ಉಡುಪಿಯಲ್ಲಿ 3BHK ಫ್ಲ್ಯಾಟ್ ಬಾಡಿಗೆಗೆ ಇದೆ

ಉಡುಪಿ: ಸಂಪೂರ್ಣವಾಗಿ ಸಜ್ಜುಗೊಳಿಸಲಾದ 3BHK ಫ್ಲ್ಯಾಟ್ ಬಾಡಿಗೆಗೆ ಇದೆ. 3 ಬೆಡ್ರೂಮ್, 3 ಬಾತ್ರೂಮ್, ಕಾರ್ ಪಾರ್ಕಿಂಗ್, ಏರ್ ಕಂಡಿಷನ್ (ಎಸಿ), ಹೋಂ ಥಿಯೇಟರ್ ಈ ಎಲ್ಲ ಸೌಲಭ್ಯಗಳಿವೆ. ಬಾಡಿಗೆ ಒಂದು ತಿಂಗಳಿಗೆ 30,000/-. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8618629503 ಸ್ಥಳ: ಬ್ರಹ್ಮಗಿರಿ, ಉಡುಪಿ
ಉಡುಪಿ:ವ್ಯಕ್ತಿ ನಾಪತ್ತೆ

ಉಡುಪಿ: ಕಳೆದ ಎರಡು ವರ್ಷಗಳಿಂದ ಉಡುಪಿ ಶ್ರೀಕೃಷ್ಣಮಠದಲ್ಲಿ ಕೆಲಸ ಮಾಡಿಕೊಂಡು, ಬಡಗುಮಾಳಿಗೆಯ ಸಿಬ್ಬಂದಿಯವರ ವಸತಿ ಗೃಹದಲ್ಲಿ ಉಳಿದುಕೊಳ್ಳುತ್ತಿದ್ದ ಹರೀಂದ್ರ ಯು ಆರ್ (48) ಎಂಬ ವ್ಯಕ್ತಿಯು ಮೇ 8 ರಿಂದ ನಾಪತ್ತೆಯಾಗಿರುತ್ತಾರೆ.5 ಅಡಿ 7 ಇಂಚು ಎತ್ತರ, ಅರ್ಧಬೊಕ್ಕ ತಲೆ, ಕೃಷಕಾಯ ಹೊಂದಿದ್ದು, ಕನ್ನಡ, ತುಳು ಹಾಗೂ ಇಂಗ್ಲೀಷ್ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣಾಧಿಕಾರಿಗಳನ್ನು ಸಂಪರ್ಕಿಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ತಮಿಳು ನಟ ಕಮಲ್ ಹಾಸನ್ ಕೂಡಲೇ ತನ್ನ ಮಾತುಗಳನ್ನು ಹಿಂಪಡೆದುಕೊಂಡು ಕನ್ನಡಿಗರ ಕ್ಷಮೆಯಾಚಿಸಲಿ: ಅನ್ಸಾರ್ ಅಹಮದ್ ಉಡುಪಿ

ಉಡುಪಿ: ತಮಿಳು ನಟ ಕಮಲ್ ಹಾಸನ್ ಥಗ್ ಲೈಫ್ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ “ನಿಮ್ಮ ಕನ್ನಡ ನಮ್ಮ ತಮಿಳಿನಿಂದ ಹುಟ್ಟಿದ್ದು ” ಎಂಬ ಹೇಳಿಕೆ ನೀಡಿದ್ದು, ಈ ಹೇಳಿಕೆ ಕೋಟ್ಯಾಂತರ ಕನ್ನಡಿಗರ ತಾಳ್ಮೆಯನ್ನು ಪರೀಕ್ಷಿಸುವಂತಿದೆ. ಓರ್ವ ಜವಾಬ್ದಾರಿಯುತ ನಟನಿಗೆ ಈ ರೀತಿಯ ಹೇಳಿಕೆಗಳು ಶೋಭೆ ತರುವಂತದ್ದಲ್ಲ, ನಟ ಕಮಲ್ ಹಾಸನ್ ಕೂಡಲೇ ತನ್ನ ಮಾತುಗಳನ್ನು ಹಿಂಪಡೆದುಕೊಂಡು ಕೋಟ್ಯಂತರ ಕನ್ನಡಿಗರ ಕ್ಷಮೆ ಯೋಚಿಸಬೇಕು ಇಲ್ಲವಾದಲ್ಲಿ ಅವರ ಮುಂಬರುವ ಚಿತ್ರ ಥಗ್ ಲೈಫ್ ಚಿತ್ರವನ್ನು ಪ್ರದರ್ಶಿಸಲು ಅನುವು ಮಾಡಿ […]
ಉಡುಪಿ: ಅಭಿಲಾಷ್ಗೆ ಡಾಕ್ಟರೇಟ್ ಪದವಿ

ಉಡುಪಿ : ಮಾಹೆಯ ಮಣಿಪಾಲ್ ಸ್ಕೂಲ್ ಆಫ್ಕಾಮರ್ಸ್ ಆಂಡ್ ಎಕಾನಮಿಕ್ಸ್ನ ಪ್ರಾಧ್ಯಾಪಕ ಡಾ. ಸಂದೀಪ್ ಎಸ್. ಶಣೈ ಮಾರ್ಗದರ್ಶನದಲ್ಲಿ ಮತ್ತು ಎಂಐಟಿಯ ಡಿಪಾರ್ಟ್ಮೆಂಟ್ ಆಫ್ ಡೇಟಾ ಸೈನ್ಸ್ ಆಂಡ್ ಕಂಪ್ಯೂಟರ್ ಅಪ್ಲಿಕೇಶನ್ನ ಸಹಪ್ರಾಧ್ಯಾಪಕ ಡಾ.ದಶರಥರಾಜ್ ಕೆ.ಶೆಟ್ಟಿ ಸಹಮಾರ್ಗದರ್ಶನದಲ್ಲಿ ಅಭಿಲಾಷ್ ಮಂಡಿಸಿದ ‘ದಿ ಗ್ರೀನ್ ಬಾಂಡ್ ಫಿನಾಮಿನನ್:ಫ್ರಮ್ ಇಶ್ಯೂಯನ್ಸ್ ಆಂಡ್ ಪರ್ಫಾಮೆನ್ಸ್ ಟು ಎನ್ವಿರಾನ್ಮೆಂಟಲ್ ಇಂಪಾಕ್ಟ್ ಇನ್ ಏಷ್ಯಾ ಆಂಡ್ ಲ್ಯಾಟಿನ್ ಅಮೇರಿಕಾ’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಾಹೆ ವಿಶ್ವವಿದ್ಯಾನಿಲಯವು ಪಿಎಚ್ಡಿ ಪದವಿ ಪ್ರದಾನ ಮಾಡಿದೆ. ಇವರು ಸುಂದರಿ […]
ಐಪಿಎಲ್ ಪ್ಲೇಆಫ್ ಪಂದ್ಯಗಳು ಮೇ 29 ರಿಂದ ಶುರು.! ವೇಳಾಪಟ್ಟಿ ಇಲ್ಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ನ ಲೀಗ್ ಹಂತದ ಪಂದ್ಯಗಳು ಮುಗಿದಿದ್ದು, 10 ತಂಡಗಳಲ್ಲಿ ಅತ್ಯಧಿಕ ಗೆಲುವು ದಾಖಲಿಸಿದ ನಾಲ್ಕು ತಂಡಗಳು ಮುಂದಿನ ಹಂತಕ್ಕೇರಿದೆ. ಅದರಂತೆ ದ್ವಿತೀಯ ಸುತ್ತಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್, ಗುಜರಾತ್ ಟೈಟಾನ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಕಣಕ್ಕಿಳಿಯಲಿವೆ. ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿರುವ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮೊದಲ ಕ್ವಾಲಿಫೈಯರ್ ಪಂದ್ಯವಾಡಿದರೆ, ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಎಲಿಮಿನೇಟರ್ ಮ್ಯಾಚ್ ಆಡಲಿದೆ. […]