ಎಲೆಕ್ಟ್ರಿಕ್ ಕಾರು ಆಮದು ಸುಂಕ ಶೇ.‌15ಕ್ಕೆ ಇಳಿಕೆ.

ನವದೆಹಲಿ: ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯನ್ನು ಉತ್ತೇಜಿ ಸುವ ಯೋಜನೆಯಡಿಯಲ್ಲಿ ಎಚ್‌. ಡಿ. ಕುಮಾರಸ್ವಾಮಿ ಸಚಿವರಾಗಿರುವ ಕೇಂದ್ರ ಬೃಹತ್‌ ಕೈಗಾರಿಕಾ ಸಚಿವಾ ಲಯ ಸೋಮವಾರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ‘ಕಂಪೆನಿಗಳು ಸ್ಥಳೀಯ ಉತ್ಪಾ ದನಾ ಸೌಲಭ್ಯಗಳನ್ನು ಸ್ಥಾಪಿಸಲು 4,150 ಕೋಟಿ ರೂ. ಹೂಡಿಕೆ ಮಾಡಿದರೆ, ಅವರಿಗೆ ವಾರ್ಷಿಕವಾಗಿ 8,000 ಎಲೆಕ್ಟ್ರಿಕ್ ಕಾರ್‌ಗಳನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗುವುದು. ಅರ್ಜಿ ಅನುಮೋದನೆ ದಿನಾಂಕದಿಂದ 5 ವರ್ಷಗಳ ಅವಧಿಗೆ, ಪ್ರಸ್ತುತ ಇರುವ ಶೇ.70-100 ಆಮದು ಸುಂಕದ ಬದಲಿಗೆ ಕೇವಲ ಶೇ.15ರಷ್ಟು ಕಡಿಮೆ […]

ಯಕ್ಷಧ್ರುವ ಪಟ್ಲ ಫೌಂಡೇಶನ್ ಯಕ್ಷಗಾನ ಸ್ಪರ್ಧೆ: ಆಳ್ವಾಸ್ ಧೀಂಕಿಟ ಕೇಂದ್ರ ಪ್ರಥಮ ಒಂದು ಲಕ್ಷ ಬಹುಮಾನ ಪಡೆದ ತಂಡ

ಮೂಡುಬಿದಿರೆ: ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.) ಇದರ ದಶಮ ಸಂಭ್ರಮದ ಪ್ರಯುಕ್ತ ಮಂಗಳೂರಿನ ಅಡ್ಯಾರ್ ಗಾರ್ಡ್ನಲ್ಲಿ 15 ವರ್ಷದಿಂದ 25 ವರ್ಷದೊಳಗಿನ ಯುವ ಪ್ರತಿಭೆಗಳಿಗಾಗಿ ಏರ್ಪಡಿಸಿದ ಯಕ್ಷಗಾನ ಸ್ಪರ್ಧೆಯಲ್ಲಿ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ತಂಡವು ಪ್ರಥಮ ಬಹುಮಾನವನ್ನು ಪಡೆಯಿತು. ಬೊಟ್ಟಿಕೆರೆ ಪುರುಷೋತ್ತಮ ಪೂಂಜರು ವಿರಚಿಸಿದ, ಶೇಖರ ಶೆಟ್ಟಿಗಾರ್ ಮತ್ತು ಆದಿತ್ಯ ಅಂಬಲಪಾಡಿ ನಿರ್ದೇಶನದಲ್ಲಿ ‘ಸತಿ ಉಲೂಪಿ’ ಪ್ರಸಂಗ ಪ್ರದರ್ಶನವನ್ನು ನೀಡಿ, ಒಂದು ಲಕ್ಷ ರೂಪಾಯಿ ಹಾಗೂ ಸ್ಮರಣಿಕೆಯನ್ನು ಒಳಗೊಂಡ ಪ್ರಥಮ ಬಹುಮಾನವನ್ನು ಆಳ್ವಾಸ್ ಧೀಂಕಿಟ […]

ಮಣಿಪುರ ಪ್ರವಾಹ: 10 ಸಾವಿರ ಮನೆಗಳಿಗೆ ಹಾನಿ, 56 ಸಾವಿರ ಜನರಿಗೆ ಸಂಕಷ್ಟ; ಹಲವು ಪ್ರದೇಶಗಳು ಜಲಾವೃತ.

ಇಂಫಾಲ: ಮಣಿಪುರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ನದಿಗಳ ಉಕ್ಕಿ ಹರಿಯುತ್ತಿದ್ದು, ಒಡ್ಡುಗಳು ಒಡೆದು ಹಠಾತ್‌ ಪ್ರವಾಹ ಸಂಭವಿಸಿದೆ. ಪರಿಣಾಮ 56 ಸಾವಿರಕ್ಕೂ ಹೆಚ್ಚು ಜನರು ಸಂಕಷ್ಟಕ್ಕೀಡಾಗಿದ್ದು, 10,477 ಮನೆಗಳು ಹಾನಿಗೀಡಾಗಿವೆ ಎಂದು ಸರ್ಕಾರ ಮಂಗಳವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಪ್ರವಾಹದಿಂದ ಒಟ್ಟು 56,516 174 ಜನರು ತೊಂದರೆಗೀಡಾಗಿದ್ದಾರೆ. ಪ್ರವಾಹ ಪೀಡಿತ ಪ್ರದೇಶದಿಂದ 2,913 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಸೋಮವಾರ ವ್ಯಕ್ತಿಯೊಬ್ಬರು ಇಂಫಾಲದ ಪೂರ್ವ ಜಿಲ್ಲೆಯಲ್ಲಿ ನದಿಯಲ್ಲಿ ಕೊಚ್ಚಿ ಹೋಗಿ ಕಾಣೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. […]

ಉಡುಪಿ: ಆತ್ರಾಡಿ ರಿಕ್ಷಾ ಚಾಲಕನಿಗೆ ಹಲ್ಲೆ ಪ್ರಕರಣ; ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು.

ಉಡುಪಿ: ಅತ್ರಾಡಿ ಶೇಡಿಗುಡ್ಡೆ ಬಳಿ ರಿಕ್ಷಾ ಚಾಲಕನಿಗೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆತ್ರಾಡಿ ನಿವಾಸಿ ಅಬೂಬಕ್ಕರ್‌ (50) ಅವರನ್ನು ಆರೋಪಿಗಳಾದ ಹಿರಿಯಡಕ ಬೊಮ್ಮಾರಬೆಟ್ಟು ನಿವಾಸಿ ಸಂದೇಶ್‌ (31) ಹಾಗೂ ಪಾಪೂಜೆ ದರ್ಕಾಸ್‌ ನಿವಾಸಿ ಸುಶಾಂತ್‌ (32) ಅವರು ದ್ವಿಚಕ್ರವಾಹನದಲ್ಲಿ ಆಗಮಿಸಿ ಮೇ 1ರಂದು ರಾತ್ರಿ ಹಲ್ಲೆ ನಡೆಸಿದ್ದರು. ಈ ಬಗ್ಗೆ ಹಿರಿಯಡಕ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಪೊಲೀಸರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದು, ಅನಂತರ […]

ಕಾರ್ಕಳ: ಜೆ.ಇ.ಇ ಅಡ್ವಾನ್ಸ್ಡ್ 2025 ಫಲಿತಾಂಶ: ಕೆ.ಸಿ.ಇ.ಟಿ. ಇಂಜಿನಿಯರಿಂಗ್ ನಲ್ಲಿ ರಾಜ್ಯಕ್ಕೆ 6 ನೇ ರ‍್ಯಾಂಕ್ ಪಡೆದ ತರುಣ್ ಸುರಾನಾನಿಗೆ ರಾಷ್ಟ್ರ ಮಟ್ಟದಲ್ಲಿ ಜನರಲ್ ಮೆರಿಟ್ ನಲ್ಲಿ 2403 ನೇ ರ‍್ಯಾಂಕ್

ಗಣಿತನಗರ:ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಪ್ರವೇಶಾತಿಗಾಗಿ ನಡೆಸಲಾಗುವ ಜೆ.ಇ.ಇ.ಅಡ್ವನ್ಸ್ಡ್ 2025ರ ಫಲಿತಾಂಶದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಐವರು ವಿದ್ಯಾರ್ಥಿಗಳು ಹತ್ತು ಸಾವಿರದ ಒಳಗಿನ ರ‍್ಯಾಂಕ್ ಗಳಿಸಿದ್ದಾರೆ. ಜನರಲ್ ಮೆರಿಟ್ ನಲ್ಲಿ ತರುಣ್ ಎ.ಸುರಾನಾ (2403) (ಕೆಟಗರಿಯಲ್ಲಿ 429 ರ‍್ಯಾಂಕ್),ಮನೋಜ್ ಕಾಮತ್( 3911 ) (ಜನರಲ್ ಇ.ಡಬ್ಲು.ಎಸ್ 39 ರ‍್ಯಾಂಕ್). ಆಕಾಶ್ಪ್ರಭು (5105 ), ಚಿಂತನ್ ಮೇಗಾವತ್ (6375 )(ಕೆಟಗರಿಯಲ್ಲ್ಲಿ142 ರ‍್ಯಾಂಕ್),ವಿಷ್ಣು ಧರ್ಮಪ್ರಕಾಶ್(8565) ರ‍್ಯಾಂಕ್ ಗಳಿಸಿದ್ದಾರೆ. ಒಟ್ಟು ಹನ್ನೆರಡು ವಿದ್ಯಾರ್ಥಿಗಳು ಐ.ಐ.ಟಿ ಪ್ರವೇಶಕ್ಕೆ ಅರ್ಹತೆ ಗಳಿಸಿದ್ದಾರೆ.ಸಾಧಕ ವಿದ್ಯಾರ್ಥಿಗಳನ್ನು ಎ.ಪಿ.ಜಿ.ಇ.ಟಿ ಯ ಅಧ್ಯಕ್ಷರಾದ […]