ಭಾರತ- ಪಾಕ್ ನಡುವೆ ಇಂದಿನಿಂದ ಸಂಜೆ 5 ಗಂಟೆಯಿಂದ ಕದನ ವಿರಾಮ ದೃಢಪಡಿಸಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ

ಹೊಸದಿಲ್ಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮವನ್ನು ಭಾರತ ದೃಢಪಡಿಸಿದೆ. ಸಂಜೆ 5 ಗಂಟೆಯಿಂದ ಕದನ ವಿರಾಮ ಜಾರಿಗೆ ಬರಲಿದೆ. ಎರಡು ದೇಶಗಳ ನಡುವೆ ನೇರವಾಗಿ ಒಪ್ಪಂದಕ್ಕೆ ಬಂದಿರುವುದಾಗಿ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿರುವ ಬಗ್ಗೆ ವರದಿಯಾಗಿದೆ. ಇದಕ್ಕೂ ಮೊದಲು ಭಾರತ ಮತ್ತು ಪಾಕಿಸ್ತಾನ ತಕ್ಷಣದ ಕದನ ವಿರಾಮವನ್ನು ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೋಸ್ಟ್‌ ಮಾಡಿದ್ದರು.

ಕಾಪು ಮಾರಿಗುಡಿ ದೇವಸ್ಥಾನಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ

ಉಡುಪಿ: ದೇಶ ಅಂತ ಬಂದಾಗ ನಾವೆಲ್ಲರೂ ಒಂದೇ, ವೈರಿ ರಾಷ್ಟ್ರ ನಮ್ಮ ಮೇಲೆ ಯುದ್ದಕ್ಕೆ ಬರುತ್ತಿದೆ. ಭಾರತಕ್ಕಿದು ಸಂಕಷ್ಟದ ಕಾಲ, ಎಲ್ಲರೂ ಒಗ್ಗಟಾಗಿ ಎದುರಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಕಾಪುವಿನ ಪುರಾಣ ಪ್ರಸಿದ್ಧ ಮಾರಿಯಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ನಮ್ಮ ಬೆಳಗಾವಿಯ ಸೊಸೆ ಸೋಫಿಯಾ ಖುರೇಷಿ, ಪಾಕಿಸ್ತಾನ ಮೇಲಿನ ಅಪರೇಷನ್ […]

ದೇಶದ ರಕ್ಷಣೆ, ಸುಭದ್ರತೆಗಾಗಿ ಕಾಪು ಮಾರಿಗುಡಿಯಲ್ಲಿ ವಿಶೇಷ ಪೂಜೆ

ಉಡುಪಿ: ಸೈನಿಕರಿಗೆ ಶುಭಕೋರಿ ದೇಶಾದ್ಯಂತ ದೇಗುಲಗಳಲ್ಲಿ ಪೂಜೆ ಹೋಮ ಹವನಗಳು ನಡೆಯುತ್ತಿವೆ. ದಂಡಿನ ಮಾರಿಯಮ್ಮ ಎಂದೆ ಪ್ರಖ್ಯಾತವಾಗಿರುವ, ಸೈನಿಕರ ರಕ್ಷಣೆಗೆ ಕಟಿಬದ್ಧವಾದ ಶಕ್ತಿ ದೇಗುಲ ಉಡುಪಿಯ ಕಾಪು ಮಾರಿಯಮ್ಮನಿಗೂ ವಿಶೇಷ ಪೂಜೆ ಸಲ್ಲಿಸಲಾಯಿತು. ಇತ್ತೀಚಿಗಷ್ಟೇ ಬ್ರಹ್ಮ ಕಲಾಶೋತ್ಸವದಿಂದ ಹೊಸ ಚೇತನ ಪಡೆದಿರುವ ದೇಗುಲದಲ್ಲಿ ಭಕ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಸೈನಿಕರು ಆರಾಧಿಸಿದ ತಾಯಿ ಎಂದೇ ಪ್ರತೀತಿ ಇರುವ ಕಾಪು ಮಾರಿಯಮ್ಮನ ಈ ಪೂಜೆ ದೇಶದ ರಕ್ಷಣೆ ಹಾಗೂ ಸುಭದ್ರತೆಗೆ ನಾಂದಿಯಾಗಲಿ ಎಂದು ಭಕ್ತರು ಪ್ರಾರ್ಥಿಸಿದ್ದಾರೆ. ಕಾಪು ಎಂದರೆ […]

ಉಡುಪಿ: ಶುಕ್ರವಾರದ ಜುಮಾ ನಮಾಜ್ ಬಳಿಕ ದೇಶದ ಒಳಿತಿಗಾಗಿ ಮುಸಲ್ಮಾನರಿಂದ ಸಾಮೂಹಿಕ ಪ್ರಾರ್ಥನೆ

ಉಡುಪಿ: ಭಾರತ ಪಾಕ್ ಉದ್ವಿಗ್ನತೆ ಹಿನ್ನೆಲೆಯಲ್ಲಿ ಶುಕ್ರವಾರ (ಮೇ.09)ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು.ದೇಶದಲ್ಲಿ ಶಾಂತಿ ನೆಲೆಸುವಂತೆ ಮುಸಲ್ಮಾನ ಬಾಂಧವರು ದುಆ ನಿರ್ವಹಿಸಿದರು.ಶತ್ರು ರಾಷ್ಟ್ರದ ಯುದ್ಧದಲ್ಲಿ ದೇಶಕ್ಕೆ ಹಿತವಾಗಬೇಕು, ಆದಷ್ಟು ಬೇಗ ದೇಶ ಮತ್ತೆ ಶಾಂತಿಯತ್ತ ಮರಳಬೇಕು ಎಂದು ಶುಕ್ರವಾರದ ಜುಮಾ ನಮಾಜಿನ ಬಳಿಕ ಧರ್ಮಗುರು ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು. ಬಳಿಕ ಮಾತನಾಡಿದ ಮುಸ್ಲಿಂ ಮುಖಂಡ ಇಕ್ಬಾಲ್ ಮನ್ನಾ ಅವರು, ಪೆಹಲ್ಗಾಂ ದಾಳಿಯ ನಂತರ ನಾವು ಪಾಕಿಗಳಿಗೆ ತಕ್ಕ ಪಾಠ ಕಲಿಸಿದ್ದೇವೆ.ಪಾಕಿಸ್ಥಾನಕ್ಕೆ ಹೊಡೆಯಲು ಭಾರತಕ್ಕೆ ಅರ್ಧ ಗಂಟೆ ಸಾಕು.ಪದೇಪದೇ […]

ಮೇ 14ರಿಂದ ಉಡುಪಿಯಲ್ಲಿ “ಮಾವು ಮೇಳ-2025”

ಉಡುಪಿ: ಸೀಕೋ ಮತ್ತು ಯು.ಬಿ. ಫ್ರೂಟ್ಸ್, ಮಂಗಳೂರು ಇವರ ಆಶ್ರಯದಲ್ಲಿ ಐದು ದಿನಗಳ “ಮಾವು ಮೇಳ-2025” ಇದೇ ಮೇ 14 ರಿಂದ 18 ರವರೆಗೆ ಉಡುಪಿ ದೊಡ್ಡಣಗುಡ್ಡೆಯ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ನಡೆಯಲಿದೆ ಎಂದು ಸೀಕೋ ಮತ್ತು ಯು.ಬಿ. ಫ್ರೂಟ್ಸ್ ಪಾಲುದಾರ ಅಬ್ದುಲ್ ಕುಂಞಿ ತಿಳಿಸಿದರು. ಈ ಕುರಿತು ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮೇ 14ರಂದು ಸಂಜೆ 4 ಗಂಟೆಗೆ ವಿಧಾನಸಭೆ ಸಭಾಪತಿ ಯು.ಟಿ ಖಾದರ್ ಅವರು ಮಾವು ಮೇಳಕ್ಕೆ ಚಾಲನೆ ನೀಡಲಿದ್ದಾರೆ. […]