ಉಡುಪಿ: ಕರಾವಳಿಯಲ್ಲಿ ಶುರುವಾಯ್ತು ‘ಉಬರ್ ಮೀನು’ಗಳ ಭರ್ಜರಿ ಶಿಕಾರಿ…!

ಉಡುಪಿ: ಸಮುದ್ರ, ನದಿ ಬದಿ, ಕೆರೆಯಲ್ಲಿ ಫಿಶಿಂಗ್ ಮಾಡೋದನ್ನ ನೋಡಿದ್ದೇವೆ. ಗದ್ದೆಯಲ್ಲಿ ಬರಪೂರ ಮೀನುಗಳು ಸಿಗೋದನ್ನ ಎಲ್ಲಾದರೂ ನೋಡಿದ್ದೀರಾ? ಮೊದಲ ಮಳೆ ಬಿದ್ದೊಡನೆ ಕರಾವಳಿಯಲ್ಲಿ ಉಬರ್ ಮೀನು ಹಿಡಿಯುವ ಸಂಪ್ರದಾಯವಿದೆ. ಮೊದಲ ಮಳೆಗೆ ಹಳ್ಳಕೊಳ್ಳ, ಕಾಲುವೆಗಳು ಉಕ್ಕಿ ಹರಿಯುತ್ತದೆ. ಈ ಸಂದರ್ಭ ಮೀನುಗಳೆಲ್ಲ ನೀರಿನಲ್ಲಿ ಈಜುತ್ತ ಗದ್ದೆಗೆ ಇಳಿಯುತ್ತದೆ. ಗದ್ದೆಗಿಳಿದ ಮೀನನ್ನು ರಾತ್ರಿ ಟಾರ್ಚ್ ಲೈಟ್ ಗಳನ್ನು ಬಳಸಿ ಮೀನುಗಳನ್ನು ಹಿಡಿಯಲಾಗುತ್ತದೆ. ಉಡುಪಿಯ ಕಾಪು ಕುರ್ಕಾಲು ಪರಿಸರದಲ್ಲಿ ಕಳೆದ ರಾತ್ರಿ ಭಾರಿ ಗಾತ್ರದ ಮುಗುಡು ಮೀನುಗಳು ಸಿಕ್ಕಿವೆ. […]
ಮಂಗಳೂರು ಮತ್ತು ಮಣಿಪಾಲದ ಪ್ರಸಿದ್ಧ ಪೆಟ್ರೋಲಿಯಂ ಮತ್ತು MNC ಕಂಪೆನಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ.

ಉಡುಪಿ: ಮಣಿಪಾಲ ಮತ್ತು ಮಂಗಳೂರಿನ ಹೆಸರಾಂತ ಪೆಟ್ರೋಲಿಯಂ ಮತ್ತು MNC ಕಂಪನಿಯಲ್ಲಿ ತಕ್ಷಣ ಕೆಲಸಕ್ಕೆ ಜನ ಬೇಕಾಗಿದ್ದಾರೆ. ಹುದ್ದೆಗಳು: ◼ ಟೆಕ್ನಿಷಿಯನ್ (ITI /Diploma)- 70 post ◼ ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್ (PUC/Degree)- 60 post ◼ ಸೂಪರ್ವೈಸರ್ -12 post ◼ ಅಡ್ಮಿನ್ ಎಕ್ಸಿಕ್ಯೂಟಿವ್ – 10 post (Degree) ◼ ಪ್ಯಾಕಿಂಗ್ -50 post PF, ESI ಸೌಲಭ್ಯದೊಂದಿಗೆ ಆಕರ್ಷಕ ವೇತನ. ಅನುಭವ ಇಲ್ಲದವರು ಕೂಡ ಅರ್ಜಿ ಸಲ್ಲಿಸಬಹುದು.ಆಸಕ್ತ ಅಭ್ಯರ್ಥಿಗಳು ಕೂಡಲೇ ಸಂಪರ್ಕಿಸಿ: […]
ಉಡುಪಿ:ಕುತ್ಯಾರು ಶ್ರೀ ಮೂಲದ ಬೆಟ್ಟು ಮೊಗೇರ ನಾಗಬನ ವಾರ್ಷಿಕ ನಾಗಾರಾಧನೆ, ಹಾಗೂ ಅನ್ನಸಂತರ್ಪಣೆ.

ಉಡುಪಿ:ಮೊಗೇರ ಜನಾಂಗದ ಕುಲದೈವಗಳಾದ ಮುದ್ದ ಕಳಲ ತನ್ನಿ ಮಾನಿಗ ಜನ್ಮಸ್ಥಳ ಕಾಪು ತಾಲೂಕು ಕುತ್ಯಾರು ಮೂಲ್ದೊಟ್ಟು ಮುಗೇರ ನಾಗಬನದಲ್ಲಿ ವಾರ್ಷಿಕ ನಾಗರಾಧನೆ, ಅನ್ನಸಂತರ್ಪಣೆ ತಾ. 22.5.2025 ರಂದು ಮೊಗೇರ ಸಮಾಜದ ಗುರಿಕಾರರಾದ ಉದಯ್ ಶಿರ್ವ , ರಂಜಿತ್ ಶಿರ್ವ, ಸಂದೇಶ್ ಶಿರ್ವ ಹಾಗೂ ಮೊಗೆರ ಸಮಾಜದ ಇತರ ಸದಸ್ಯರ ನೇತೃತ್ವದಲ್ಲಿ ನಡೆಯಿತು. ಮೂಲ್ದೊಟ್ಟು ಈ ಪ್ರದೇಶ ಒಂದು ಕಾಲದಲ್ಲಿ ಅರಣ್ಯ ಪ್ರದೇಶವಾಗಿತ್ತು. ತುಳುನಾಡಿನ ಮೂಲನಿವಾಸಿಗಳಾದ ಮೊಗೇರರ ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದರು. ಮೊಗೇರರ ಬನ (ವನ) ಮೂಲ್ದೊಟ್ಟು ಬನ. […]
ರಾಷ್ಟ್ರಪತಿಯಿಂದ 6 ಕೀರ್ತಿಚಕ್ರ, 33 ಶೌರ್ಯ ಚಕ್ರ ಪ್ರಶಸ್ತಿ ಪ್ರಧಾನ

ನವದೆಹಲಿ: ಅದಮ್ಯ ಧೈರ್ಯ ಮತ್ತು ಅಸಾಧಾರಣ ಶೌರ್ಯವನ್ನು ಪ್ರದರ್ಶಿಸಿದ್ದ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಿಬ್ಬಂದಿಗೆ ಆರು ಕೀರ್ತಿ ಚಕ್ರಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಗುರುವಾರ ಪ್ರದಾನ ಮಾಡಿದರು. ಕೀರ್ತಿ ಚಕ್ರವು ಭಾರತದ ಎರಡನೇ ಅತ್ಯುನ್ನತ ಶಾಂತಿ ಶೌರ್ಯ ಪ್ರಶಸ್ತಿಯಾಗಿದೆ. ಸರ್ಕಾರ ಹಂಚಿಕೊಂಡಿರುವ ಪ್ರಶಸ್ತಿ ಪುರಸ್ಕೃತರ ಪಟ್ಟಿಯ ಪ್ರಕಾರ, ಸಿಖ್ ಲೈಟ್ ಇನ್‌ಫೆಂಟ್ರಿಯ ಕರ್ನಲ್ ಮನ್ಪ್ರೀತ್ ಸಿಂಗ್, ರಾಷ್ಟ್ರೀಯ ರೈಫಲ್ಸ್‌ನ ಇತರ ಇಬ್ಬರು ಸೇನಾ ಸಿಬ್ಬಂದಿ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿಗೆ […]
ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಶಿಕ್ಷಕಿ ಗೀತಾ ಎ ಶೆಟ್ಟಿ ಆಯ್ಕೆ

ಉಡುಪಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ಹಾಗೂ ಶಿವಮೊಗ್ಗ ಜಿಲ್ಲಾ ಘಟಕದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ದಿನಾಂಕ 18,19, 20 ನೇ ಮೇ-2025 ರಂದು ಶಿವಮೊಗ್ಗದ ನೆಹರು ಕ್ರೀಡಾಂಗಣ ದಲ್ಲಿ ಜರುಗಿತ್ತು. ಈ ಕ್ರೀಡಾಕೂಟದಲ್ಲಿ ಸರಕಾರಿ ಪ್ರೌಢಶಾಲೆ ವಡ್ಡರ್ಸೆಯ ಕನ್ನಡ ಭಾಷಾ ಶಿಕ್ಷಕಿ ಗೀತಾ ಆನಂದ ಶೆಟ್ಟಿ ಅವರು 100 ಮೀಟರ್ ಮತ್ತು 200 ಮೀಟರ್ ಓಟದಲ್ಲಿ ಚಿನ್ನದ ಪದಕ ವಿಜೇತರಾಗಿ ಮೇಘಾಲಯದಲ್ಲಿ […]