ಮಂಗಳೂರು: ಭೀಕರ ರಸ್ತೆ ಅಪಘಾತ; NSUI ಜಿಲ್ಲಾ ಉಪಾಧ್ಯಕ್ಷ ಸಹಿತ ಇಬ್ಬರು ಮೃತ್ಯು –ಇಬ್ಬರು ಗಂಭೀರ ಗಾಯ

ಮಂಗಳೂರು: ರಾ.ಹೆ.66 ಜಪ್ಪಿನಮೊಗರು ಬಳಿ ಕಾರೊಂದು ರಸ್ತೆ ವಿಭಜಕ್ಕೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ಮೃತರನ್ನು ಕೊಂಚಾಡಿಯ ಓಂಶ್ರೀ (24) ಮತ್ತು ಮಲ್ಲಿಕಟ್ಟೆಯ ಅಮನ್ ರಾವ್ (23) ಎಂದು ಗುರುತಿಸಲಾಗಿದೆ. ಓಂಶ್ರೀ ಅವರು ದ.ಕ. ಜಿಲ್ಲಾ ಎನ್ ಎಸ್ ಯು ಐ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಾರಿನಲ್ಲಿ ನಾಲ್ಕೈದು ಮಂದಿ ಪ್ರಯಾಣಿಸುತ್ತಿದ್ದು, ಕಾರನ್ನು ಅಮನ್ ರಾವ್ ಚಲಾಯಿಸುತ್ತಿದ್ದರು ಎನ್ನಲಾಗಿದೆ.ನಡುರಾತ್ರಿ 2.30ರ ವೇಳೆಗೆ ಘಟನೆ ನಡೆದಿದೆ. ರಾ.ಹೆ. 66ರ ಜಪ್ಪಿನಮೊಗರು ದಕ್ಷಿಣ ಸಂಚಾರಿ […]

ಉಡುಪಿ: ನೂತನ ಜಿಲ್ಲಾಧಿಕಾರಿಯಾಗಿ ಸ್ವರೂಪ ಟಿ. ಕೆ ಅಧಿಕಾರ ಸ್ವೀಕಾರ

ಉಡುಪಿ: ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಸ್ವರೂಪ ಟಿ.ಕೆ ಅವರು ಇಂದು ಅಧಿಕಾರ ವಹಿಸಿಕೊಂಡರು. ಮಧ್ಯಾಹ್ನ ನಿಕಟಪೂರ್ವ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಅವರಿಂದ ಅಧಿಕಾರ ಸ್ವೀಕರಿಸಿದರು. ಸ್ವರೂಪ ಅವರು ಈ ಹಿಂದೆ ಬೆಂಗಳೂರಿನ ಆ‌ರ್. ಡಿ. ಪಿ. ಆರ್ ಇ-ಗವರ್ನೆನ್ಸ್ ನಿರ್ದೇಶಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಕುಚ್ಚೂರು- ಹೆಬ್ರಿ ರಸ್ತೆ ಸಂಪರ್ಕ ಕಡಿತ; ಇಲಾಖಾಧಿಕಾರಿಗಳ ನಿರ್ಲಕ್ಷ್ಯ ವಿರೋಧಿಸಿ ಗ್ರಾಮಸ್ಥರ ಪ್ರತಿಭಟನೆ

ಉಡುಪಿ: ಹೆಬ್ರಿ -ಕುಚ್ಚೂರು ಸಂಪರ್ಕಿಸುವ ಬದಲಿ ರಸ್ತೆ ಸಂಪರ್ಕವು ಕಡಿತಗೊಂಡಿದ್ದು, ಇದಕ್ಕೆ ಇಲಾಖಾಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ ಸ್ಥಳೀಯರು ಹೆಬ್ರಿ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಿದರು. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹೆಬ್ರಿ -ಕುಚ್ಚೂರು ಸಂಪರ್ಕಿಸುವ ಬದಲಿ ರಸ್ತೆ ಸಂಪರ್ಕವು ಕಡಿತಗೊಂಡಿದ್ದು, ಮಳೆಗಾಲದಲ್ಲಿ ಕಾಮಗಾರಿ ಆರಂಭಿಸಿರುವುದರಿಂದ ರಸ್ತೆ ಮಳೆಗೆ ಕೊಚ್ಚಿಕೊಂಡು ಹೋಗಿದೆ. ಇದಕ್ಕೆ ಅಧಿಕಾರಿಗಳ ಬೇಜಾಬ್ದಾರಿಯೇ ಕಾರಣ ಎಂದು ಸ್ಥಳೀಯರು‌ ಆಕ್ರೋಶ ವ್ಯಕ್ತಪಡಿಸಿದರು. ಸಾಮಾಜಿಕ ಹೋರಾಟಗಾರ ಶ್ರೀಕಾಂತ್ ಕುಚ್ಚೂರು ಮಾತನಾಡಿ, ಕೊಲ್ಲೂರು ಧರ್ಮಸ್ಥಳ ರಾಜ್ಯ […]

ಭಾರತೀಯ ನೌಕಾಪಡೆಯ ಪೈಲಟ್ ಆಗಿ ನೇಮಕಗೊಂಡ ಸೀಮಾ ತೆಂಡೂಲ್ಕರ್ ಗೆ ಅಭಿನಂದನೆ

ಉಡುಪಿ: ಭಾರತೀಯ ನೌಕಾಪಡೆಯ ಪೈಲಟ್ ಆಗಿ ನೇಮಕಗೊಂಡಿರುವ ನಮ್ಮ ಸಮಾಜದ ಹೆಮ್ಮೆಯ ಕುವರಿ ಸೀಮಾ ತೆಂಡೂಲ್ಕರ್ ಪೆರ್ಣಂಕಿಲ ಇವರನ್ನು ಜೂ.15 ರಂದು ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ ಮಣಿಪಾಲದಲ್ಲಿ ಸಂಘದ ವತಿಯಿಂದ ಭಾರತದ ಆರ್ ಎಸ್ ಬಿ ಸಮಾಜದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಮಾಜದ ಹಿರಿಯರು ಮತ್ತು ಗಣ್ಯರ ಸಮ್ಮುಖದಲ್ಲೂ ಅಭಿನಂದಿಸಿ ಗೌರವಿಸಲಾಯಿತು. ಸಂಘದ ಅಧ್ಯಕ್ಷರಾದ ಶ್ರೀಶ ನಾಯಕ್ ಪೆರ್ಣಂಕಿಲ, ಸಂಘದ ಗೌರವ ಸಲಹೆಗಾರರಾದ ಎಂ ಗೋಕುಲದಾಸ್ ನಾಯಕ್ ಮಂಗಳೂರು, ಸಂಘದ ಉಪಾಧ್ಯಕ್ಷರು ಚೇತನ್ ನಾಯಕ್ ಕಾರ್ಕಳ, […]

ಬ್ರಹ್ಮಾವರ: ಶಾಲಾ ಬಸ್ ಗೆ ಲಾರಿ ಡಿಕ್ಕಿ- ಹಲವು ವಿದ್ಯಾರ್ಥಿಗಳಿಗೆ ಗಾಯ

ಉಡುಪಿ: ಶಾಲಾ ಬಸ್ಸಿಗೆ ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದು ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗೊಂಡ ಘಟನೆ ಬುಧವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರ ತಾಲೂಕಿನ ಧರ್ಮವರ ಆಡಿಟೋರಿಯಂ ಬಳಿ ಸಂಭವಿಸಿದೆ. ಜಿ.ಎಂ ವಿದ್ಯಾನಿಕೇತನ ಆಂಗ್ಲಮಾಧ್ಯಮ ಶಾಲಾ ವಿದ್ಯಾರ್ಥಿಗಳಿದ್ದ ಶಾಲಾ ಬಸ್ ಕುಂದಾಪುರದಿಂದ ಬಂದು ಧರ್ಮಾವರ ಆಡಿಟೋರಿಯಂ ಸರ್ಕಲ್ ಬಳಿ ಯೂ ಟರ್ನ್ ಮಾಡುವ ಸಂದರ್ಭದಲ್ಲಿ ಹಿಂದಿನಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆದಿದೆ.ಅಪಘಾತದಿಂದ ಹಲವು ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳನ್ನು ತಕ್ಷಣ ಬ್ರಹ್ಮಾವರ […]