ರಾಯಲ್ ಚಾಲೆಂಜರ್ಸ್ ಬೆಂಗಳೂರು – ಪಂಜಾಬ್ ಕಿಂಗ್ಸ್ ನಡುವೆ ಐಪಿಎಲ್ 2025ರ ಫೈನಲ್ ಪಂದ್ಯ; ಆರ್ ಸಿಬಿ’ಗೆ ಸಿಗುತ್ತಾ ಈ ಸಲ ಕಪ್.?

ಬೆಂಗಳೂರು: ಇಂದು (ಜೂ.3) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಫೈನಲ್ ಪಂದ್ಯ ನಡೆಯಲಿದೆ. ಉಭಯ ತಂಡಗಳು ಇನ್ನೂ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿಲ್ಲ. ಹೀಗಾಗಿ ಈ ಬಾರಿ ಅಭಿಮಾನಿಗಳು ಹೊಸ ಚಾಂಪಿಯನ್ ತಂಡವನ್ನು ನೋಡಲಿದ್ದಾರೆ. ರೆಡ್ – ರೆಡ್ ಫೈಟ್‌ನಲ್ಲಿ ಯಾರು ಗೆಲುವು ಸಾಧಿಸುತ್ತಾರೆ? ಅನ್ನೋದರ ಬಗ್ಗೆ ತೀವ್ರ ಕುತೂಹಲ ಮೂಡಿದೆ. ವಿರಾಟ್ ಕೊಹ್ಲಿಗಾಗಿ ಆರ್‌ಸಿಬಿ ಆಟಗಾರರು ಪ್ರತಿ ಪಂದ್ಯದಲ್ಲಿಯೂ ಅದ್ಭುತ […]
ಬೈಂದೂರು: ಮಾಂಸ ಮಾಡಲು ಎತ್ತುಗಳನ್ನು ಕಟ್ಟಿಹಾಕಿದ್ದ ಆರೋಪಿಯ ಬಂಧನ

ಉಡುಪಿ: ಬೈಂದೂರು ತಾಲೂಕಿನ ಶಿರೂರು ಗ್ರಾಮದ ಕೆಳಪೇಟೆ ಉಸ್ಮಾನಿಯ ಮೊಹಲ್ಲಾದಲ್ಲಿ ಮಾಂಸ ಮಾಡಿ ಮಾರಾಟ ಮಾಡುವ ಸಲುವಾಗಿ 4 ಎತ್ತುಗಳನ್ನು ಕಟ್ಟಿಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಉಸ್ಮಾನಿಯಾ ಮೊಹಲ್ಲಾದ ಮಹಮ್ಮದ್ ಸಾಜೀದ್ ಬಂಧಿತ ಆರೋಪಿ. ಈತ ಯಾವುದೇ ಪರವಾನಿಗೆ ಇಲ್ಲದೇ ಮಾಂಸ ಮಾಡಿ ಮಾರಾಟ ಮಾಡಲು 4 ಎತ್ತುಗಳನ್ನು ಅಕ್ರಮವಾಗಿ ತಂದು ಕಟ್ಟಿ ಹಾಕಿದ್ದ. ಪೊಲೀಸರು ದಾಳಿ ನಡೆಸಿ ಅವುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಶಾಸಕ ಯಶ್‌ಪಾಲ್ ಸುವರ್ಣ ಅಧ್ಯಕ್ಷತೆಯಲ್ಲಿ ಮೆಸ್ಕಾಂ ಅಧಿಕಾರಿಗಳ ಸಭೆ

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವಿದ್ಯುತ್ ಸಮಸ್ಯೆಗೆ ಸಂಬಂಧಿಸಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅಧ್ಯಕ್ಷತೆಯಲ್ಲಿ ಉಡುಪಿ ನಗರಸಭೆ ಕಚೇರಿಯಲ್ಲಿ ಮೆಸ್ಕಾಂ ಅಧಿಕಾರಿಗಳ ಸಭೆ ನಡೆಯಿತು. ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ಮಳೆಗಾಲದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಭಾಗಗಳಲ್ಲಿ ವಿದ್ಯುತ್ ಸಮಸ್ಯೆಯಾಗಿದೆ. ಸಮಸ್ಯೆ ಉಂಟಾದ 24ಗಂಟೆಯೊಳಗೆ ಕ್ರಮ ಜರಗಿಸದಿದ್ದರೆ ಹಲವು ತೊಂದರೆಗಳು ಎದುರಾಗುತ್ತದೆ. ಈ ವಿಚಾರದಲ್ಲಿ ಮೆಸ್ಕಾಂ ಇಲಾಖೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿದರು. ಮುಂದೆ ಕೂಡ ಗಾಳಿಮಳೆ ಆಗುವ ಸಾಧ್ಯತೆ ಇರುವುದರಿಂದ […]
ಉಡುಪಿ:ವಿಶ್ವ ತಂಬಾಕು ರಹಿತ ದಿನಾಚರಣೆ

ಉಡುಪಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಉಡುಪಿ ಜಿಲ್ಲೆ, ರೋಟರಿ ಕ್ಲಬ್ಕಟಪಾಡಿ ಹಾಗೂ ಎನ್.ಸಿ.ಸಿ ಘಟಕ ಎಸ್.ವಿ.ಎಸ್ ಪ್ರೌಢಶಾಲೆ ಕಟಪಾಡಿ ಇವರ ಸಹಭಾಗಿತ್ವದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆಯ ಅಂಗವಾಗಿ ಮಾದಕ ದ್ರವ್ಯ ವ್ಯಸನದಿಂದ ಆಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ಶಿಬಿರವು ಶನಿವಾರ ಕಟಪಾಡಿಯ ಎಸ್.ವಿ.ಎಸ್ ಕಾಲೇಜು ಸಭಾಂಗಣದಲ್ಲಿ ನಡೆಯಿತು. ರೋಟರಿ ಸಹಾಯಕ ಗವರ್ನರ್ ಜಗನ್ನಾಥ ಕೋಟೆ ಕಾರ್ಯಕ್ರಮ ಉದ್ಘಾಟಿಸಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಎಚ್ ವಿವಿಧ […]
ಎಸ್ ಕೆ ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ; ಉಡುಪಿ ಶಾಖೆ ಹಿರಿಯ ಶಾಖಾ ವ್ಯವಸ್ಥಾಪಕ ಲಕ್ಷ್ಮೀ ನಾರಾಯಣ. ಬಿ. ಆಚಾರ್ ಅವರಿಗೆ ಬೀಳ್ಕೊಡುಗೆ ಸಮಾರಂಭ.

ಉಡುಪಿ: ಎಸ್ ಕೆ ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ ಉಡುಪಿ ಶಾಖೆಯ ಹಿರಿಯ ಶಾಖಾ ವ್ಯವಸ್ಥಾಪಕರಾದ ಲಕ್ಷ್ಮೀ ನಾರಾಯಣ. ಬಿ. ಆಚಾರ್, ಇವರು 41 ವರ್ಷಗಳ ಕಾಲ ಸುದೀರ್ಘ ಸೇವೆಯನ್ನು ಸಲ್ಲಿಸಿ, ದಿನಾಂಕ 31-05 -2025 ರಂದು ನಿವೃತ್ತಿಗೊಂಡಿದ್ದರು. ಇವರ ಬೀಳ್ಕೊಡುಗೆ ಸಮಾರಂಭವು ವುಡ್ ಲ್ಯಾಂಡ್ ಹೋಟೆಲ್ ನ ಸಭಾಭವನದಲ್ಲಿ ಸೊಸೈಟಿಯ ಅಧ್ಯಕ್ಷರಾದ ಪಿ. ಉಪೇಂದ್ರ ಆಚಾರ್ಯರ ಅಧ್ಯಕ್ಷತೆಯಲ್ಲಿ ನೆರವೇರಿತು. ನಿವೃತ್ತಿ ಎಂಬುದು ವೃತ್ತಿಗಷ್ಟೇ ವಿನಃ ಪ್ರವೃತ್ತಿಗಲ್ಲ ಎಂಬ ಮಾತಿನೊಂದಿಗೆ […]