ಭಾರತ ಪಾಕ್ ನಡುವೆ ಉದ್ವಿಗ್ನತೆ:ಐಪಿಎಲ್ ನ ಉಳಿದ ಪಂದ್ಯಗಳನ್ನು ಅನಿರ್ದಿಷ್ಟಾವಧಿ ಸ್ಥಗಿತಗೊಳಿಸಿದ ಬಿಸಿಸಿಐ

ಮುಂಬೈ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಪರಿಣಾಮ ಉಂಟಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಉದ್ವಿಗ್ನತೆಯ ಪರಿಣಾಮ ಇಂಡಿಯನ್ ಪ್ರೀಮಿಯರ್ ಲೀಗ್ (IPL) ನ ಉಳಿದ ಪಂದ್ಯಗಳನ್ನು ಬಿಸಿಸಿಐ ಅಮಾನತು ಮಾಡಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪಂದ್ಯಾವಳಿಯ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ನಂತರ, ಆಟಗಾರರು, ಸಹಾಯಕ ಸಿಬ್ಬಂದಿ ಮತ್ತು ಅಭಿಮಾನಿಗಳ ಸುರಕ್ಷತೆಯೇ ಪ್ರಮುಖ ಕಾಳಜಿ ಎಂದು ಘೋಷಿಸಿದೆ. ಗುರುವಾರ (ಮೇ 08) ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ […]
ರೋಹನ್ ಕಾರ್ಪೊರೇಷನ್: ಕರ್ನಾಟಕಕ್ಕೆ ಬ್ರ್ಯಾಂಡ್ ಅಂಬಾಸಿಡರ್ ಆಗಿ ಗ್ಲೋಬಲ್ ಸೂಪರ್‌ಸ್ಟಾರ್ ಶಾರುಖ್ ಖಾನ್‌ರವರು ಸಹಿ

ಬೆಂಗಳೂರು:ರೋಹನ್ ಕಾರ್ಪೊರೇಷನ್ ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್ ಮರುವ್ಯಾಖ್ಯಾನಿಸಲು ಶಾರುಖ್ ಖಾನ್ ರ ಬಲವನ್ನು ಹೊಂದಿದೆ.ಕರ್ನಾಟಕಕ್ಕೆ ಬ್ರ್ಯಾಂಡ್ ರಾಯಭಾರಿಯಾಗಿ ಜಾಗತಿಕ ಸೂಪರ್‌ಸ್ಟಾರ್ ಶಾರುಖ್ ಖಾನ್‌ರವರು ಸಹಿ ಮಾಡಿದ್ದಾರೆ. ಕರ್ನಾಟಕದ ರಿಯಲ್ ಎಸ್ಟೇಟ್ ವಲಯಕ್ಕೆ ಅವಿಸ್ಮರಣೀಯ ಕ್ಷಣದಲ್ಲಿ, ಮಂಗಳೂರಿನ ಪ್ರಮುಖ ಬಿಲ್ಡರ್‌ಗಳು ಹಾಗೂ ಡೆವಲಪರ್‌ಗಳಾದ ರೋಹನ್ ಕಾರ್ಪೊರೇಷನ್, ಕರ್ನಾಟಕಕ್ಕೆ ತನ್ನ ಅಧಿಕೃತ ಬ್ರ್ಯಾಂಡ್ ರಾಯಭಾರಿಯಾಗಿ ಬಾಲಿವುಡ್ ದಂತಕಥೆ ಶಾರುಖ್ ಖಾನ್‌ರನ್ನು ಹೆಮ್ಮೆಯಿಂದ ಘೋಷಿಸುತ್ತಿದೆ. ಕರ್ನಾಟಕದ ಮಂಗಳೂರಿನಲ್ಲಿ ಸ್ಥಾಪನೆಯಾದ ಮತ್ತು ಕೇಂದ್ರಕಚೇರಿ ಹೊಂದಿರುವ, ರೋಹನ್ ಕಾರ್ಪೊರೇಷನ್ ವಿಶ್ವಾಸ, ದರ್ಜೆ ಹಾಗೂ ಅತ್ಯುತ್ತಮತೆಗೆ […]
ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ.: ಉಡುಪಿ ಸಂಘದ ಸಿಬ್ಬಂದಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರ

ಉಡುಪಿ: ಉಡುಪಿಯ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಿಬ್ಬಂದಿಗಳಿಗೆ ಸೊಸೈಟಿಯ ವತಿಯಿಂದ ಒಂದು ದಿನದ ವಿಶೇಷ ತರಬೇತಿ ಕಾರ್ಯಾಗಾರವು ಉಡುಪಿ ನಗರದ ಹೋಟೆಲ್ ಡಯಾನ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಮಂಗಳೂರಿನ ಹೆಸರಾಂತ ತರಬೇತಿ ಸಂಸ್ಥೆಯಾದ ಮಾಸ್ಟರ್‌ಮೈಂಡ್ ಎಂಟರ್ ಪ್ರೈಸಸ್ ನ ಶ್ರೀಶ ಕೆ.ಎಂ ಇವರು ಸಂಘದ ಸಿಬ್ಬಂದಿಗಳಿಗೆ ತರಬೇತಿ ನೀಡಿದರು. ಸಂಘದ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿಯವರುಕಾರ್ಯಕ್ರಮ ಉದ್ಘಾಟಿಸಿ ಗ್ರಾಹಕರೇ ನಮ್ಮ ದೇವರು. ಆಧುನಿಕ ಬದಲಾವಣೆಗಳಿಗೆ ಒಗ್ಗಿಕೊಂಡು ಒತ್ತಡ ನಿರ್ವಹಣೆ,ಕೌಶಲ್ಯಾಭಿವೃದ್ಧಿಯೊಂದಿಗೆ ಗ್ರಾಹಕರಿಗೆ ನಗುಮುಖದ ಉತ್ತಮಸೇವೆ ನೀಡುವರೇ ಇಂತಹ […]
ಉಡುಪಿ:ಇಂದಿನಿಂದ (ಮೇ.09 ರಿಂದ ಮೇ.13 ರವರೆಗೆ) ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾಆದಿಶಕ್ತಿ ಕ್ಷೇತ್ರದಲ್ಲಿ 19ನೇ ಪ್ರತಿಷ್ಠ ವರ್ಧಂತಿ ಮಹೋತ್ಸವ

ಉಡುಪಿ:ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾಆದಿಶಕ್ತಿ ಕ್ಷೇತ್ರದಲ್ಲಿ 19ನೇ ಪ್ರತಿಷ್ಠ ವರ್ಧಂತಿ ಮಹೋತ್ಸವದ ಪ್ರಯುಕ್ತ ಪಂಚವಿಂಶತಿ ದ್ರವ್ಯ ಮೀಳಿತ ಅಷ್ಟೋತ್ತರ ಶತ ಬ್ರಹ್ಮ ಕುಂಭಾಭಿಷೇಕ, ಶ್ರೀರಂಗಪೂಜಾ ಮಹೋತ್ಸವ ಸಹಿತ ಬಲಿ ಉತ್ಸವ ಶ್ರೀ ಚಂಡಿಕಾಯಾಗ ಹಾಗೂ ಮಹಾ ಅನ್ನಸಂತರ್ಪಣೆಯೂ ತಾ.09.05.2025 ನೇ ಶುಕ್ರವಾರದಿಂದ ತಾ.13.05.2025 ನೇ ಮಂಗಳವಾರ ದವರೆಗೆ ನಡೆಯಲಿದೆ. ಸ್ವಸ್ತಿ ಶ್ರೀ ವಿಶ್ವಾವಸು ನಾಮ ಸಂವತ್ಸರದ ಮೇಷ ಮಾಸ ದಿನ ೨೬ ಸಲುವ ವೈಶಾಖ ಶುದ್ಧ ೧೨ ಯು ತಾ. 09-05-2025ರ ಶುಕ್ರವಾರ ಆರಂಭಗೊಂಡು ವೈಶಾಖ […]
ಉಡುಪಿ:ಡಿಪ್ಲೋಮಾ ಪ್ರವೇಶಾತಿ : ಅರ್ಜಿ ಆಹ್ವಾನ

ಉಡುಪಿ: ಪ್ರಸಕ್ತ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶಾತಿಗಾಗಿ, ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಒಟ್ಟಾರೆ ಶೇ. 35 ರಷ್ಟು ಅಂಕ ಪಡೆದಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಉಡುಪಿಯ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಪ್ರಥಮ ವರ್ಷದ ಡಿಪ್ಲೋಮಾ ಪ್ರವೇಶ ಬಯಸುವ ಅಭ್ಯರ್ಥಿಗಳು ಸಂಸ್ಥೆಯಲ್ಲಿ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಮೇ 27 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರ್ಕಾರಿ ಪಾಲಿಟೆಕ್ನಿಕ್, ಉಡುಪಿ ಸಂಸ್ಥೆ ದೂ.ಸಂಖ್ಯೆ: 0820-2570244 ಅನ್ನು ಸಂಪರ್ಕಿಸಬಹುದಾಗಿದೆ […]