ಚಾರ ಜವಾಹರ್ ನವೋದಯ ವಿದ್ಯಾಲಯ, ದ್ವಿತೀಯ ಪಿಯುಸಿ ಶೇ. 97.43 ಫಲಿತಾಂಶ

ಹೆಬ್ರಿ : ಪಿಎಂ ಶ್ರೀ ಜವಾಹರ್ ನವೋದಯ ವಿದ್ಯಾಲಯ ಚಾರ ಉಡುಪಿ ಜಿಲ್ಲೆ ಇಲ್ಲಿನ ದ್ವಿತೀಯ ಪಿಯುಸಿ ಸಿ.ಬಿ.ಎಸ್.ಇಪರೀಕ್ಷೆಗೆ ಹಾಜರಾದ 39 ವಿದ್ಯಾರ್ಥಿಗಳಲ್ಲಿ, 34 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 04 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಗೊಂಡು ಶೇ.97.43 ಫಲಿತಾಂಶ ಲಭಿಸಿದೆ ಎಂದು ಪ್ರಕಟಣೆ ತಿಳಿಸಿದೆ. ವಿದ್ಯಾರ್ಥಿಗಳಾದ ಯಶ್ವಿನ್ ವಿ. ಕಾರ್ವಿ(94.80%) ಕೌಶಿಕ್ ಡಿ. ಪ್ರಭು (94%),ಭೂಮಿಕಾ ಶೆಟ್ಟಿ( 93.40%),ಪ್ರಥಮ್ ಮಹಾದೇವ್( 90.80%) ವಿಮರ್ಶ ಭಂಡಾರಿ (90.60) ಅಂಕ ಪಡೆದು ಶಾಲೆಗೆ ಟಾಪರ್ ಆಗಿದ್ದಾರೆ.

ಆದಾಯಕ್ಕಿಂತ ಹೆಚ್ಚು ಆಸ್ತಿ, ರಾಜ್ಯದ ವಿವಿದೆಡೆ ಲೋಕಾಯುಕ್ತ ಪೊಲೀಸರ ದಾಳಿ

ಬೆಂಗಳೂರು: ಆದಾಯಕ್ಕಿಂತ ಹೆಚ್ಚು ಆಸ್ತಿ,  ಹಾಗೂ ಭ್ರಷ್ಟಾಚಾರ ಆರೋಪ ಸಂಬಂಧ ರಾಜ್ಯದ ವಿವಿಧೆಡೆ ಲೋಕಾಯುಕ್ತ ಪೊಲೀಸರು ಗುರುವಾರ) ಬೆಳಿಗ್ಗೆ ದಾಳಿ ನಡೆಸಿದ್ದಾರೆ. ಆರೋಪಿ ಅಧಿಕಾರಿಗಳಿಗೆ ಸಂಬಂಧಿಸಿದ 40 ಸ್ಥಳಗಳಲ್ಲಿ ಸಂಘಟಿತ ದಾಳಿ ನಡೆಸಲಾಗಿದೆ. ತುಮಕೂರಿನ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಜಶೇಖರ್, ದಕ್ಷಿಣ ಕನ್ನಡ ಜಿಲ್ಲೆಯ ಸರ್ವೆ ಮೇಲ್ವಿಚಾರಕ ಮಂಜುನಾಥ್, ವಿಜಯಪುರದ ಡಾ. ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ರೇಣುಕಾ ಸಾತರ್ಲೆ, ಬೆಂಗಳೂರಿನ ನಗರ ಮತ್ತು ಗ್ರಾಮೀಣ ಯೋಜನಾ ನಿರ್ದೇಶನಾಲಯದ ಹೆಚ್ಚುವರಿ ನಿರ್ದೇಶಕ ಮುರಳಿ ಟಿವಿ, ಬೆಂಗಳೂರು […]

ಆಳ್ವಾಸ್ ಸಿಬಿಎಸ್‌ಇ ಫಲಿತಾಂಶ: ಆಳ್ವಾಸ್‌ನ 29 ವಿದ್ಯಾರ್ಥಿಗಳು 95% ಕ್ಕೂ ಹೆಚ್ಚು, 114 ವಿದ್ಯಾರ್ಥಿಗಳು 90% ಕ್ಕಿಂತ ಅಧಿಕ ಅಂಕದ ಸಾಧನೆ

ಮೂಡುಬಿದಿರೆ: ಸಿಬಿಎಸ್‌ಇ ಈ ಬಾರಿಯ ಹತ್ತನೆ ತರಗತಿಯ ಫಲಿತಾಂಶ ಪ್ರಕಟಿಸಿದ್ದು ಸತತ ಐದನೇ ವರ್ಷ ಆಳ್ವಾಸ್ ಶಾಲೆಯು 100% ಫಲಿತಾಂಶ ದಾಖಲಿಸಿದೆ. ಆಳ್ವಾಸ್ ಶಾಲೆಯ 29 ವಿದ್ಯಾರ್ಥಿಗಳು 95%ಕ್ಕಿಂತ ಹೆಚ್ಚು ಅಂಕ ಪಡೆಯುವ ಮೂಲಕ ಶ್ರೇಷ್ಠ ಸಾಧನೆ ಮೆರೆದಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಶಾಲೆಯಿಂದ 95 ಶೇಕಡಾಕ್ಕಿಂತ ಹೆಚ್ಚು ಅಂಕ ಪಡೆದವರ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಆಳ್ವಾಸ್ ಪ್ರಥಮ ಸ್ಥಾನ ಪಡೆದಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಮಾತಾಡಿದ […]

ಬಂಟಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡಿಗೆ ಸಮಾರಂಭ

ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕಮಹಾವಿದ್ಯಾಲಯದ 12ನೇ ವರ್ಷದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡಿಗೆ ಸಮಾರಂಭವು ದಿನಾಂಕ 10 ಮೇ 2025 ರಂದು ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿತ್ತು.ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಸಂಸ್ಥೆಗಳಮುಖ್ಯಕಾರ್ಯನಿರ್ವಾಹಣಾಧಿಕಾರಿಯಾದ ಡಾ. ರಾಧಕೃಷ್ಣ ಐತಾಳ್ ಇವರು ಮಾತನಾಡಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಮಾತನಾಡಿ ಅಂತಿಮ ವರ್ಷದ ವಿದ್ಯಾರ್ಥಿಗಳ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದರು ಮತ್ತು ವಿದ್ಯಾರ್ಥಿಗಳು ತಮ್ಮ ಭವಿಷ್ಯದಲ್ಲಿ ಯಶಸ್ಸನ್ನು ಕಾಣಲು ಹೆಚ್ಚು […]

ಮೂಡುಬಿದಿರೆ:ಜೇನು ಜಾತಿಯೇ ಶ್ರೇಷ್ಠ ಜಾತಿ: ರೋಶನ್ ಲಾರೆನ್ಸ್ ಫೆರ್ನಾಂಡಿಸ್

ಮೂಡುಬಿದಿರೆ: ವಿಶ್ವ ಜೇನುನೊಣ ದಿನಾಚರಣೆಯ ಅಂಗವಾಗಿ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ (ಸ್ವಾಯತ್ತ) ಸ್ನಾತಕೋತ್ತರ ಪ್ರಾಣಿಶಾಸ್ತ್ರ ವಿಭಾಗದ ‘ಜೇನುನೊಣ ಕೃಷಿ’ ಸರ್ಟಿಫಿಕೇಟ್ ಕೋರ್ಸ್ನ ವಿದ್ಯಾರ್ಥಿಗಳು ಜೇನುಸಾಕಣೆಯ ಪ್ರಾಯೋಗಿಕ ತರಬೇತಿಗಾಗಿ ಸಂಪಿಗೆ ಬಳಿಯ ಜೇನುಸಾಕಣೆ ಘಟಕಕ್ಕೆ ಭೇಟಿ ನೀಡಿದರು. ಸಂಪಿಗೆಯ ರೋಶು’ಸ್ ಹನಿ ಫಾರ್ಮ್ನ, ಅನುಭವಿ ಜೇನುಸಾಕಣೆದಾರ ಮತ್ತು ತರಬೇತುದಾರ ರೋಶನ್ ಲಾರೆನ್ಸ್ ಫೆರ್ನಾಂಡಿಸ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.ಪ್ರಕೃತಿಯಲ್ಲಿ ಮನುಷ್ಯನಿಲ್ಲವಾದರೂ ಭೂಮಿ ಉಳಿದಿತು. ಆದರೆ ಜೇನುನೊಣಗಳಿಲ್ಲದೆ ಭೂಮಿಯನ್ನು ಊಹಿಸಲು ಸಾಧ್ಯವಿಲ್ಲ. ಪ್ರಕೃತಿಯಲ್ಲಾಗುವ 80 ಶೇಕಡಾ ಪರಾಗಸ್ಪರ್ಶ ಜೇನುನೊಣಗಳಿಂದ ನಡೆಯುತ್ತದೆ. ಆದ್ದರಿಂದ […]