ಮಂಗಳೂರು: ಬೊಂಡಾಲ ಸಚ್ಚಿದಾನಂದ ಶೆಟ್ಟಿಯವರಿಗೆ ಆರ್ಯಭಟ ಪ್ರಶಸ್ತಿ ಪ್ರದಾನ.

ಮಂಗಳೂರು: ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ತನ್ನ 50ನೇ ವರ್ಷಾಚರಣೆ ಸಂದರ್ಭದಲ್ಲಿ ನಾಡು, ಹೊರನಾಡು ಮತ್ತು ವಿದೇಶಗಳಲ್ಲಿರುವ ವಿವಿಧ ಕ್ಷೇತ್ರಗಳ 74 ಮಂದಿ ಸಾಧಕರನ್ನು ಗುರುತಿಸಿ ಈ ಬಾರಿಯ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯನ್ನು ನೀಡಿದೆ. ಮೇ 22ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಜರಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಖ್ಯಾತ ಉದ್ಯಮಿ, ಸಾಮಾಜಿಕ ಮತ್ತು ಶಿಕ್ಷಣ ಕ್ಷೇತ್ರದ ಸಾಧಕ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅವರು 2025 ಸಾಲಿನ ಆರ್ಯಭಟ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಬೊಂಡಾಲ ಸರಕಾರಿ […]
ತುಳುನಾಡಿನಲ್ಲಿ “ಕಾಲೆಕೋಲ” ಎಂಬ ವಿಶಿಷ್ಟ ಸಂಪ್ರದಾಯ

ಉಡುಪಿ: ತುಳುನಾಡಿನಲ್ಲಿ ಕುಟುಂಬದ ಹಿರಿಯರು ತೀರಿ ಹೋದಾಗ ಅಪರೂಪದ ಕಾಲೆಕೋಲ ಎಂಬ ಸಂಪ್ರದಾಯ ನಡೆಸಲಾಗುತ್ತದೆ. ಕುಟುಂಬವನ್ನು ಬಿಟ್ಟು ಹೋಗಲು ಒಪ್ಪದ ಪ್ರೇತವನ್ನು ಬಗೆ ಬಗೆಯಾಗಿ ಒಪ್ಪಿಸಿ ಬಿಳ್ಕೊಡುವ ಆಚರಣೆ ಇದಾಗಿದೆ. ಮೈ ಮೇಲೆ ಕಪ್ಪುಬಣ್ಣ ಧರಿಸಿದ ವೇಷದಾರಿಯು ಮೃತರಾದ ಹಿರಿಯ ಜೀವದ ಪಾತ್ರ ನಿರ್ವಹಿಸುತ್ತಾರೆ. ಕುಟುಂಬದೊಂದಿನ ಬಾಂಧವ್ಯವನ್ನು ಸಂಕೇತಿಸುವ ಅನೇಕ ಆಚರಣೆಗಳು ನಡೆಯುತ್ತದೆ. ಇತ್ತೀಚೆಗೆ ಉಡುಪಿಯ ಅಲೆವೂರಿನಲ್ಲಿ ನಿಧನರಾದ ಹಿರಿಯ ಜೀವ ನಾಗಸ್ವರ ಕಲಾವಿದ ಬೊಗ್ರ ಸೇರಿಗಾರರನ್ನು ಇಹ ಲೋಕದಿಂದ ಬೀಳ್ಕೊಡುವ ಕಾಲೆ ಕೋಲ ನಡೆಯಿತು. ಬೊಗ್ರ […]
ಕಾರ್ಕಳ:ಜೆಇಇ ಮೈನ್ (ಬಿ.ಆರ್ಕ್/ಬಿ.ಪ್ಲಾನಿಂಗ್) ಅಂತಿಮ ಫಲಿತಾಂಶ

ಗಣಿತನಗರ : ರಾಷ್ಟ್ರ ಮಟ್ಟದಲ್ಲಿ ಎನ್.ಟಿ.ಎ ನಡೆಸುವ ಜೆಇಇಮೈನ್.ಬಿ.ಆರ್ಕ್ ಮತ್ತು ಬಿ.ಪ್ಲಾನಿಂಗ್ ನ ಅಂತಿಮ ಫಲಿತಾಂಶದಲ್ಲಿ, ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಕೆ.ಮನೋಜ್ ಕಾಮತ್ ಬಿ.ಪ್ಲಾನಿಂಗ್ ವಿಭಾಗದಲ್ಲಿ 99.9855627 ಪರ್ಸಂಟೈಲ್ ಪಡೆದು ಜನರಲ್ವಿಭಾಗದಲ್ಲಿ ೬ನೇ ಹಾಗೂ ಇ.ಡಬ್ಲು.ಎಸ್ ವರ್ಗದಲ್ಲಿ 1ನೇ ರ‍್ಯಾಂಕ್ ಮತ್ತು ಬಿ.ಆರ್ಕ್ ವಿಭಾಗದಲ್ಲಿ 99.8881752 ಪರ್ಸಂಟೈಲ್ (ಗಣಿತಶಾಸ್ತ್ರದಲ್ಲಿ 100 ಪರ್ಸಂಟೈಲ್) ಪಡೆದು ಇ.ಡಬ್ಲು.ಎಸ್. ವರ್ಗದಲ್ಲಿ 6ನೇ ಮತ್ತು ಜನರಲ್ ಮೆರಿಟ್ ವಿಭಾಗದಲ್ಲಿ 83 ನೇ ರ‍್ಯಾಂಕನ್ನು ಪಡೆದಿರುತ್ತಾರೆ. ಬಿ.ಆರ್ಕ್ ವಿಭಾಗದಲ್ಲಿ ಚಿಂತನ್ ಮೆಘವತ್ 99.9741943 […]
ಮಲ್ಪೆ: ಮೇ.25 ರಂದು ‘ಮಲ್ಪೆ ಫುಡ್ ಸ್ಟ್ರೀಟ್ ಉತ್ಸವ’

ಉಡುಪಿ: ಉಡುಪಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್, ಮಣಿಪಾಲ ಇವರ ಸಹಯೋಗದೊಂದಿಗೆ ನಾಳೆ (ಮೇ.25) ಭಾನುವಾರ ಸಂಜೆ 4.30 ರಿಂದ “ಮಲ್ಪೆ ಫುಡ್ ಸ್ಟ್ರೀಟ್ ಉತ್ಸವ” ಮಲ್ಪೆ ಮೀನು ವ್ಯಾಪಾರ ಕೇಂದ್ರದ ಹತ್ತಿರ ನಡೆಯಲಿದೆ. ನೇರ ಪ್ರದರ್ಶನಗಳು, ರುಚಿಕರವಾದ ಆಹಾರ, ಸಂಗೀತ ಆಟಗಳು, ರೋಮಾಂಚಕಾರಿ ಬಹುಮಾನಗಳು ಅನಿಯಮಿತ ಮೋಜು ಹಾಗೂ ಫ್ಯಾಷನ್ ಶೋ ನಡೆಯಲಿದೆ. ಸಂಪರ್ಕಿಸಿ: 99017 71742, 9916281211
ಸಿಇಟಿ ಫಲಿತಾಂಶ ಪ್ರಕಟ.

ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಇಟಿ) ಫಲಿತಾಂಶ ಇಂದು ಪ್ರಕಟವಾಗಿದೆ. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಅವರು ಫಲಿತಾಂಶ ಪ್ರಕಟಿಸಿದ್ದಾರೆ. ಏ.16ರಂದು ಭೌತ ವಿಜ್ಞಾನ ಮತ್ತು ರಸಾಯನ ವಿಜ್ಞಾನ, ಏ.17ರಂದು ಗಣಿತ ಮತ್ತು ಜೀವ ವಿಜ್ಞಾನ ವಿಷಯಗಳ ಪರೀಕ್ಷೆಗಳನ್ನು 775 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. ದ್ವಿತೀಯ ಪಿಯು ಪರೀಕ್ಷೆ–1 ಮತ್ತು ಪರೀಕ್ಷೆ–2, ಸಿಬಿಎಸ್‌ಇ, ಐಸಿಎಸ್‌ಇ ಫಲಿತಾಂಶ ಪ್ರಕಟವಾಗಿದ್ದು, ಅಭ್ಯರ್ಥಿಗಳು ಪಡೆದ […]