MSDCಯಲ್ಲಿ 3D ಮಾಡೆಲಿಂಗ್, ಅನಿಮೇಷನ್ ಮತ್ತು ವರ್ಚುವಲ್ ರಿಯಾಲಿಟಿ ಅಲ್ಪಾವಧಿ ಕೋರ್ಸ್.

ಮಣಿಪಾಲ: ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ 3D ಮಾಡೆಲಿಂಗ್, ಅನಿಮೇಷನ್ ಮತ್ತು ವರ್ಚುವಲ್ ರಿಯಾಲಿಟಿ ಅಲ್ಪಾವಧಿ ಕೋರ್ಸ್‌ಗಳು ಪ್ರಾರಂಭಗೊಂಡಿವೆ. ಅವಧಿ: 1 ವಾರ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9448159810ಸ್ಥಳ: CADD ಕೇಂದ್ರ, MSDC, ಡಾ. ಟಿ ಎಂ ಎ ಪೈ ಪಾಲಿಟೆಕ್ನಿಕ್ ಕ್ಯಾಂಪಸ್, ಮಣಿಪಾಲ್
ಉದ್ಯಾವರ: ಕ್ರಾಶ್ ಗಾರ್ಡ್ ಗೆ ಡಿಕ್ಕಿ ಹೊಡೆದು ಡಿವೈಡರ್ ಮೇಲೇರಿದ ಎಕ್ಸ್ ಯುವಿ ಕಾರು- ಮೂವರಿಗೆ ಗಾಯ

ಉಡುಪಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಡಿವೈಡರ್ ಮೇಲೇರಿ ಕ್ರಾಶ್ ಗಾರ್ಡ್ ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಪ್ರಯಾಣಿಕರು ಗಾಯಗೊಂಡ ಘಟನೆ ಶುಕ್ರವಾರ ಮುಂಜಾನೆ ರಾ.ಹೆ. 66ರ ಉದ್ಯಾವರದ ಕಿಯಾ ಶೋರೂಮ್ ಬಳಿ ಸಂಭವಿಸಿದೆ. ಮಂಗಳೂರಿನಿಂದ ಹರಿಯಾಣಕ್ಕೆ ತೆರಳುತ್ತಿದ್ದ ಎಕ್ಸ್ ಯುವಿ ಕಾರು ಅಪಘಾತಕ್ಕೀಡಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಡಿವೈಡರ್ ಮೇಲಿನ ಕ್ರಾಶ್ ಗಾರ್ಡ್ ಸಹಿತ ಕಾರು ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ