ಉಡುಪಿ: ಮುಂಗಾರು ಪೂರ್ವ ಮಳೆಯಿಂದ ಮೀನುಗಾರಿಕೆಗೆ ಹೊಡೆತ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಮೀನುಗಾರರಿಗೆ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಆಳಸಮುದ್ರಕ್ಕೆ ಹೋಗಿದ್ದ ಭಾರಿ ಗಾತ್ರದ ಬೋಟುಗಳು ಸಾಲು ಸಾಲಾಗಿ ವಾಪಸು ಬರುತ್ತಿವೆ.ಕೆಲವು ಬೋಟುಗಳು ಸಮೀಪದ ಬಂದರುಗಳಲ್ಲೇ ಲಂಗರು ಹಾಕಿವೆ. ಮೇ ತಿಂಗಳ ಅಂತ್ಯದವರೆಗೂ ಮೀನುಗಾರಿಕೆಗೆ ಅವಕಾಶವಿತ್ತು. ಆದರೆ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದೆ. ಜೋರಾಗಿ ಬೀಸುತ್ತಿರುವ ಬಿರುಗಾಳಿಯಿಂದಾಗಿ ಕಡಲು ಪ್ರಕ್ಷುಬ್ದಗೊಂಡಿದ್ದು, ಅಲೆಗಳ ಆರ್ಭಟ ಕೂಡ ಜೋರಾಗಿದೆ. ಹೀಗಾಗಿ ಅವಧಿಗೂ ಮುನ್ನ ಮೀನುಗಾರಿಕಾ ಋತು ದುರಂತ ಅಂತ್ಯ […]
ದೆಹಲಿ ಎನ್ಎಸ್ ಡಿ ವಿದ್ಯಾರ್ಥಿಗಳಿಗೆ ತಿಂಗಳೆಯಲ್ಲಿ ಯಕ್ಷಗಾನ ತರಬೇತಿ

ಉಡುಪಿ: ದೆಹಲಿಯ NSD ವಿದ್ಯಾರ್ಥಿಗಳಿಗೆ ಗುರು ಬನ್ನಂಜೆ ಸಂಜೀವ ಸುವರ್ಣ ರಿಂದ ಯಕ್ಷಗಾನ ತರಬೇತಿ ಶಿಬಿರ ಆರಂಭವಾಗಿದೆ. ಹೆಬ್ರಿ ತಾಲೂಕಿನ ನಾಡ್ಪಾಲು ಗ್ರಾಮದ ತಿಂಗಳೆಯಲ್ಲಿ ತಿಂಗಳೆ ಪ್ರತಿಷ್ಠಾನದ ಸಹಯೋಗದೊಂದಿಗೆ ಈ 11 ದಿನಗಳ ಶಿಬಿರ ನಡೆಯಲಿದೆ. ಬುಧವಾರ ಶಿಬಿರಕ್ಕೆ ಉದ್ಯಮಿ ಕೊಲ್ಲಬೆಟ್ಟು ರವೀಂದ್ರ ಶೆಟ್ಟಿ ಚಾಲನೆ ನೀಡಿದರು. ಗುರು ಸಂಜೀವ ಸುವರ್ಣ ಅವರಲ್ಲಿ ಯಕ್ಷಗಾನ ತರಬೇತಿ ಪಡೆಯುವುದೇ ಪೂರ್ವ ಜನ್ಮದ ಸುಕೃತ ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುರು ಬನ್ನಂಜೆ ಸಂಜೀವ ಸುವರ್ಣ ಮಾತನಾಡಿ, […]
ಗದ್ದುಗೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿಯ ಭಜನಾ ಉತ್ಸವ ಸಂಪನ್ನ

ಉಡುಪಿ: ಗದ್ದುಗೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಕೆಮ್ಮಣ್ಣು ಕಡು ನೀಲಾವರ ಇವರ ಪ್ರಥಮ ವರ್ಷದ ಭಜನಾ ಉತ್ಸವ ವಿಜೃಂಭಣೆಯಿಂದ ನಡೆಯಿತು.ಸಂಜೆ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಹೂವಿನ ಪೂಜೆ ನಡೆದ ಬಳಿಕ ಆರು ಭಜನಾ ತಂಡಗಳ ಕುಣಿತ ಭಜನೆ ದೇವಸ್ಥಾನದ ಸಭಾಂಗಣದಲ್ಲಿ ಜರುಗಿತು. ವಿಶೇಷವಾಗಿ ಚಂಡೆ ಕುಣಿತ ಭಜನೆ ನಡೆಯಿತು. ಈ ಸಂದರ್ಭದಲ್ಲಿ ಗದ್ದುಗೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಅಧ್ಯಕ್ಷರಾದ ಜಯಂತಿ ಜಲಂಧರ ನಾಯಕ್ ಕಾರ್ಯದರ್ಶಿ ಕವಿತಾ ವಾಸುದೇವಾ ನಾಯಕ್ ಕೋಶಾಧಿಕಾರಿ ಇಂದಿರಾ ನರಸಿಂಹ ನಾಯಕ್ […]
ಕುಂದಾಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನಂಜಪ್ಪ ಎನ್. ನಿಧನ

ಉಡುಪಿ: ಕುಂದಾಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನಂಜಪ್ಪ ಎನ್. (59) ಅವರು ಅನಾರೋಗ್ಯದಿಂದ ನಿಧನ ಹೊಂದಿದರು. ಮೂಲತಃ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರಾದ ನಂಜಪ್ಪ ಅವರು, ಕಳೆದ ಆಗಸ್ಟ್ ತಿಂಗಳಿನಿಂದ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಸೋಮವಾರದಂದು ಕರ್ತವ್ಯದಲ್ಲಿರುವಾಗಲೇ ರಕ್ತದೊತ್ತಡದಿಂದ ಬಳಲುತ್ತಿದ್ದ ನಂಜಪ್ಪ ಅವರು ಚಿಕಿತ್ಸೆಗಾಗಿ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನಗಳ ಕಾಲ ಚಿಕಿತ್ಸೆ ಪಡೆದರೂ ಅವರ ಆರೋಗ್ಯದಲ್ಲಿ ಯಾವುದೇ ಗಣನೀಯ ಚೇತರಿಕೆ ಕಂಡುಬಂದಿರಲಿಲ್ಲ. ಬುಧವಾರ ರಾತ್ರಿ ಅವರು ಚಿಕಿತ್ಸೆ ಫಲಕಾರಿಯಾಗದೇ […]
ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ (ರಿ.) ಆಶ್ರಯದಲ್ಲಿ ವಿಪ್ರೋತ್ಸವ 2025

ಉಡುಪಿ: ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನ ವತಿಯಿಂದ ಬ್ರಾಹ್ಮಿ ಸಭಾಭವನ ದಲ್ಲಿ ಸಮಾಜ ಬಾಂಧವರಲ್ಲಿರುವ ಪ್ರತಿಭೆಯನ್ನು ಗುರುತಿಸುವ ನಿಟ್ಟಿನಲ್ಲಿ ಹಾಗೂ ವಿಪ್ರಸಮ್ಮಿಲನಕ್ಕಾಗಿ ವಿಪ್ರೋತ್ಸವ 2025 ನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಮಟ್ಟದ ಜಾನಪದ ನೃತ್ಯ ಸ್ಪರ್ಧೆ ಯನ್ನು ಉಡುಪಿ ಜಿಲ್ಲೆಯ ಎಲ್ಲಾ ತ್ರಿಮತಸ್ಥ ವಿಪ್ರ ಬಾಂಧವರಿಗಾಗಿ 40ವರ್ಷದ ಒಳಗಿನವರಿಗೆ ಹಾಗೂ 40 ವರ್ಷ ಮೇಲ್ಪಟ್ಟು ಈ ಎರಡು ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ಇದರಲ್ಲಿ 15ಕ್ಕೂ ಹೆಚ್ಚು ತಂಡಗಳು ಭಾಗವಹಿಸಿದ್ದು ಈ ಜಾನಪದ ನೃತ್ಯ […]