ಉಡುಪಿ: ಮಳೆಯ ಅವಾಂತರ; ಆತ್ರಾಡಿ ಮದಗದ ರಸ್ತೆಗಳಿಗೆ ಹಾನಿ.

ಉಡುಪಿ: (ಮೇ.20) ಬೆಳಿಗ್ಗೆ ಸುರಿದ ಭಾರಿ ಮಳೆಗೆ ರಾಷ್ಟೀಯ ಹೆದ್ದಾರಿ 169ಎ ಯ ಆತ್ರಾಡಿ ಮದಗದ ಸ್ವಾಗತ ಗೋಪುರದಿಂದ ಪರೀಕಕ್ಕೆ ಹೋಗುವ ರಸ್ತೆಗೆ ಬಹಳ ಹಾನಿಯಾಗಿದ್ದು, ರಸ್ತೆಯ ಅಡಿಪಾಯಕ್ಕೆ ಹಾಕಿರುವ ಮಣ್ಣು ನೀರಲ್ಲಿ ಕೊಚ್ಚಿ ಹೋಗಿದ್ದು ರಸ್ತೆಯು ಯಾವದೇ ಕ್ಷಣದಲ್ಲಿ ಕುಸಿಯಬಹುದಾಗಿದೆ. ರಸ್ತೆಯಲ್ಲಿ ಎಲ್ಲಾ ವಾಹನಗಳ ಸಂಚಾರವನ್ನು ಸ್ಥಗಿತ ಗೊಳಿಸಲಾಗಿದೆ ಸ್ವಾಗತ ಗೋಪುರದ ತಳಪಾಯಕ್ಕೆ ಹಾಕಿರುವ ಮಣ್ಣು ನೀರಲ್ಲಿ ಕೊಚ್ಚಿ ಹೋಗಿರುತ್ತದೆ. ಅಷ್ಟೇ ಅಲ್ಲದೆ ಪಕ್ಕದ ಜಯರಾಮ ಪ್ರಭು ರವರ ಮನೆ ರಸ್ತೆಗೆ ಪೂರ್ತಿ ಹಾನಿಯಾಗಿದೆ ಮತ್ತು […]

ಕಾಪು: ನಡ್ಸಾಲು – ನಡಿಪಟ್ನ ಕಡಲ ತೀರದಲ್ಲಿ ಪ್ರತಿಬಂಧಕ ಕಾಮಗಾರಿ ಭೂಮಿಪೂಜೆ

ಉಡುಪಿ: ಪಡುಬಿದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಡ್ಸಾಲು – ನಡಿಪಟ್ನ ಕಡಲ ತೀರದಲ್ಲಿ 1 ಕೋಟಿ ರೂ. ಮೊತ್ತದಲ್ಲಿ ನಡೆಯಲಿರುವ ರಿಪ್ – ರ‍್ಯಾಪ್ ತುರ್ತು ಪ್ರತಿಬಂಧಕ ಕಾಮಗಾರಿಗೆ ಇಂದು ಭೂಮಿಪೂಜೆ ನೆರವೇರಿಸಲಾಯಿತು. ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ, ಉಪಾಧ್ಯಕ್ಷರಾದ ಹೇಮಚಂದ್ರ, ಗ್ರಾಮ ಪಂಚಾಯತ್ ಸದಸ್ಯರಾದ ವಿದ್ಯಾಶ್ರೀ, ಹರೀಶ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶಶಿಕಾಂತ್ ಪಡುಬಿದ್ರಿ, ಬಂದರು ಮತ್ತು […]

ಮಣಿಪಾಲ: ವಿದ್ಯಾರ್ಥಿ ಆತ್ಮಹತ್ಯೆ

ಮಣಿಪಾಲ: ಮಣಿಪಾಲದ ಸ್ಕೂಲ್ ಆಫ್ ಕಾಮರ್ಸ್ ಎಕೊನೋಮಿಕ್ ಅಕಾಡೆಮಿ ವಿದ್ಯಾರ್ಥಿ ಯೊಬ್ಬ ಅನುತ್ತೀರ್ಣಗೊಂಡ ಚಿಂತೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ವರದಿಯಾಗಿದೆ. ಮೃತರನ್ನು ಛತ್ತಿಸ್‌ಗಡದ ಅನ್ಶುಲ್ ಯಾದವ್ (21) ಎಂದು ಗುರುತಿಸ ಲಾಗಿದೆ. ಇವರು ಬಿಬಿಎ (ಬ್ಯಾಚುಲರ್ ಆಫ್ ಬ್ಯುಸಿನೆಸ್ ಅಕಾಡೆಮಿ) ವ್ಯಾಸಾಂಗ ಮಾಡುತ್ತಿದ್ದು ಮಣಿಪಾಲದ ಎಂಐಟಿ ಹಾಸ್ಟೆಲ್‌ ನಲ್ಲಿ ವಾಸ್ತವ್ಯ ಮಾಡಿಕೊಂಡಿದ್ದರು. ಇವರು ತನ್ನ ಮೊದಲ ವರ್ಷದ ಸೆಕೆಂಡ್ ಸೆಮಿಸ್ಟರ್‌ನಲ್ಲಿ 4 ವಿಷಯ ಗಳಲ್ಲಿ ಅನುತ್ತೀರ್ಣಗೊಂಡ ವಿಚಾರದಲ್ಲಿ ಮನನೊಂದು ಮೇ 12ರಂದು ರಾತ್ರಿಯಿಂದ ಮೇ 18ರ ಬೆಳಗಿನ […]

ಎಸ್ ಕೆ ಗೋಲ್ಡ್ ಸ್ಮಿತ್ ಕೋ-ಆಪರೇಟಿವ್ ಸೊಸೈಟಿ: ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ಮಹಾನಗರ: ಎಸ್‌. ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ಕೋ – ಆಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ ವತಿಯಿಂದ 2024-2025ರ ಸಾಲಿನಲ್ಲಿ ಎಸೆಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಖಡ 75 ಕ್ಕಿಂತ ಹೆಚ್ಚು ಅಂಕ ಗಳಿಸಿದ ‘ಎ’ ವರ್ಗ ಮತ್ತು ‘ಸಿ’ ವರ್ಗದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ವಿದ್ಯಾರ್ಥಿಯವರ ಹೆತ್ತವರು ಮೇ 31, 2024 ರೊಳಗೆ ಸಂಘದ ಸದಸ್ಯರಾಗಿದ್ದಲ್ಲಿ ಮಾತ್ರ ತಮ್ಮ ಹತ್ತಿರದ ಶಾಖೆಯಿಂದ ಅರ್ಜಿ ನಮೂನೆಯನ್ನು ಪಡೆದುಕೊಂಡು ಜೂನ್‌ 30, […]

ಉಡುಪಿ:ಹವಾಮಾನ ಇಲಾಖೆಯಿಂದ ಭಾರಿ ಗಾಳಿ-ಮಳೆ ಮುನ್ಸೂಚನೆ

ಉಡುಪಿ: ಭಾರತೀಯ ಹವಾಮಾನ ಇಲಾಖೆ/ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರುಇವರ ಮುನ್ಸೂಚನೆಯಂತೆ ರಾಜ್ಯದ ಕರಾವಳಿ ಭಾಗದಲ್ಲಿ ಮುಂದಿನ 3 ದಿನಗಳ ಕಾಲ ( ಮೇ 20 ರಿಂದ 23 ವರೆಗೆ) ಜಿಲ್ಲೆಯ ಕೆಲವು ಭಾಗಗಳಲ್ಲಿ ಗುಡುಗು ಸಿಡಿಲಿನೊಂದಿಗೆ ಹೆಚ್ಚಿನ ಗಾಳಿಯಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆಯೆಂದು ಸೂಚಿಸಿದ್ದು, ಈ ಹಿನ್ನೆಲೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ಹಾಗೂ ಅಧಿಕಾರಿಗಳಿಗೆ ಈ ಕೆಳಕಂಡಂತೆ ಸೂಚನೆಗಳನ್ನು ನೀಡಿದೆ. ಕೃಷಿಕರು ಮಳೆ/ಸಿಡಿಲಿನಂತಹ ಸಂದರ್ಭದಲ್ಲಿ ಕೃಷಿ […]