ಉಡುಪಿಯ ಪ್ರಸಿದ್ಧ ಹೋಟೆಲಿನಲ್ಲಿ ವಿವಿಧ ಹುದ್ದೆ ಗಳಿಗೆ ಜನ ಬೇಕಾಗಿದ್ದಾರೆ

ಉಡುಪಿ:ಉಡುಪಿಯ ಪ್ರಸಿದ್ಧ ಹೋಟೆಲಿಗೆ ವಿವಿಧ ಹುದ್ದೆಗಳಿಗೆ ಕೂಡಲೇ ಜನ ಬೇಕಾಗಿದ್ದಾರೆ. ಹುದ್ದೆಗಳು:◾ಇಂಡಿಯನ್ ಕಿಚನ್ ಹೆಲ್ಪರ್-2◾ತಂದೂರ್ ಐಟಂ ಹೆಲ್ಪರ್ -01◾ವೈಟರ್ -01◾ಬಾರ್ ಮ್ಯಾನ್-01 ಉತ್ತಮ ವೇತನ ಮತ್ತು ವಸತಿ ಸೌಲಭ್ಯದೊಂದಿಗೆಸಂಪರ್ಕಿಸಿ:+91 84533 91650
ಉಡುಪಿ:ದೊಡ್ಡಣಗುಡ್ಡೆ ಶ್ರೀ ದುರ್ಗಾಆದಿಶಕ್ತಿ ಕ್ಷೇತ್ರದಲ್ಲಿ ದೇಶದ ಯೋಧರ ರಕ್ಷಣೆಗೆ ವಿಶೇಷ ಪೂಜೆ

ಉಡುಪಿ: ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ 19ನೇ ವರ್ಷದ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಸಂದರ್ಭ ಕ್ಷೇತ್ರದಲ್ಲಿ ಶುಕ್ರವಾರ ದೇಶದಲ್ಲಿ ನಡೆಯುತ್ತಿರುವ ಯುದ್ಧದ ಮೂಲಕ ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಹಗಲಿರುಳು ಹೋರಾಡುತ್ತಿರುವ ಯೋಧರ ರಕ್ಷಣೆಗಾಗಿ ವಿಶೇಷವಾಗಿ ಪೂಜೆ ನಡೆಸಲಾಯಿತು. ವಿಶೇಷ ಪೂಜೆಯ ನೇತೃತ್ವ ವಹಿಸಿದ್ದ ಶ್ರೀ ಅನಂತೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸಗ್ರಿ ವೇದವ್ಯಾಸ ಐತಾಳ್ ಮಾತನಾಡಿ, ಸನಾತನ ಪರಂಪರೆ, ಪೀಠಾಧಿಪತಿಗಳು, ದಾನ, ಧರ್ಮ, ಯಜ್ಞ, ಯಾಗಾದಿಗಳಿಂದ ನಮ್ಮ ದೇಶ ಪುಣ್ಯಾಂಶದಿಂದ […]
ಯುಎಇ ಅಥ್ಲೆಟಿಕ್ಸ್: ಕರ್ನಾಟಕದ ಕರಿಶ್ಮಾ ಗೆ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ

ದುಬೈ: ವಿಶ್ವ ಅಥ್ಲೆಟಿಕ್ಸ್ ಕಾಂಟಿನೆಂಟಲ್ ಟೂರ್ ಆಗಿರುವ ಯುಎಇ ಅಥ್ಲೆಟಿಕ್ಸ್ ವಿಮೆನ್ಸ್ ಗಾಲಾ ಕೂಟದಲ್ಲಿ ಕರ್ನಾಟಕದ ಕರಿಶ್ಮಾ ಸನಿಲ್ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಭಾನುವಾರ ನಡೆದ ಮಹಿಳೆಯರ ವಿಭಾಗದ ಸ್ಪರ್ಧೆಯಲ್ಲಿ ಕರಿಶ್ಮಾ 53.33 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಚಾಂಪಿಯನ್ ಎನಿಸಿಕೊಂಡರು. ಉಳಿದಂತೆ ಲಾಂಗ್ ಜಂಪ್‌ನಲ್ಲಿ ಭಾರತದ ಆ್ಯನ್ಸಿ ಸೋಜನ್ (6.54 ಮೀ.) ಚಿನ್ನ ಗೆದ್ದರೆ, ಶೈಲಿ ಸಿಂಗ್ (6.48 ಮೀ.) ಬೆಳ್ಳಿ ಪಡೆದರು.
ಜಿ ಕನ್ನಡ ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ ಹೃದಯಾಘಾತದಿಂದ ನಿಧನ

ಉಡುಪಿ:ಉಡುಪಿಯಯ ಕೆಮ್ಮಣ್ಣು ನಿವಾಸಿ ರಾಕೇಶ್ ಪೂಜಾರಿ ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು .ಅವರು ಜ಼ೀ ಕನ್ನಡ ವಾಹಿನಿಯ ಜನಪ್ರಿಯ ಹಾಸ್ಯ ಕಾರ್ಯಕ್ರಮ ‘ಕಾಮಿಡಿ ಕಿಲಾಡಿಗಳು 3’ರ ವಿನ್ನರ್ ಆಗಿದ್ದರು.