ಇಂದು ಇಸ್ರೋದಿಂದ 101 ನೇ ಉಪಗ್ರಹ ಉಡಾವಣೆ, ಮತ್ತೊಂದು ವಿಕ್ರಮ ಸಾಧಿಸ್ತಿರೋ ಇಸ್ರೋ

ಬೆಂಗಳೂರು: ಈವರೆಗೂ ನೂರಾರು ವಿಕ್ರಮಗಳನ್ನು ಸಾಧಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಈಗ ಮತ್ತೊಂದು ವಿಕ್ರಮಕ್ಕೆ ಸಾಕ್ಷಿಯಾಗಲಿದೆ. ಮೇ ಇಂದು ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ PSLV-C61/EOS-09 ಕಾರ್ಯಾಚರಣೆಯೊಂದಿಗೆ ತನ್ನ 101ನೇ ಉಪಗ್ರಹವನ್ನು ಉಡಾವಣೆ ಮಾಡಲಿದೆ. ಈ ಕಾರ್ಯಾಚರಣೆಯಡಿಯಲ್ಲಿ ವಿಜ್ಞಾನಿಗಳು ಭಾರತದ ಎಲ್ಲಾ ಹವಾಮಾನ ಭೂ ವೀಕ್ಷಣಾ ಸಾಮರ್ಥ್ಯ ಹೊಂದಿರುವ ಉಪಗ್ರಹವನ್ನು ಸೂರ್ಯನ ಸಿಂಕ್ರೊನಸ್ ಧ್ರುವ ಕಕ್ಷೆಯಲ್ಲಿ ಇರಿಸಲಿದ್ದಾರೆ. ಇಂದು ಬೆಳಗ್ಗೆ 5.59ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ಉಪಗ್ರಹ ಉಡಾವಣೆ ನಿಗದಿಯಾಗಿದೆ. […]
ರಾಜ್ಯದ ಸಮುದ್ರ ತೀರಗಳಿಗೆ ಬರುವ ಆಲಿವ್ ರಿಡ್ಲಿ ಆಮೆಗಳಿಗೆ ಜಿಯೋ ಟ್ಯಾಗ್, ನೈಸರ್ಗಿಕ ಸಂಪತ್ತು ಕಾಪಾಡಲು ಕರ್ನಾಟಕದ ಮಹತ್ವದ ಹೆಜ್ಜೆ!

ಬೆಂಗಳೂರು: ಸಮುದ್ರದ ಸಂಪತ್ತು ಮತ್ತು ನಮ್ಮ ನೈಸರ್ಗಿಕ ಸಮತೋಲನನ್ನು ಕಾಪಾಡಲು ಈ ಜೀವಗತ್ತಿನಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ, ರಾಜ್ಯದ ಕರಾಳಿಯ ಸಮುದ್ರ ತೀರಗಳಿಗೆ ಬೇರೆ ಬೇರೆ ರಾಜ್ಯಗಳಿಂದ ಬಂದು ಮೊಟ್ಟೆ ಇಡುವ ಆಲಿವ್ ರಿಡ್ಲಿ ಆಮೆಗಳಿಗೆ ಜಿಯೋ-ಟ್ಯಾಗ್ ಮಾಡುವ ಮೂಲಕ ಮಹಾರಾಷ್ಟ್ರದ ನಂತರ ಎರಡನೇ ಭಾರತೀಯ ರಾಜ್ಯ ಕರ್ನಾಟಕ ಎನ್ನುವ ಹೆಗ್ಗಳಿಕೆಗೆ ನಮ್ಮ ರಾಜ್ಯ ಪಾತ್ರವಾಗಿದೆ.ಈ ಜಿಯೋ-ಟ್ಯಾಗ್‌ಗಳು ರಾಜ್ಯ ಸರ್ಕಾರ ನೀಡಿದ ಗುರುತಿನ ಸಂಖ್ಯೆಯನ್ನು ಮಾತ್ರವಲ್ಲದೆ, ಆಮೆಗಳ ಚಲನವಲನವನ್ನು ಸಹ ಟ್ರ್ಯಾಕ್ ಮಾಡುತ್ತವೆ ಎನ್ನುವುದು ವಿಶೇಷ ಸಂಗತಿ. ಹೇಗೆ […]
ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ನೀಡಿದ ಹರಿಯಾಣದ ವಿದ್ಯಾರ್ಥಿ ಅರೆಸ್ಟ್!

ನದೆಹಲಿ: ಭಾರತ, ಪಾಕಿಸ್ತಾನದ ಮೇಲೆ ಆಪರೇಶನ್ ಸಿಂಧೂರ ನಡೆಸಿದ ಬೆನ್ನಲ್ಲೇ ದೇಶದಲ್ಲೇ ಇರುವ ಕೆಲವರು ಪಾಕಿಸ್ತಾನಕ್ಕೆ ಇಲ್ಲಿನ ರಹಸ್ಯ ಮಾಹಿತಿಗಳನ್ನು ನೀಡುತ್ತಿದ್ದಾರೆ ಎನ್ನುವ ಕುರಿತು ಶಂಕೆ ವ್ಯಕ್ತವಾಗಿತ್ತು. ಇದೀಗ ಅಂತದ್ದೇ ಪ್ರಕರಣದಲ್ಲಿ ಹರಿಯಾಣದ ಮಸ್ತ್‌ಗಢ ಚೀಕಾ ಗ್ರಾಮದ ಸ್ಥಳೀಯನನ್ನು ಬಂಧಿಸಲಾಗಿದೆ. ಬಂಧಿಸಲ್ಪಟ್ಟ ಯುವಕನನ್ನು 25 ವರ್ಷದ ದೇವೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ. ಅಂದ ಹಾಗೆ ಈತ ಪಿಜಿ ಡಿಪ್ಲೊಮಾ ವಿದ್ಯಾರ್ಥಿಯಾಗಿದ್ದಾನೆ. ವಿಚಾರಣೆಯ ಸಮಯದಲ್ಲಿ ಅವನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜೊತೆ ಸಂಪರ್ಕದಲ್ಲಿದ್ದಾಗ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾನೆ. ಭಾರತ […]
ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗದಲ್ಲಿ 6 ತಿಂಗಳು ರೈಲ್ವೆ ಕಾಮಗಾರಿ: ಯಾವೆಲ್ಲಾ ರೈಲುಗಳು ರದ್ದು?

ಬೆಂಗಳೂರು : ಸಕಲೇಶಪುರ-ಸುಬ್ರಹ್ಮಣ್ಯ ಮಾರ್ಗದಲ್ಲಿ ಇದೇ ಜೂನ್ 1ರಿಂದ ನವೆಂಬರ್ 1 ರವರೆಗೆ ಸುರಕ್ಷತೆ ಮತ್ತು ರೈಲ್ವೆ ವಿದ್ಯುದ್ದೀಕರಣ ಕಾಮಗಾರಿ ನಡೆಯಲಿದೆ. ಇದೇ ಕಾರಣದಿಂದಾಗಿ ಕೆಲವು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ. ಈ ಬಗ್ಗೆ ನೈರುತ್ಯ ರೈಲ್ವೆ ಮಾಹಿತಿ ನೀಡಿದೆ. ಹಾಗಾದರೆ ಯಾವೆಲ್ಲಾ ರೈಲುಗಳನ್ನು ರದ್ದುಪಡಿಸಲಾಗಿದೆ ಎಂಬ ಸಂಪೂರ್ಣ ಮಾಹಿತಿ ನೀಡುತ್ತಿದ್ದೇವೆ. ಜೂನ್ 1 ರಿಂದ ಅಕ್ಟೋಬರ್ 30 ರವರೆಗೆ ಮಂಗಳವಾರ, ಗುರುವಾರ ಮತ್ತು ಭಾನುವಾರದಂದು ಸಂಚರಿಸುವ ಯಶವಂತಪುರ ಟು ಮಂಗಳೂರು ಜಂಕ್ಷನ್ ಟ್ರೈ-ವೀಕ್ಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16575) […]