ಶಿರ್ವ: ರಸ್ತೆ ಅಪಘಾತ; ಹಿರಿಯ ಕಾಂಗ್ರೆಸ್ ನಾಯಕಿ ಲೀನಾ ಮಥಾಯಸ್ ಮೃತ್ಯು

ಉಡುಪಿ: ರಸ್ತೆ ಅಫಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಹಿರಿಯ ಕಾಂಗ್ರೆಸ್ ನಾಯಕಿ ಲೀನಾ ಮಥಾಯಸ್ ಶಿರ್ವ ಅವರು ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಭಾನುವಾರ ಶಿರ್ವ ಇರ್ಮಿಚಿ ಚರ್ಚ್ ಬಳಿಯ ರೇಚಲ್ ರೆಸ್ಟೋರೆಂಟ್ ಬಳಿ ನಿಂತಿದ್ದ ಲೀನಾ ಮಥಾಯಸ್ ಅವರಿಗೆ ಬೆಳ್ಮಣ್ ಕಡೆಯಿಂದ ಶಿರ್ವಕ್ಕೆ ಸಾಗುತ್ತಿದ್ದ ಕಾರು ಡಿಕ್ಕಿ ಹೊಡೆದಿದ್ದು, ಇದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಶಿರ್ವ ಪ್ರಾಥಮಿಕ ಕೇಂದ್ರಕ್ಕೆ ಸಾಗಿಸಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ […]
ಉಡುಪಿ: ಕಾಮಿಡಿಯನ್ ರಾಕೇಶ್ ಪೂಜಾರಿ ಅಂತಿಮ ಯಾತ್ರೆ – ಹಲವು ನಟರು, ಅಭಿಮಾನಿಗಳಿಂದ ಅಂತಿಮ ನಮನ

ಉಡುಪಿ: ನಿನ್ನೆ ರಾತ್ರಿ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ್ದ ಹಾಸ್ಯ ನಟ ರಾಕೇಶ್ ಪೂಜಾರಿ ಮೃತದೇಹ ಕೆಮ್ಮಣ್ಣುವಿನ ಪಡುತೋನ್ಸೆಯ ಮನೆಗೆ ತಲುಪಿದೆ. ಮೃತ ಕಾಮಿಡಿ ಕಿಲಾಡಿ- 3ರ ವಿನ್ನರ್ ರಾಕೇಶ್ ಮನೆಗೆ ನೂರಾರು ಅಭಿಮಾನಿಗಳು, ಗ್ರಾಮಸ್ಥರು, ಕುಟುಂಬಸ್ಥರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಕಿರುತರೆ ನಟ ನಟಿಯರು, ರಾಕೇಶ್ ಆಪ್ತರು ಕೂಡ ಅಂತಿಮ ನಮನ ಸಲ್ಲಿಸಿದರು. ತಾಯಿ ಶಾಂಭವಿ, ಸಹೋದರಿ ರಕ್ಷತಾ, ರಾಕೇಶ್ ಅವರ ಅಕಾಲಿಕ ಮರಣದಿಂದ ತೀವ್ರ ನೊಂದಿದ್ದು ಮನೆಯಲ್ಲಿ ಸೂತಕದ ವಾರಾವರಣ ನಿರ್ಮಾಣವಾಗಿದೆ. ನಟಿ […]
ಉಡುಪಿ:UC ಸಿಟಿಯಲ್ಲಿ 80 Plot ಗಳು ಲಭ್ಯ.

ಉಡುಪಿ, ಹಿರಿಯಡಕ: ಯುಸಿ ಸಿಟಿಯಲ್ಲಿ 80 Plot ಗಳು ಲಭ್ಯವಿದ್ದು, Plot ನ ದರ 14,80,000 ದಿಂದ ಪ್ರಾರಂಭವಾಗುತ್ತದೆ. ಚೆನ್ನಾಗಿ ಯೋಜಿಸಲಾದ ರಸ್ತೆಗಳಿದ್ದು, ಮೆಸ್ಕಾಂ ಸಂಪರ್ಕ, ಹಾಗೂ ನೀರಿನ ಟ್ಯಾಂಕ್ ಗಳಿವೆ. ಬುಕಿಂಗ್ ಓಪನ್: https://www.ucdevelopers.com/[email protected] ಬುಕಿಂಗ್‌ಗಾಗಿ ಸಂಪರ್ಕಿಸಿ: 9900222351 ಪದವಿ ಕಾಲೇಜು ಎದುರು, ಮುಖ್ಯ ರಸ್ತೆ, NH 169 A, ಹಿರಿಯಡ್ಕ.
ಉಡುಪಿ: ಆಕಸ್ಮಿಕವಾಗಿ ದೇವಾಲಯದ ಕೆರೆಯಲ್ಲಿ ಮುಳುಗಿ ಬಾಲಕ ಮೃತ್ಯು.

ಪಡುಬಿದ್ರಿ: ನಂದಿಕೂರಿನಲ್ಲಿ ವಿವಾಹ ಸಮಾರಂಭದ ವೇಳೆ ದೇವಾಲಯದ ಕೆರೆಯ ಬಳಿ ಆಕಸ್ಮಿಕವಾಗಿ ಬಾಲಕನೊಬ್ಬ ಮುಳುಗಿ ಮೃತಪಟ್ಟ ದಾರುಣ ಘಟನೆ ಮೇ 11ರಂದು ಸಂಭವಿಸಿದೆ. ಮೃತಪಟ್ಟ ಮಗುವನ್ನು ಕಾಪು, ಕುರ್ಕಾಲು ಗ್ರಾಮದ ನಿವಾಸಿಗಳಾದ ಸತ್ಯನಾರಾಯಣ ಮತ್ತು ಸೌಮ್ಯ ಅವರ ಪುತ್ರ ವಾಸುದೇವ (4) ಎಂದು ಗುರುತಿಸಲಾಗಿದೆ. ಸತ್ಯನಾರಾಯಣ ಕುಟುಂಬವು ನಂದಿಕೂರಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ವಿವಾಹಕ್ಕೆ ಹಾಜರಾಗಿತ್ತು. ಮಧ್ಯಾಹ್ನ 2:00 ಗಂಟೆ ಸುಮಾರಿಗೆ ಸೌಮ್ಯ ಅವರು ತಮ್ಮ ಕಿರಿಯ ಮಗು ವಿಷ್ಣು ಪ್ರಿಯಾ (1)ಗೆ ಸಭಾಂಗಣದ […]
ಉಡುಪಿ: ರಸ್ತೆಯಲ್ಲಿ ನಿಂತಿದ್ದ ಇನ್ಸುಲೇಟರ್ ವಾಹನಕ್ಕೆ ಕಾರು ಡಿಕ್ಕಿ; ಚಾಲಕ ಅಪಾಯದಿಂದ ಪಾರು

ಉಡುಪಿ: ರಸ್ತೆಯಲ್ಲಿ ನಿಂತಿದ್ದ ಇನ್ಸುಲೇಟರ್ ವಾಹನಕ್ಕೆ ಕಾರೊಂದು ಡಿಕ್ಕಿ ಹೊಡೆದ ಘಟನೆ ಉಡುಪಿ ನಿಟ್ಟೂರು ಶಾಲೆಯ ಮುಂಭಾಗದಲ್ಲಿ ಇಂದು ನಡೆದಿದೆ. ಉಡುಪಿಯಿಂದ ಸಂತೆಕಟ್ಟೆ ಹೋಗುವ ಮಾರ್ಗದಲ್ಲಿ ತಾಂಗದಗಡಿ ಸಮೀಪ ಉತ್ತರ ಪ್ರದೇಶ ನೋಂದಣಿಯ ಕಾರೊಂದು ನಿಂತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಕಾರಿ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಉಂಟಾಗಿಲ್ಲ. ಕಾರು ರಸ್ತೆಗೆ ಅಡ್ಡವಾಗಿದ್ದ ಪರಿಣಾಮ ಟ್ರಾಫಿಕ್ ಉಂಟಾಯಿತು.