ನೀರೆ ಬೈಲೂರಿನಲ್ಲಿ ನಿವೇಶನ ಮಾರಾಟಕ್ಕಿದೆ

ಬೈಲೂರು:ನೀರೆ ಬೈಲೂರಿನಲ್ಲಿ ಪರಿವರ್ತಿತ 7ಸೆಂಟ್ಸ್ ನಿವೇಶನ ಮಾರಾಟಕ್ಕಿದೆ.ಬೈಲೂರು ಜಂಕ್ಷನ್ ಮತ್ತು ಕಾರ್ಕಳ ಉಡುಪಿ ಮುಖ್ಯ ರಸ್ತೆಯಿಂದ 500 ಮೀಟರ್ ದೂರವಿದೆ.ಪ್ರತಿ ಸೆಂಟ್ಸ್‌ಗೆ 1,60,000 ದರ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91 8197035017

ಕುರುಡುಂಜೆ ಜಲಜಮ್ಮ ಹೆಗ್ಡೆ ಶತಮಾನೋತ್ಸವ ಸಂಭ್ರಮ

ಉಡುಪಿ: ಕುರುಡುಂಜೆ ಜಲಜಮ್ಮ ಹೆಗ್ಡೆ ಅವರ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮ ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಸೂರೆಬೆಟ್ಟು ಮನೆಯ ಪ್ರಾಂಗಣದಲ್ಲಿ ಅದ್ದೂರಿಯಾಗಿ ನಡೆಯಿತು. ಶತಮಾನೋತ್ಸವ ಸಂಭ್ರಮದ ಪ್ರಯುಕ್ತ ಖ್ಯಾತ ಭಜನಾ ತಂಡಗಳ ಮಹಾ ಸಮ್ಮಿಲನದಲ್ಲಿ “ಭಕ್ತ ಭಾವಧಾರೆ”, “ಮಹಾಮೃತ್ಯುಂಜಯ ಹೋಮ”, ಶ್ರೀ ಕೋದಂಡರಾಮ ಕೃಪಾಷೋಷಿತ ಹನುಮಗಿರಿ ಮೇಳದವರಿಂದ ” ಗರುಡೋದ್ಭವ ಪುರುಷಮೃಗ” ಯಕ್ಷಗಾನ ಹಾಗೂ ಕಲ್ಕುಡ, ಪಂಜುರ್ಲಿ, ವಡ್ತೆ, ಅಣ್ಣಪ್ಪ ದೈವಗಳ ನೇಮೋತ್ಸವ ವಿಜೃಂಭಣೆಯಿಂದ ನೆರವೇರಿತು. ಈ ಸಂದರ್ಭದಲ್ಲಿ ನೂರು ಸಂವತ್ಸರಗಳನ್ನು ಪೂರೈಸಿದ ಕುರುಡುಂಜೆ ಜಲಜಮ್ಮ ಹೆಗ್ಡೆ ಅವರನ್ನು […]

ಉಡುಪಿ: ಸಿಂಧೂರ್ ಕಾರ್ಯಾಚರಣೆ ಯಶಸ್ವಿ-ಶಾಸಕರ ನೇತೃತ್ವದಲ್ಲಿ ವಿಶೇಷ ಪೂಜೆ

ಉಡುಪಿ: ಕಾಶ್ಮೀರದ ಪಹಲ್ಲಾಮ್ ನಲ್ಲಿ ಅಮಾಯಕ ಹಿಂದೂಗಳ ಮಾರಣಹೋಮಗೈದ ಉಗ್ರರ ವಿರುದ್ಧ ‘ಆಪರೇಶನ್‌ ಸಿಂಧೂರ್’ ಯಶಸ್ವಿ ಕಾರ್ಯಾಚರಣೆ ನಡೆಸಿದ ಭಾರತೀಯ ವೀರ ಯೋಧರ ಶ್ರೇಯಸ್ಸಿಗಾಗಿ ಶಾಸಕ ಯತ್ಪಾಲ್‌ ಸುವರ್ಣ ಅವರ ನೇತೃತ್ವದಲ್ಲಿ ಬಿಜೆಪಿ ಉಡುಪಿ ನಗರ ಹಾಗೂ ದೇಶಾಭಿಮಾನಿಗಳ ವತಿಯಿಂದ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತ, ಶತ್ರು ರಾಷ್ಟ್ರ ಪಾಕಿಸ್ತಾನ ಮತ್ತು ಉಗ್ರರಿಗೆ ತಕ್ಕ ಶಾಸ್ತಿ ಮಾಡಿದ್ದಕ್ಕೆ ಹರ್ಷ ವ್ಯಕ್ತವಾಯಿತು. ಪಟಾಕಿ ಸಿಡಿಸಿ, ಸಾರ್ವಜನಿಕರಿಗೆ […]

ಕನ್ನರ್ಪಾಡಿ ಶ್ರೀಜಯದುರ್ಗ ಪರಮೇಶ್ವರಿ ದೇವಸ್ಥಾನದಲ್ಲಿ ಭಾರತೀಯ ಸೇನೆಯ ಹೆಸರಿನಲ್ಲಿ ವಿಶೇಷ ಪೂಜೆ

ಉಡುಪಿ: ಮುಜರಾಯಿ ಇಲಾಖೆ ಸಚಿವ ರಾಮಲಿಂಗ ರೆಡ್ಡಿ ಸೂಚನೆಯ ಮೇರೆಗೆ ಉಡುಪಿ ಜಿಲ್ಲೆಯ ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳಲ್ಲಿ ಭಾರತೀಯ ಸೇನೆಯ ಹೆಸರಿನಲ್ಲಿ ಹಾಗೂ ಭಾರತೀಯ ಯೋಧರಿಗೆ ಒಳಿತಾಗುವಂತೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಉಡುಪಿ ಕನ್ನರ್ಪಾಡಿ ಶ್ರೀಜಯದುರ್ಗ ಪರಮೇಶ್ವರಿ ದೇವಸ್ಥಾನದಲ್ಲಿ ಭಾರತೀಯ ಸೇನೆಗೆ ಮತ್ತಷ್ಟು ಶಕ್ತಿಯನ್ನು ಭಗವಂತನು ಅನುಗ್ರಹಿಸಿ ಕರುಣಿಸಲಿ ಎಂದು ವಿಶೇಷ ಸಂಕಲ್ಪದೊಂದಿಗೆ ವಿಶೇಷ ಪೂಜೆ ಮಾಡಲಾಯಿತು. ಈ ಸಂದರ್ಭದಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಉಡುಪಿ: ಕರಾವಳಿಯಲ್ಲಿ ಮೀನಿಗೆ ಬರ; ಬೆಲೆ ಸಿಕ್ಕಾಪಟ್ಟೆ ದುಬಾರಿ.!

ಉಡುಪಿ: ಬೇಸಗೆಯ ತಾಪ ಎಲ್ಲೆಡೆ ಪರಿಣಾಮ ಬೀರುತ್ತಿದ್ದು, ಮೀನುಗಾರಿಕಾ ವಲಯಕ್ಕೂ ಬಿಸಿ ತಟ್ಟಿದೆ. ಬಿಸಿಲಿನ ಬೇಗೆಗೆ ತೀರದತ್ತ ಮೀನುಗಳು ಬಾರದೇ ಇರುವುದರಿಂದ ಮೀನುಗಾರಿಕೆಗೆ ಹೊಡೆತ ಬಿದ್ದಿದ್ದು, ಇದರಿಂದ ಬಹುಬೇಡಿಕೆಯ ಮೀನುಗಳ ದರ ದುಬಾರಿಯಾಗಿದೆ. ಕರಾವಳಿಯಲ್ಲಿಯೇ ಎರಡು- ಮೂರು ದಿನಗಳ ಹಿಂದೆ ಅಂಜಲ್ ಕೆಜಿಗೆ ಬರೋಬ್ಬರಿ 1,800 ರೂ.ಗೆ ತಲುಪಿತ್ತು. ಇದುವರೆಗಿನ ಗರಿಷ್ಠ ಬೆಲೆಯಿದು. ಸದ್ಯ ಮಾರುಕಟ್ಟೆಯಲ್ಲಿ 1,400-1,500 ರೂ.ನಲ್ಲಿ ಮಾರಾಟವಾಗುತ್ತಿದೆ. ಇನ್ನು ಬಿಳಿ ಪಾಂಫ್ರೆಟ್ ಕೆಜಿಗೆ 1,500 ರೂ. ಇದ್ದು, ಇದೂ ಇದುವರೆಗಿನ ದಾಖಲೆಯಾಗಿದೆ. 3 ವರ್ಷಗಳ […]