ಮೇ.15ರಂದು ಹಿರಿಯಡಕ ಶ್ರೀವೀರಭದ್ರ ಸ್ವಾಮಿ ದೇವಸ್ಥಾನದ ರಥೋತ್ಸವ: ವಾಹನ ಸಂಚಾರ ಮಾರ್ಗ ಬದಲು.

ಉಡುಪಿ: ಹಿರಿಯಡ್ಕದ ಶ್ರೀವೀರಭದ್ರ ಸ್ವಾಮಿ ದೇವಸ್ಥಾನದ ರಥೋತ್ಸವ, ಸಿರಿಜಾತ್ರಾ ಮಹೋತ್ಸವ ಇದೇ ಮೇ 15ರಂದು ನಡೆಯಲಿದ್ದು, ಈ ಪ್ರಯುಕ್ತ ವಾಹನಗಳಿಗೆ ತಾತ್ಕಾಲಿಕ ಬದಲಿ ಮಾರ್ಗದ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿದೆ. ಮೇ15ರಂದು ಬೆಳಗ್ಗೆ 10ಗಂಟೆಯಿಂದ ಹಿರಿಯಡ್ಕ ಶ್ರೀವೀರಭದ್ರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಮನ್ಮಹಾರಥೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಸಾವಿರಾರು ಮಂದಿ ಭಕ್ತರು ಭಾಗವಹಿಸಲಿದ್ದು, ಸಂಜೆ 6:30ರಿಂದ ದೇವಸ್ಥಾನದ ಮುಂಭಾಗದಿಂದ ಹಿರಿಯಡ್ಕ- ಕಾರ್ಕಳ ರಾಜ್ಯ ಹೆದ್ದಾರಿ ಮೂಲಕ ಕೋಟ್ನಕಟ್ಟೆ ತನಕ ಮೆರವಣಿಗೆ ಸಾಗಲಿದೆ. ಹೀಗಾಗಿ ರಥೋತ್ಸವದ ಪ್ರಯುಕ್ತ […]