ಕೇಂದ್ರ ಸ್ವದೇಶ್ ದರ್ಶನ್ ಯೋಜನೆಯಡಿ ಕಾರ್ಕಳದ ಆನೆಕೆರೆ, ರಾಮಸಮುದ್ರ ಅಭಿವೃದ್ಧಿ- ಸಚಿವ ಗಜೇಂದ್ರ ಸಿಂಗ್ ಶೇಖಾವತ್‌

ಉಡುಪಿ: ಕೇಂದ್ರ‌ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಕಾರ್ಕಳಕ್ಕೆ ಭೇಟಿ ನೀಡಿದರು‌. ಕಾರ್ಕಳ ಆನೆಕೆರೆ ಬಸದಿ ಮತ್ತು ರಾಮಸಮುದ್ರ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಸ್ಥಳದ ಕುರಿತಾಗಿ‌ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕ ಸುನಿಲ್ ಕುಮಾರ್ ಸಚಿವರಿಗೆ ಪ್ರವಾಸೋದ್ಯಮವಾಗಿ ಅಭಿವೃದ್ಧಿಪಡಿಸುವ ನೀಲನಕಾಶೆ ಬಗ್ಗೆ ತಿಳಿಸಿ, ಮಾತುಕತೆ ನಡೆಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಸ್ವದೇಶ್ ದರ್ಶನ್ ಯೋಜನೆ ಭಾಗವಾಗಿ ಕಾರ್ಕಳ ಆನೆಕೆರೆ ಮತ್ತು ರಾಮಸಮುದ್ರ ಪ್ರದೇಶವನ್ನು ಎರಡು ಹಂತಗಳಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ […]

ಉಡುಪಿ: ಹಿರಿಯ ನಾದಸ್ವರ ವಾದಕ ಅಲೆವೂರು ಬೊಗ್ರ ಶೇರಿಗಾರ್ ನಿಧನ

ಉಡುಪಿ: ಹಿರಿಯ ನಾದಸ್ವರ ವಾದಕ ಅಲೆವೂರು ಬೊಗ್ರ ಶೇರಿಗಾರ್ ಅವರು ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಸ್ವಗ್ರಹದಲ್ಲಿ ನಿಧನರಾದರು. ಅಸಂಖ್ಯಾತ ದೇವಸ್ಥಾನ, ಗರೋಡಿ, ದೈವಸ್ಥಾನ , ನಾಗರಾಧನೆಯಲ್ಲಿ ಹಿರಿಯ ನಾಗಸ್ವರ ವಾದಕರಾಗಿ ಅಲೆವೂರು ಬೋಗ್ರ ಶೇರಿಗಾರ್ ಪ್ರಸಿದ್ದಿಯನ್ನು ಪಡೆದಿದ್ದರು. ನಾಗಸ್ವರದ ಕಲಾರಾಧನೆಯನ್ನು ಆತ್ಮಸಮರ್ಪಣಾ ಮನೋಭಾವದಿಂದ ಕಾರ್ಯಗತಗೊಳಿಸಿ ಪಾರಂಪರಿಕ ಶೈಲಿಯಲ್ಲಿ ಕಲಾ ಮಾತೆಯ ಸೇವೆಯನ್ನು ಮಾಡಿದ ಅಪರೂಪದ ಕಲಾವಿದರು.ಬೊಗ್ರ ಸೇರಿಗಾರ್ ಅವರು ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ಸಂಘ ಸಂಸ್ಥೆಗಳಿಂದ ಪುರಸ್ಕೃತರಾಗಿದ್ದರು. ಪ್ರಸಿದ್ದ ನಾಗಸ್ವರ ವಾದಕ ಉದಯ […]

ಉಡುಪಿ: ‘ಭಾರತ್‌ ಮಾರ್ಕೆಟಿಂಗ್‌’ ಶೋರೂಮ್’ನಲ್ಲಿ ಕೆಲಸಕ್ಕೆ ಜನ ಬೇಕಾಗಿದ್ದಾರೆ.

ಉಡುಪಿ: ಉಡುಪಿಯ ಬನ್ನಂಜೆ ನಾರಾಯಣಗುರು ಸಂಕೀರ್ಣ ದಲ್ಲಿರುವ ಪ್ರತಿಷ್ಠಿತ ವಿದ್ಯುತ್‌ ಜೋಡಣೆ ಸಾಮಗ್ರಿಗಳ ಹವಾನಿಯಂತ್ರಿತ ಜಿಎಂ ಬ್ರ್ಯಾಂಡ್‌ ಶೋರೂಂ ‘ಭಾರತ್‌ ಮಾರ್ಕೆಟಿಂಗ್‌’ ನಲ್ಲಿ ಕೆಲಸಕ್ಕೆ 3 ಹುಡುಗರು ಹಾಗೂ 2 ಹುಡುಗಿಯರು ಬೇಕಾಗಿದ್ದಾರೆ. ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ ಉತ್ತೀರ್ಣ/ ಅನುತ್ತೀರ್ಣ ಹೊಂದಿರಬೇಕು.ಆಸಕ್ತರು ಸಂಪರ್ಕಿಸಿ: 9620718454

ಉಡುಪಿ:ಅರ್ಜಿ ಆಹ್ವಾನ

ಉಡುಪಿ: ನಗರಸಭಾ ನಿಧಿಯ ಶೇ.5 ರ ವಿಕಲಚೇತನರ ಕಲ್ಯಾಣ ಕಾರ್ಯಕ್ರಮ ಯೋಜನೆಯಡಿ ರಾಜ್ಯ ರಾಷ್ಟ್ರೀಯಮಟ್ಟದ ಕ್ರೀಡೆ, ಕಲೆ, ಸಾಂಸ್ಕೃತಿಕ ಹಾಗೂ ಇತರೆ ವ್ಯಾಸಂಗೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ವಸತಿ, ಶಿಕ್ಷಣ, ಸರ್ಕಾರಿ ಕಛೇರಿಗಳು, ಸಮುದಾಯ ಭವನ ಕಟ್ಟಡಗಳಿಗೆ ಜಾರುಹಾದಿ ಹಾಗೂ ವಿಕಲಚೇತನ ಸ್ನೇಹಿ ಶೌಚಾಲಯಗಳನ್ನು ನಿರ್ಮಿಸಲು ಇಚ್ಛಿಸುವ ಆಸಕ್ತರು / ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನಿಗದಿತ ಅರ್ಜಿಯೊಂದಿಗೆ ಪೂರಕ ದಾಖಲಾತಿಗಳನ್ನು ಸಲ್ಲಿಸಲು ಮೇ 15 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಉಡುಪಿ ನಗರಸಭಾ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ […]

ಉಡುಪಿ:ಗ್ರಾ.ಪಂ. ಅಧ್ಯಕ್ಷರ ಆಯ್ಕೆ: ಚುನಾವಣಾಧಿಕಾರಿಗಳ ನೇಮಕ

ಉಡುಪಿ: ವಿವಿಧ ಕಾರಣಗಳಿಂದ ತೆರವಾಗಿರುವ ಜಿಲ್ಲೆಯ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮ ಪಂಚಾಯತ್‌ನಮುಂದಿನ ಅವಧಿಗೆ ಅಧ್ಯಕ್ಷ ಸ್ಥಾನವನ್ನು (ಮೀಸಲಾತಿ – ಸಾಮಾನ್ಯ) ಆಯ್ಕೆ ಮಾಡುವ ಸಲುವಾಗಿ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯಕ್ ಅವರನ್ನು ಗೊತ್ತು ಪಡಿಸಿದ ಅಧಿಕಾರಿಯನ್ನಾಗಿ ನೇಮಿಸಲಾಗಿದ್ದು, ಸದ್ರಿರವರು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 45 ಹಾಗೂ (ಗ್ರಾಮ ಪಂಚಾಯತ್ ಅಧ್ಯಕ್ಷ ಚುನಾವಣೆ) ನಿಯಮಗಳು 1995 ರ ನಿಯಮ 4 ರಿಂದ 11ರವರೆಗಿನ ನಿಯಮದಂತೆ ಚುನಾವಣೆ ನಡೆಸಿ, ಅಧ್ಯಕ್ಷ ಸ್ಥಾನವನ್ನು […]