ಉಡುಪಿ: ಛಾಯಾಚಿತ್ರ ಸ್ಪರ್ಧೆಯಲ್ಲಿ ಆಸ್ಟ್ರೋ ಮೋಹನ್ಗೆ ಚಿನ್ನದ ಪದಕ

ಉಡುಪಿ: ಹಿರಿಯ ಛಾಯಾಗ್ರಾಹಕ ಅಸ್ಟ್ರೋ ಮೋಹನ್ ಇಟೆಲಿಯಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಟ್ಟದ ಛಾಯಾಗ್ರಹಣ ಸ್ಪರ್ಧೆಯಲ್ಲಿ ಎರಡು ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಅವರ ಭಾವನಾತ್ಮಕ ಛಾಯಾಚಿತ್ರ ‘ಶ್ವಾಸಕ್ಕಾಗಿ ಹೋರಾಟ’ ಇದಕ್ಕೆ ‘ಗ್ರಾನ್ ಪ್ರಿಕ್ಸ್ ಜಾಫರಿ’ ಚಿನ್ನದ ಪದಕ ಹಾಗೂ ಗ್ರಾನ್ ಪ್ರಿಕ್ಸ್ ರುಬಿನಿ ಅತ್ಯುತ್ತಮ ಕೃತಿ ಪತ್ರಿಕೋದ್ಯಮ ಛಾಯಾಚಿತ್ರ ಥೀಮ್(ಬಣ್ಣ/ಕಪ್ಪುಬಿಳುಪಿನಲ್ಲಿ) ಗೌರವ ಲಭಿಸಿದೆ. ಇವರು ಈಗಾಗಲೇ 800ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿಗಳನ್ನು ಗಳಿಸಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಕ್ಯಾನಾನ್ ಇಂಡಿಯಾದ ಕ್ಯಾನನ್ ಇಓಎಸ್ ಮೆಸ್ಟ್ರೋ ಹಾಗೂ […]
ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್: ಪೂರ್ವ ಪಾರ್ಥಮಿಕ ವಿದ್ಯಾರ್ಥಿಗಳ ಅಕ್ಷರಾಭ್ಯಾಸ ಕಾರ್ಯಕ್ರಮ.

ಕಿರಿಮಂಜೇಶ್ವರ: ಜೂನ್ 9 ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳ ಅಕ್ಷರಾಭ್ಯಾಸ ಕಾರ್ಯಕ್ರಮವು ಗಣಪತಿ ಮತ್ತು ಸರಸ್ವತಿ ಆರಾಧನೆ ಹಾಗೂ ನವಗ್ರಹ ಹೋಮದೊಂದಿಗೆ ನೆರವೇರಿತು. ಈ ಕಾರ್ಯಕ್ರಮವು ವೇದಮೂರ್ತಿ ಗಜೇಂದ್ರ ಹೊಳ್ಳ ಅವರ ಅಮೃತ ಹಸ್ತದಿಂದ ದೀಪ ಪ್ರಜ್ವಲನದ ಮುಖೇನ ವಿಜ್ರಂಭಣೆಯಿಂದ ಆರಂಭಗೊಂಡಿತು. ಜನತಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಗಣೇಶ್ ಮೊಗವೀರ ಅವರು “ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ಉದ್ದೇಶದಿಂದ ಶಾಸ್ತ್ರೋಕ್ತವಾಗಿ ವಿದ್ಯಾರಂಭ ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ ಆಯೋಜಿಸಲಾಗಿದೆ. ಪೋಷಕರು ತಮ್ಮ ವಿದ್ಯಾರ್ಥಿ […]
ಉಡುಪಿ: ಪೆರ್ಣಂಕಿಲದ ಸೀಮಾ ತೆಂಡೂಲ್ಕರ್ ಭಾರತೀಯ ನೌಕಾಪಡೆಯ ಪೈಲಟ್ ಆಗಿ ಆಯ್ಕೆ.

ಉಡುಪಿ: ಭಾರತೀಯ ನೌಕಾಪಡೆ ಸೇರಬೇಕೆಂಬ ಕನಸು ಕಂಡಿದ್ದ ಉಡುಪಿ ಜಿಲ್ಲೆಯ ಪೆರ್ಣಂಕಿಲ ಅನ್ನೋ ಪುಟ್ಟ ಗ್ರಾಮದ ಹುಡುಗಿ ಸೀಮಾ ತೆಂಡೂಲ್ಕರ್ ಮಾದರಿಯಾಗಿದ್ದಾರೆ. ಎಂಜಿನೀಯರಿಂಗ್ ಪದವಿ ಪಡೆದಿದ್ದರೂ ಭಾರತೀಯ ಶಸಸ್ತ್ರ ಪಡೆಯಲ್ಲಿ ದೇಶ ಸೇವೆ ಮಾಡಲು ಟೊಂಕ ಕಟ್ಟಿದ್ದ ಸೀಮಾ ತೆಂಡೂಲ್ಕರ್ ಇದೀಗ ಭಾರತೀಯ ನೌಕಾಪಡೆಯಲ್ಲಿ ಪೈಲೆಟ್ ಆಗಿ ಆಯ್ಕೆಯಾಗಿದ್ದಾರೆ. ಸದಾನಂದ್ ನಾಯಕ್ ಹಾಗೂ ಜಯಶ್ರಿ ತೆಂಡೂಲ್ಕರ್ ಪುತ್ರಿ ಸೀಮಾ ತೆಂಡೂಲ್ಕರ್ ತಮ್ಮ ಬಾಲ್ಯದ ಕನಸಿನಂತೆ ನೌಕಾಪಡೆಯಲ್ಲಿ ಸಬ್ ಲೆಫ್ಟಿನೆಂಟ್ ಪೈಲೆಟ್ ಆಗಿ ಆಯ್ಕೆಯಾಗಿದ್ದಾರೆ.
ಕೋಡಿ ಸೇತುವೆಯ ಬಳಿ ಸ್ಕೂಟರ್, ಚಪ್ಪಲಿ ಬಿಟ್ಟು ಮಹಿಳೆ ನಾಪತ್ತೆ

ಉಡುಪಿ: ಕೋಡಿ ಸೇತುವೆಯ ಬಳಿ ಸ್ಕೂಟರ್ ಚಪ್ಪಲಿ ಬಿಟ್ಟು ವಿವಾಹಿತ ಮಹಿಳೆಯೋರ್ವಳು ನಾಪತ್ತೆಯಾಗಿದ್ದಾರೆ. ಕುಂದಾಪುರ ವಿಠ್ಠಲವಾಡಿ ನಿವಾಸಿ ಹೀನಾ ಕೌಶರ್(33) ನಾಪತ್ತೆಯಾದ ವಿವಾಹಿತೆ. ಸೋಮವಾರ ಬೆಳಿಗ್ಗೆ 4 ಗಂಟೆ ಸುಮಾರಿಗೆ ಸೇತುವೆ ಬಳಿ ಚಪ್ಪಲಿ ಸ್ಕೂಟರ್ ಪತ್ತೆಯಾಗಿತ್ತು. ನಾಪತ್ತೆಯಾದ ಮಹಿಳೆಯ ಪತಿ ವಿದೇಶದಲ್ಲಿದ್ದು, ಎರಡು ಮಕ್ಕಳು, ತಾಯಿ ಜೊತೆ ವಾಸವಾಗಿದ್ದರು. ಮೊಬೈಲ್ ಗೆ ಕರೆ ಮಾಡಿದಾಗ ಸ್ವಿಚ್ ಆಫ್ ಬರುತ್ತಿದ್ದಾಗ ಆತಂಕಗೊಂಡ ಮನೆಯವರು ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸ್ ರು, ಅಗ್ನಿಶಾಮಕ ದಳ ಮತ್ತು […]
ಉಡುಪಿ:ವೃದ್ಧೆ ನಾಪತ್ತೆ

ಉಡುಪಿ: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಬ್ರಹ್ಮಾವರದ ಹನೆಹಳ್ಳಿ ಗ್ರಾಮದಲ್ಲಿ ವಾಸವಿದ್ದ ಬಚ್ಚಿಪೂಜಾರ್ತಿ (69) ಎಂಬ ವೃದ್ಧೆಯು 2019 ರಲ್ಲಿ ಯಾರಿಗೂ ಹೇಳದೇ ಮನೆಯಿಂದ ಹೋದವರು ಇದುವರೆಗೂ ವಾಪಾಸು ಬಾರದೇ, ಸಂಬಂಧಿಕರ ಮನೆಗೂ ಹೋಗದೇ ನಾಪತ್ತೆಯಾಗಿರುತ್ತಾರೆ. 5 ಅಡಿ 1 ಇಂಚು ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ಸಪೂರ ಶರೀರ ಹೊಂದಿದ್ದು, ಕನ್ನಡ ಹಾಗೂ ಹಿಂದಿ ಭಾಷೆಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆ ದೂ.ಸಂಖ್ಯೆ: 0820-2561044, ಪಿ.ಎಸ್.ಐಮೊ.ನಂ: 9480805454, ಬ್ರಹ್ಮಾವರ ಪೊಲೀಸ್ ವೃತ್ತ […]