CSEET ಫಲಿತಾಂಶ: ರಾಜ್ಯದಲ್ಲೇ ಗರಿಷ್ಠ ಸಂಖ್ಯೆಯಲ್ಲಿ ತೇರ್ಗಡೆಗೊಂಡ ಕ್ರಿಯೇಟಿವ್‌ನ ವಿದ್ಯಾರ್ಥಿಗಳು

ಕಾರ್ಕಳ: ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ(CSEET) ರವರು 03 ಮೇ, 2025 ರಲ್ಲಿ ನಡೆಸಿದ CSEET ಅರ್ಹತಾ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಮಿಥುನಶ್ರೀ 164 ಮತ್ತು ಸುವರ್ಣ ಹರ್ಷಲ್ ವೈ 162 ಅಂಕಗಳೊಂದಿಗೆ ವಿಶಿಷ್ಟ ಸಾಧನೆಗೈದಿದ್ದಾರೆ. ವಿದ್ಯಾರ್ಥಿಗಳಾದ ಹಾರಿಕ ಗೌಡ ಆರ್. ಬಿ.(153), ಇಯಾನ್ ಪೌಲ್(147), ಬಸವ ಪ್ರಸಾದ್ ಕಾಜಿ(142), ಪೂರ್ಣ ಭಟ್ ಕೆ.ಎಲ್(141), ಸೃಜನ್ ಎಸ್.ಭಟ್(140), ಲಿಖಿತ್ ರೆಡ್ಡಿ ಎಚ್.ಎಂ(140), ರಕ್ಷಿತಾ ಆರ್.ಕಾಮತ್(135), ರೇಷ್ಮಾ ಜಿ.ಕೆ.(135) ಅಭಿಷೇಕ್ ಉಮಾದಿ(131), […]
ಬೈಂದೂರು: ಹೇರಂಜಾಲು ಗುಡೇದೇವಸ್ಥಾನದ ಏತ ನೀರಾವರಿ ಜಾಕ್‌ವೆಲ್ ಸ್ಥಳಾಂತರ ಆಗ್ರಹಿಸಿ ಧರಣಿ

ಉಡುಪಿ: ಗುಡೇದೇವಸ್ಥಾನ ಏತ ನೀರಾವರಿ ಯೋಜನೆಯನ್ನು ಹಳಗೇರಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನಾನುಕೂಲವಾಗುವಂತೆ ಮಾರ್ಪಡಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕು ಹಾಗೂ ಜಾಕವೆಲ್ ನ್ನು ಸ್ಥಳಾಂತರಿಸಿ ಕಾಮಗಾರಿ ನಡೆಸುವ ಮೂಲಕ ರೈತರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶ್ರೀ ಗುಡೇದೇವಸ್ಥಾನ ಏತ ನೀರಾವರಿ ಸಂತ್ರಸ್ತರ ರೈತರ ಒಕ್ಕೂಟ ನೇತೃತ್ವದಲ್ಲಿ ಹೇರಂಜಾಲು, ಹಳಗೇರಿ ಹಾಗೂ ನೂಜಾಡಿ ಗ್ರಾಮಸ್ಥರು ಬೈಂದೂರು ತಾಲೂಕು ಕಚೇರಿ ಮುಂಭಾಗದಲ್ಲಿ ಶುಕ್ರವಾರ ಧರಣಿ ನಡೆಸಿದರು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಹೇರಂಜಾಲು, ಹಳಗೇರಿ ಹಾಗೂ […]
ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಕಾರ್ಕಳ:ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.ಕಂಪ್ಯೂಟರ್ ವಿಜ್ಞಾನದಲ್ಲಿ ಅಧ್ಯಾಪಕರು (ಎಂ.ಎಸ್ಸಿ./ ಎಂ.ಸಿ.ಎ/ ಬಿ.ಇ)ಮತ್ತು ಲ್ಯಾಬ್ ಬೋಧಕರು ಬೇಕಾಗಿದ್ದಾರೆ. ಐ.ಟಿ.ಐ/ಡಿಪ್ಲೊಮಾ/ ಬಿ.ಸಿ.ಎ/ ಬಿ.ಎಸ್ಸಿ. ವಿದ್ಯಾರ್ಹತೆ ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ:99809 2456796069 97392
ಉಡುಪಿ:ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರದಲ್ಲಿ ವಾರ್ಷಿಕ ಕ್ರೀಡಾಕೂಟ 2024-2025

ಬ್ರಹ್ಮಾವರ : ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ವಾರ್ಷಿಕ ಕ್ರೀಡಾಕೂಟ ಮಹಾತ್ಮ ಗಾಂಧಿ ಮೈದಾನ ಅಜ್ಜರಕಾಡು ಇಲ್ಲಿ ಜರುಗಿತು. ಕ್ರೀಡೋತ್ಸವಕ್ಕೆ ಅತಿಥಿಗಳಾಗಿ ಶ್ರೀಮತಿ ಶಾಲಿನಿ ರಾಜೇಶ್ ಶೆಟ್ಟಿ ,ಹಿರಿಯ ದೈಹಿಕ ನಿರ್ದೇಶಕರು ಯುನೈಟೆಡ್ ಉಡುಪಿ ಇವರು ವಿದ್ಯಾರ್ಥಿಗಳಿಗೆ ದೈಹಿಕ ಚಟುವಟಿಕೆ ಎಂಬುದು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಉತ್ತಮಗೊಳಿಸುತ್ತದೆ ಮತ್ತು ನಮ್ಮ ಪ್ರತಿಭೆಯನ್ನು ಹೊರ ಹಾಕುವಲ್ಲಿ ಅವಕಾಶವನ್ನು ನೀಡುತ್ತದೆ ಎಂದು ತಿಳಿಸಿದರು. ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆ ಬ್ರಹ್ಮಾವರ ಇಲ್ಲಿನ ಸಂಸ್ಥಾಪಕರಾದ ಶ್ರೀ ಸುಬ್ರಹ್ಮಣ್ಯ […]
ಉಡುಪಿ: ಮೇ 18ರಂದು ವಿಪ್ರ ಬಾಂಧವರ ಜಿಲ್ಲಾಮಟ್ಟದ ಜಾನಪದ ನೃತ್ಯ ಸ್ಪರ್ಧೆ “ನೃತ್ಯ ಸಂಭ್ರಮ-2025”

ಉಡುಪಿ: ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಜಿಲ್ಲಾಮಟ್ಟದ ಜಾನಪದ ನೃತ್ಯ ಸ್ಪರ್ಧೆ “ನೃತ್ಯ ಸಂಭ್ರಮ-2025”, ಉದ್ಯಮ ಮೇಳ ಮತ್ತು ಆಹಾರ ಮೇಳವನ್ನು ಇದೇ ಮೇ 18ರಂದು ಉಡುಪಿ ಗುಂಡಿಬೈಲಿನ ಬ್ರಾಹ್ಮಿ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಚಂದ್ರಕಾಂತ್ ಕೆ.ಎನ್. ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ವಿಪ್ರ ಬಾಂಧವರಿಗಾಗಿ ಜಾನಪದ ನೃತ್ಯ ಸ್ಪರ್ಧೆ ಆಯೋಜಿಸಿದ್ದು, 40 ವರ್ಷದೊಳಗಿನ ಹಾಗೂ 40 ವರ್ಷ ಮೇಲ್ಪಟ್ಟ ಎರಡು […]