ಉಡುಪಿ: ಕುಟುಂಬದ ಹರಕೆಯ ನೇಮೋತ್ಸವದಲ್ಲಿ ಭಾಗಿಯಾದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

ಉಡುಪಿ: ತನ್ನ ಕುಟುಂಬದ ಹರಕೆಯ ನೇಮೋತ್ಸವದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಭಾಗಿಯಾಗಿದ್ದಾರೆ. ರಕ್ಷಿತ್ ಅಲೆಯೂರು ದೊಡ್ಡ ಮನೆ ಕುಟುಂಬಕ್ಕೆ ಸೇರಿದ್ದು, ಇಲ್ಲಿ ಹರಕೆಯ ನೇಮೋತ್ಸವ ನಡೆಯುತ್ತಿದೆ. ಮೂಲ ಮೈಸಂದಾಯ, ಸಾವಿರಾಳು ಜುಮಾದಿ, ಜೋಡು ಪಂಜುರ್ಲಿ ದೈವಗಳ ನೇಮೋತ್ಸವ ಪ್ರತಿವರ್ಷದಂತೆ ಈ ಬಾರಿಯೂ ನಡೆದಿದೆ. ದೈವದ ಯಾವುದೇ ಕಾರ್ಯಕ್ರಮಗಳನ್ನು ತಪ್ಪಿಸದ ನಟ ರಕ್ಷಿತ್ ಶೆಟ್ಟಿ, ಕುಟುಂಬ ಸಮೇತರಾಗಿ ಭಾಗಿಯಾಗಿ ದೈವದ ಆಶೀರ್ವಾದ ಪಡೆದಿದ್ದಾರೆ. ನಡುರಾತ್ರಿ ನೇಮೋತ್ಸವದಲ್ಲಿ ಭಾಗಿಯಾಗಿ ಪ್ರಸಾದ ಸ್ವೀಕರಿಸಿದ್ದಾರೆ. ದೈವದ ಭಂಡಾರ ಹೊರಡುವಾಗಲೂ ರಕ್ಷಿತ್ ಶೆಟ್ಟಿ, […]
ಮಗಳು ಮತ್ತು ಆಕೆಯ ಗಂಡ ಇಬ್ಬರು ಕಳ್ಳರು

ಉಡುಪಿ: ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ಇತ್ತೀಚೆಗೆ ಪ್ರೀತಿಸಿದ ಹುಡುಗನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರು ಹಿರಿಯರ ಸಮ್ಮುಖದಲ್ಲಿಯೇ ಚೈತ್ರಾ ಕುಂದಾಪುರ-ಶ್ರೀಕಾಂತ್ ಕಶ್ಯಪ್ ಅವರ ಮದುವೆ ನಡೆದಿದೆ. ಆಪ್ತರನ್ನೆಲ್ಲಾ ಚೈತ್ರಾ ಕುಂದಾಪುರ ಮದುವೆಗೆ ಆಹ್ವಾನಿಸಿದ್ದರು. ವಿಪರ್ಯಾಸ ಎಂದರೆ ಸ್ವಂತ ತಂದೆಯನ್ನೇ ಚೈತ್ರಾ ಕುಂದಾಪುರ ಮದುವೆಗೆ ಕರೆದಿಲ್ಲವೆಂದು ಅವರ ತಂದೆ ಬಾಲಕೃಷ್ಣ ನಾಯ್ಕ್ ಸಾಲು ಸಾಲು ಆರೋಪವನ್ನು ಮಾಡಿದ್ದಾರೆ. ಚೈತ್ರಾ ಅವರ ನೂತನ ಜೀವನ ಆರಂಭವಾದ ಕೆಲವೇ ದಿನಗಳಲ್ಲಿ ಅವರ ತಂದೆ ಗಂಭೀರವಾದ ಆರೋಪಗಳನ್ನು ಮಾಡಿರುವುದು […]
ಕಾರ್ಕಳ: ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆ ಮೃತ್ಯು; ದೂರು ದಾಖಲು

ಕಾರ್ಕಳ: ಕಾರ್ಕಳ ಸ್ಪಂದನಾ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆಯೊಬ್ಬರು ಮೃತಪಟ್ಟಿರುವುದಾಗಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರನ್ನು ಕಾರ್ಕಳ ಆನೆಕೆರೆ ಸಮೀಪದ ಬಾಡಿಗೆ ಮನೆ ನಿವಾಸಿ ಝುಬೇದಾ(52) ಎಂದು ಗುರುತಿಸಲಾಗಿದೆ. ಇವರು ಸುಮಾರು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಮೇ 14ರಂದು ಬೆಳಗ್ಗೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡ ಕಾರಣ ಕಾರ್ಕಳ ಸ್ಪಂದನಾ ನರ್ಸಿಂಗ್ ಹೊಂಗೆ ಬಂದಿದ್ದರು. ಅಲ್ಲಿ ಝುಬೇದಾ ಅವರನ್ನು ಪರೀಕ್ಷಿಸಿ ಚಿಕಿತ್ಸೆ ನೀಡಲಾಯಿತು. ಈ ವೇಳೆ ವೈದ್ಯರು ಬಂದು ಪರಿಶೀಲಿಸುವಂತೆ ಮನವಿ ಮಾಡಿದರೂ […]
ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಧುನಿಕ ಬಾಡಿ ಪ್ಲೆಥಿಸ್ಮೋಗ್ರಾಫ್ ಉಪಕರಣದ ಉದ್ಘಾಟನೆ : ಈ ಅತ್ಯಾಧುನಿಕ ಸಾಧನವು ಕರಾವಳಿ ಕರ್ನಾಟಕದಲ್ಲಿ ಮೊದಲನೆಯದು

ಮಣಿಪಾಲ:ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಅತ್ಯಾಧುನಿಕ ಬಾಡಿ ಪ್ಲೆಥಿಸ್ಮೋಗ್ರಾಫ್ ಉದ್ಘಾಟನೆಯೊಂದಿಗೆ ಶ್ವಾಸಕೋಶ ಸಂಬಂಧಿತ ರೋಗನಿರ್ಣಯದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಈ ಸೌಲಭ್ಯವನ್ನು ಕೆಎಂಸಿ ಮಣಿಪಾಲದ ಮಾಜಿ ಡೀನ್ ಡಾ. ಪದ್ಮರಾಜ್ ಹೆಗ್ಡೆ ಮತ್ತು ಭೋದನಾ ಆಸ್ಪತ್ರೆಗಳ ಸಿ ಓ ಓ ಡಾ ಆನಂದ್ ಅವರು ಜಂಟಿಯಾಗಿ ಉದ್ಘಾಟಿಸಿದರು. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ ಅವಿನಾಶ್ ಶೆಟ್ಟಿ , ಶಿಲ್ಲರ್ ಹೆಲ್ತ್‌ಕೇರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಪ್ರಾದೇಶಿಕ ಮಾರಾಟ ವ್ಯವಸ್ಥಾಪಕ ಶ್ರೀ ಆನಂದಕುಮಾರ್ […]