ಉಡುಪಿ: ಡಾ. ಬಾಲಕೃಷ್ಣ ಎಸ್. ಮದ್ದೋಡಿ ಮಡಿಲಿಗೆ ಇಂಡಿಯಾ ಪ್ರೈಮ್ ಐಕಾನ್ 2025 ಪ್ರಶಸ್ತಿ

ಉಡುಪಿ: ಮಾಹೆ ಎಂಐಟಿ ಯ ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಬಾಲಕೃಷ್ಣ ಎಸ್ ಮದ್ದೋಡಿ ಅವರು ಪರಿಸರ ಶಿಕ್ಷಣ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳ ಅತ್ಯುತ್ತಮ ಕೆಲಸಕ್ಕಾಗಿ ಪ್ರತಿಷ್ಠಿತ ಇಂಡಿಯಾ ಪ್ರೈಮ್ ಐಕಾನ್ ಪ್ರಶಸ್ತಿ- 2025 ಪಡೆದರು. ವಿದ್ಯಾರ್ಥಿಗಳನ್ನು ಪರಿಸರ ಸಂರಕ್ಷಣೆ ಮತ್ತು ರಾಷ್ಟ್ರ ಅಭಿವೃದ್ಧಿಯತ್ತ ರೂಪಿಸುವ ಜವಾಬ್ದಾರಿ. ವಿದ್ಯಾರ್ಥಿಗಳ ಸಬಲೀಕರಣ ಮತ್ತು ಪರಿಸರ ಜಾಗೃತಿಯನ್ನು ಉತ್ತೇಜಿಸುವ ಅವರ ಸಾಧನೆಗಳಿಗೆ ಸಂದ ಗೌರವವಾಗಿದೆ.

ಉಡುಪಿ:ಜೂ. 11 ರಂದು ಮಿನಿ ಉದ್ಯೋಗ ಮೇಳ

ಉಡುಪಿ: ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಉದ್ಯೋಗ ವಿನಿಮಯ ಕಚೇರಿಯಲ್ಲಿ ಜೂನ್ 11 ರಂದು ಬೆಳಗ್ಗೆ 10.30 ಕ್ಕೆ ಮಿನಿ ಉದ್ಯೋಗ ಮೇಳ ನಡೆಯಲಿದೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐ.ಟಿ.ಐ, ಬಿ.ಕಾಂ, ಬಿ.ಇ ಇಂಜಿನಿಯರಿಂಗ್, ಡಿಪ್ಲೋಮಾ ಹಾಗೂ ಇತರೆ ಪದವಿ ವಿದ್ಯಾರ್ಹತೆಯೊಂದಿಗೆ ಉತ್ತೀರ್ಣರಾದ ಅಭ್ಯರ್ಥಿಗಳು ತಮ್ಮ ಅಂಕಪಟ್ಟಿ, ಸ್ವವಿವರವುಳ್ಳ ರೆಸ್ಯೂಮ್/ಸಿವಿ ಹಾಗೂ ಆಧಾರ್ ಕಾರ್ಡ್ಪ್ರತಿಯೊಂದಿಗೆ ಮಿನಿ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಉಡುಪಿ […]

ಉಡುಪಿ: ತೆಂಕನಿಡಿಯೂರು ಸರಕಾರಿ ಕಾಲೇಜಿನಲ್ಲಿ ಕೌಶಲ್ಯ ಶಿಕ್ಷಣ; ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರದೊಂದಿಗೆ ಒಡಂಬಡಿಕೆ

ಉಡುಪಿ: ಕಾಲೇಜಿನ ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ಕೌಶಲ್ಯ ಶಿಕ್ಷಣವನ್ನು ನೀಡುವುದಕ್ಕಾಗಿ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರವು ಮಣಿಪಾಲದ ಡಾ.ಟಿ.ಎಂ.ಪೈ ಫೌಂಡೇಶನ್‌ನ ಅಂಗಸಂಸ್ಥೆಯಾದ ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ನೊಂದಿಗೆ ಒಡಂಬಡಿಕೆ (ಎಂಓಯು) ಮಾಡಿ ಕೊಂಡಿದೆ. ಕೌಶಲ್ಯಾಧಾರಿತ ಕೋರ್ಸುಗಳ ರಚನೆ, ಅಭಿವೃದ್ಧಿ ಮತ್ತು ನಿರ್ವಹಣೆ, ಉದ್ಯೋಗ ಕೌಲ್ಯವನ್ನು ವೃದ್ಧಿಸು ವುದು, ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್, ವಿವಿಧ ಶೈಕ್ಷಣಿಕ ಮತ್ತು ವೃತ್ತಿಪರ ಕಾರ್ಯಾಗಾರಗಳು, ಕೈಗಾರಿಕಾ ಭೇಟಿ, ಕೈಗಾರಿಕಾ ವಾತಾವರಣ ಪರಿಚಯಿಸುವಿಕೆ, ಎರಡು ಸಂಸ್ಥೆಗಳ ಸಂಪನ್ಮೂಲ ವ್ಯಕ್ತಿಗಳ ವಿನಿಮಯ […]

ಉಡುಪಿ: ವಿದ್ಯಾರ್ಥಿಗಳಿಗೆ ಕೆ.ಎಸ್.ಆರ್.ಟಿ.ಸಿ. ಬಸ್‌ಪಾಸ್- ಅರ್ಜಿ ಆಹ್ವಾನ

ಉಡುಪಿ: ಪ್ರಸಕ್ತ ಸಾಲಿನಲ್ಲಿ ಕ.ರಾ.ರ.ಸಾ. ನಿಗಮದ ವಿದ್ಯಾರ್ಥಿ ಬಸ್‌ಪಾಸ್ ಪಡೆಯಲು ಸೇವಾಸಿಂಧು ಪೋರ್ಟಲ್ – https://sevasindhuservices.karnataka.gov.in/buspassservices-ನಲ್ಲಿ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅಥವಾ ಕರ್ನಾಟಕ-ಒನ್, ಗ್ರಾಮ ಒನ್ ಕೇಂದ್ರಗಳಲ್ಲಿಯೂ ಸಹ ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿಗಳು ವಿದ್ಯಾರ್ಥಿ ಬಸ್‌ಪಾಸಿಗಾಗಿ ಅರ್ಜಿ ಸಲ್ಲಿಸಲು ಡಿಕ್ಲರೇಷನ್ ಫಾರ್ಮ್‌ಅನ್ನು ಸೇವಾಸಿಂಧು ತಂತ್ರಾಂಶದಲ್ಲಿ ಅಥವಾ ಕ.ರಾ.ರ.ಸಾ.ನಿಗಮದ ವೆಬ್‌ಸೈಟ್ – https://ksrtc.karnataka.gov.in/studentpass-ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಡಿಕ್ಲರೇಷನ್ ಫಾರ್ಮ್ ಅನ್ನು ಭರ್ತಿ ಮಾಡಿ ಶಾಲಾ ಅಥವಾ ಕಾಲೇಜು ಮುಖೋಪಾಧ್ಯಾಯರ ಅಥವಾ ಪ್ರಾಂಶುಪಾಲರ ಸಹಿ ಮತ್ತು ಶಾಲಾ/ಕಾಲೇಜು ಮೊಹರಿನೊಂದಿಗೆ ಅರ್ಜಿ […]

ಸುಹಾಸ್ ಶೆಟ್ಟಿ ಕೊಲೆ ಪ್ರಕರಣದ ಜತೆ ಕುಡುಪು ಗುಂಪು ಹತ್ಯೆ, ರಹೀಮ್ ನ ಕೊಲೆಯನ್ನೂ ಎನ್ಐಎ ಗೆ ನೀಡಿ:ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೂವರೆ ತಿಂಗಳಿನಿಂದೀಚೆಗೆ ನಡೆದಿರುವ ಮೂರು ಕೊಲೆ ಪ್ರಕರಣಗಳು ಇಡೀ ಕರಾವಳಿಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಕೊಲೆಗಳು ಒಂದಕ್ಕೊಂದು ಪ್ರತೀಕಾರದ ಕೊಲೆಯಾಗಿರುವ ಸಾಧ್ಯತೆಯಿದ್ದು, ಈ ಮೂರು ಪ್ರಕರಣಗಳನ್ನು ಕೂಡ ಎನ್ ‌ಐಎ ತನಿಖೆಗೆ ವಹಿಸಿದರೆ ದುಷ್ಜೃತ್ಯದ ಹಿಂದಿನ ಸತ್ಯ ಬಯಲಿಗೆ ಬರಲಿದೆ ಎಂದು ವಿಧಾನ ಪರಿಷತ್ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ. ಕೇಂದ್ರ ಗೃಹ ಇಲಾಖೆಯು ಬಜಪೆ ಕಿನ್ನಿಪದವಿನಲ್ಲಿ ನಡೆದ ಸುಹಾಸ್ ಕೊಲೆ ಪ್ರಕರಣವನ್ನು ಎನ್‌ಐಎಗೆ ವಹಿಸಿದೆ. […]