MSDC ಓರೇನ್ ಇಂಟರ್ನ್ಯಾಷನಲ್’ನಲ್ಲಿ ವೃತ್ತಿಪರ ಸ್ಪಾ ಥೆರಪಿ ಕೋರ್ಸ್ ಪ್ರಾರಂಭ.

ಮಣಿಪಾಲ: ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರ, ಓರೇನ್ ಇಂಟರ್ನ್ಯಾಷನಲ್’ನಲ್ಲಿ ವೃತ್ತಿಪರ ಸ್ಪಾ ಥೆರಪಿ ಕೌಶಲ್ಯಗಳನ್ನು ಕಲಿಯಲು ಬಯಸುತ್ತೀರಾ? ಹಾಗಾದರೆ ನೀವು ಎಂಎಸ್‌ಡಿಸಿಯಲ್ಲಿ ವೃತ್ತಿಪರ ಸ್ಪಾ ಥೆರಪಿ ಕೋರ್ಸ್‌ಗೆ ಸೇರಿಕೊಳ್ಳಬಹುದು. Highlights:☑️Comprehensive training☑️Hands on practical sessions☑️Expert faculty and mentors☑️Anatomy & physicology Basics☑️career support and placements ಸಂಪರ್ಕಿಸಿ:81231650688123163935
ಉಡುಪಿ: ಗಾಂಜಾ ಪ್ರಕರಣಗಳಲ್ಲಿ ಪದೇ ಪದೇ ಭಾಗಿ; ಇಬ್ಬರು ಆರೋಪಿಗಳ ಬಂಧನ

ಉಡುಪಿ: ಗಾಂಜಾ ಪ್ರಕರಣಗಳಲ್ಲಿ ಪದೇ ಪದೇ ಭಾಗಿಯಾಗಿರುವ ಇಬ್ಬರು ಆರೋಪಿಗಳನ್ನು ಪಿಟ್ ಎನ್.ಡಿ.ಪಿ.ಎಸ್ ಕಾಯಿದೆ ಅಡಿಯಲ್ಲಿ ಬಂಧಿಸಲಾಗಿದೆ. ಬಂಧಿತರನ್ನು ಉಪ್ಪೂರು ಗ್ರಾಮದ ಕೊಳಲಗಿರಿಯ ಕೃಷ್ಣ ಆಚಾರಿ ಯಾನೆ ಕೃಷ್ಣ(43) ಹಾಗೂ ಕೇಳಾರ್ಕಳಬೆಟ್ಟುವಿನ ಅಬ್ದುಲ್ ಜಬ್ಬಾರ್ (27) ಎಂದು ಗುರುತಿಸಲಾಗಿದೆ. ಇವರ ಮೇಲೆ ಜಿಲ್ಲೆಯ ಹಲವು ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದೆ. ಇವರನ್ನು ಕೇಂದ್ರ ಕಾರಾಗೃಹ ಧಾರವಾಡಕ್ಕೆ ಕಳುಹಿಸಿ ಬಂಧನದಲ್ಲಿ ಇಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಮಾದಕ ವಸ್ತು ಗಾಂಜಾ ಸಾಗಾಟ ಮತ್ತು ಮಾರಾಟ ಮಾಡುತ್ತಿರುವ ಆರೋಪಿಗಳ ಬಗ್ಗೆ ಕಡಿವಾಣ ಹಾಕಲು […]
ಉಡುಪಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ

ಉಡುಪಿ: ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಉಡುಪಿ ಸೆನ್ ಪೊಲೀಸರು ಬಂಧಿಸಿದ್ದಾರೆ.ಬಿಹಾರದ ಬ್ರಹಂದೇವ್ ಯಾದವ್(37) ಬಂಧಿತ ಆರೋಪಿ. ಈತನನ್ನು ಮಣಿಪಾಲ ರೈಲ್ವೆ ನಿಲ್ದಾಣ ರಸ್ತೆಯಲ್ಲಿನ ಡಯಾನಾ ಟಾಕೀಸ್ ರಸ್ತೆಯ ಕ್ರಾಸ್ ಬಳಿ ಬಂಧಿಸಿ, 690 ಗ್ರಾಂ ಗಾಂಜಾ, ಮೊಬೈಲ್ ಪೋನ್, 680ರೂ. ಮತ್ತು ಇತರೆ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 68,680 ರೂ. ಎಂದು ಅಂದಾಜಿಸಲಾಗಿದೆ.
ಉಡುಪಿ:ವಿಕಲಚೇತನರಿಗೆ ಸಾಧನ ಸಲಕರಣೆ ವಿತರಣೆ : ಅರ್ಜಿ ಆಹ್ವಾನ

ಉಡುಪಿ: ಉಡುಪಿ ನಗರಸಭೆಯ 2022-23ನೇ ಸಾಲಿನ ಎಸ್.ಎಫ್.ಸಿ. ಮುಕ್ತನಿಧಿಯ ಶೇ.5 ರ ವಿಕಲಚೇತನರ ಕಲ್ಯಾಣಕಾರ್ಯಕ್ರಮದ ಅನುದಾನದಡಿ ಸಾಧನ ಸಲಕರಣೆಗಳನ್ನು ಪಡೆಯಲು ದೈಹಿಕ ವಿಕಲತೆಯ ಬಗ್ಗೆ ಜಿಲ್ಲಾ ಸರ್ಜನ್‌ರವರಿಂದ ಪಡೆದ ಪ್ರಮಾಣ ಪತ್ರ, ಆದಾಯ ದೃಢಪತ್ರ, ಪ್ರಸಕ್ತ ಸಾಲಿನ ಆಸ್ತಿತೆರಿಗೆ ಪಾವತಿ ರಶೀದಿ, ಪಡಿತರ ಚೀಟಿ ಪ್ರತಿ, ಆಧಾರ್‌ಕಾರ್ಡ್ ಪ್ರತಿಯೊಂದಿಗೆ ನಿಗದಿತ ಅರ್ಜಿಯನ್ನು ಮೇ 27 ರ ಒಳಗಾಗಿ ನಗರಸಭೆ ಉಡುಪಿ ಕಚೇರಿಗೆ ಸಲ್ಲಿಸುವಂತೆ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
ಉಡುಪಿ:ಪ್ರತಿಯೊಂದು ಕ್ಷೇತ್ರದಲ್ಲಿ ಕಾರಂತರ ಬರವಣಿಗೆ ಅಪೂರ್ವ : ಡಾ. ಗಣನಾಥ ಶೆಟ್ಟಿ ಎಕ್ಕಾರು

ಉಡುಪಿ: ಡಾ. ಶಿವರಾಮ ಕಾರಂತರು ವೈಚಾರಿಕತೆ ಹಾಗೂ ವೈಜ್ಞಾನಿಕ ಪ್ರಜ್ಞೆಯನ್ನು ತಮ್ಮ ಕೃತಿಗಳ ಮೂಲಕಮುಂದುವರಿಸಿಕೊಂಡು ಹೋಗುವ ಕಾರ್ಯವನ್ನು ಮಾಡಿದ್ದು, ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಹ ಕಾರಂತರರ ಬರವಣಿಗೆಅಪೂರ್ವವಾಗಿದೆ ಎಂದು ಡಾ.ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಶೆಟ್ಟಿ ಎಕ್ಕಾರು ಹೇಳಿದರು. ಅವರು ಬುಧವಾರ ಬಾರಕೂರಿನ ಶ್ರೀಮತಿ ರುಕ್ಮಿಣಿ ಶೆಡ್ತಿ ನ್ಯಾಷನಲ್ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಡಾ. ಶಿವರಾಮ ಕಾರಂತ ಟ್ರಸ್ಟ್ ಇವರಿಂದ ಶ್ರೀಮತಿ ರುಕ್ಮಿಣಿ ಶೆಡ್ತಿ ನ್ಯಾಷನಲ್ ಪ್ರಥಮ ದರ್ಜೆ ಕಾಲೇಜು ಹಾಗೂ […]