಯಾಚರಣೆಯಲ್ಲಿ ಬೈಂದೂರು ಪಿಎಸ್ ಐ ತಿಮ್ಮೇಶ್ ಬಿ.ಏನ್ ಕೊಲ್ಲೂರು ಪಿಎಸ್‌ಐ ವಿನಯ್. ಕೆ […]
ಕೊನೆಗೂ ನಿಜವಾಯ್ತು ಮಂತ್ರದೇವತೆಯ ನುಡಿ : 36 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ ಮಗ

ಮೂಡಬಿದ್ರೆ: ಕೆಲಸಕ್ಕೆಂದು ಮುಂಬೈಗೆ ಹೋಗಿದ್ದ ಮಗ 36 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ್ದಾರೆ. ಮಗ ಮರಳಿ ಮನೆಗೆ ಬಂದೇ ಬರುತ್ತಾನೆ ಎಂದು ಕೆಲವು ಸಮಯದ ಹಿಂದೆ ಮಂತ್ರದೇತೆ ನೀಡಿದ್ದ ಅಭಯ ನಿಜವಾಗಿದ್ದು ಕುಟುಂಬದವರು ಸಂತಸಗೊಂಡಿದ್ದಾರೆ. ಹೌದು ಇಂತಹ ಘಟನೆಗೆ ಸಾಕ್ಷಿಯಾದದ್ದು ಮೂಡುಬಿದಿರೆ ತಾಲೂಕಿನ ಇರುವೈಲು ಗ್ರಾಮ. ಈ ಗ್ರಾಮದ ಚಂದ್ರಶೇಖರ್ ಎನ್ನುವ ವ್ಯಕ್ತಿ ಕಳೆದ 36 ವರ್ಷಗಳ ಹಿಂದೆ ಕೆಲಸಕ್ಕೆಂದು ಮುಂಬೈಗೆ ಹೋಗಿದ್ದರು. ಹೀಗೆ ಹೋದವರು ಸುಮಾರು 7 ತಿಂಗಳು ಮಾತ್ರ ಮನೆಯವರಿಗೆ ಪತ್ರದ ಮೂಲಕ […]
ಉಡುಪಿ: ಜ್ಯೋತಿ ವೈಂಡಿಂಗ್ ಅಂಗಡಿ ಮಾಲೀಕ ಗಣೇಶ್ ಪೈ ನಿಧನ

ಉಡುಪಿ: ಉಡುಪಿ ತೆಂಕಪೇಟೆಯ ಜ್ಯೋತಿ ವೈಂಡಿಂಗ್ ಅಂಗಡಿಯ ಮಾಲೀಕ ಗಣೇಶ್ ಪೈ (42) ಅವರು ಅಲ್ಪಕಾಲದ ಅಸೌಖ್ಯದಿಂದ ಬುಧವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.ಬೀಡಿನಗುಡ್ಡೆಯ ಪಿಲಿಚಂಡಿ ಮಾರ್ಗದ ನಿವಾಸಿ ಗಣೇಶ್ ಪೈ ಅವರು ಕಳೆದ ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರನ್ನು ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರಿ, ತಾಯಿ, ಸಹೋದರಿ ಹಾಗೂ ಸಹೋದರರನ್ನು ಅಗಲಿದ್ದಾರೆ
ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರ: ನೂತನ ಅಧ್ಯಕ್ಷರಾಗಿ ಮಹೇಶ್ ಅಂಚನ್ ಆಯ್ಕೆ

ಉಡುಪಿ: ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಕ್ಷೇತ್ರ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಮಹೇಶ್ ಅಂಚನ್ ಆಯ್ಕೆಗೊಂಡಿದ್ದಾರೆ. ಇಂದು ನಡೆದ ಕ್ಷೇತ್ರ ಆಡಳಿತ ಮಂಡಳಿಯ ಸದಸ್ಯರ ಸಭೆಯಲ್ಲಿ ಮಹೇಶ್ ಅಂಚನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಹೇಶ್ ಅಂಚನ್ ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು. ಕಟಪಾಡಿ ಗಣೇಶೋತ್ಸವ ಸಮಿತಿ, ಮಟ್ಟು ಗಣೇಶೋತ್ಸವ ಸಮಿತಿ, ಜೆ ಸಿ ಐ ಕಟಪಾಡಿ, ಯುವ ವಾಹಿನಿ, ತನ್ನನ್ನು ತೊಡಗಿಸಿಕೊಂಡಿದ್ದು ಸಮಾಜಿಕ ಕಾರ್ಯದಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡಿದವರುಇವರ ಹಿರಿಯರು ಕೂಡ ಕಟಪಾಡಿ ವಿಶ್ವನಾಥ […]
ಉಡುಪಿ: ಸೆ.6-7ರಂದು ಪ್ರವೀಣ್ ಕುಮಾರ್ ನೆನಪಿನ ಆಹ್ವಾನಿತ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ

ಉಡುಪಿ: ಇನ್ಸಿಟ್ಯೂಟ್ ಆಫ್ ಕರಾಟೆ ಎಂಡ್ ಅಲೈಡ್ ಆಟ್ಸ್‌ನ ಮಲ್ಪೆ ಶಾಖೆಯ ವತಿಯಿಂದ ಬುಡೋಕಾನ್ ಕರಾಟೆ ಇಂಟರ್ನ್ಯಾಷನಲ್ ಇದರ ಅಧ್ಯಕ್ಷ ಹಾಗೂ ಇನ್ ಸ್ಟಿಟ್ಯೂಟ್ ಆಫ್ ಕರಾಟೆ ಎಂಡ್ ಅಲೈಡ್ ಆಟ್ಸ್‌ನ ಸಂಸ್ಥಾಪಕ ಪ್ರವೀಣ್ ಕುಮಾರ್ ಅವರ ನೆನಪಿಗಾಗಿ ಆಹ್ವಾನಿತ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯು ಸೆಪ್ಟೆಂಬರ್ 6 ಮತ್ತು 7ರಂದು ಉಡುಪಿ ಅಂಬಾಗಿಲಿನ ಅಮೃತ ಗಾರ್ಡ್ ನ್ ಸಭಾಭವನದಲ್ಲಿ ನಡೆಯಲಿದೆ ಎಂದು ತರಬೇತುದಾರ ಎಂ. ಸುರೇಶ್ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ […]