ಮಣಿಪಾಲ: ಉಡುಪಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್’ನಲ್ಲಿ ವಿವಿಧ ಕೋರ್ಸ್’ಗಳ ದಾಖಲಾತಿ ಆರಂಭ.

ಉಡುಪಿ: ಮಣಿಪಾಲ ಸಿ.ಐ.ಬಿ.ಎಂ ಎದುರು, ಶಿವಳ್ಳಿ, ಅನಂತ ನಗರದಲ್ಲಿ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣವನ್ನು ನೀಡುತ್ತಿರುವ ಉಡುಪಿ ಸಮೂಹ ಸಂಸ್ಥೆಗಳು, ಉಡುಪಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್’ನಲ್ಲಿ ವಿವಿಧ ಕೋರ್ಸ್’ಗಳಿಗೆ ದಾಖಲಾತಿ ಆರಂಭಗೊಂಡಿದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಬೆಂಗಳೂರು, ಕೆಎಸ್‌ಡಿಎನ್‌ಇಬಿ ಮತ್ತು ಪ್ಯಾರಾಮೆಡಿಕಲ್ ಬೋರ್ಡ್ ಅಡಿಯಲ್ಲಿ ವಿವಿಧ ಕೋರ್ಸ್‌ಗಳಿಗೆ ಶಿಕ್ಷಣವನ್ನು ನೀಡುತ್ತಿದೆ. ಹಾಗೂ ಮಂಗಳೂರು ವಿಶ್ವವಿದ್ಯಾಲಯದ ಅಡಿಯಲ್ಲಿ ಕೋರ್ಸ್‌ಗಳು: ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯನ್ನು ಸಂಪರ್ಕಿಸಬಹುದು: 9844898383Udupi group of institutions, manipalOpp. C.I.B.M, Shivalli, Ananth Nagar, […]

ಬೆಳ್ತಂಗಡಿ: ಹೃದಯಾಘಾತದಿಂದ 16 ವರ್ಷದ ಬಾಲಕ ಮೃತ್ಯು.

ಬೆಳ್ತಂಗಡಿ: ಧರ್ಮಸ್ಥಳದ ಜೋಡುಸ್ಥಾನದಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಮನೆಯ ಬಳಿ ಆಟವಾಡುತ್ತಿದ್ದಾಗ ಹೃದಯಾಘಾತದಿಂದ ಮೃತಪಟ್ಟ ಘಟನೆ ಮೇ 4 ರಂದು ನಡೆದಿದೆ. ಮೃತನನ್ನು ಧರ್ಮಸ್ಥಳದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಗೋವಿಂದ ಗೌಡ ಅವರ ಪುತ್ರ ಪ್ರಥಮ್ (16) ಎಂದು ಗುರುತಿಸಲಾಗಿದೆ. ಪ್ರಥಮ್ ಮನೆಯ ಬಳಿ ಆಟವಾಡುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿತು. ಅವರನ್ನು ತಕ್ಷಣ ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಆದರೆ ಪ್ರಯತ್ನಗಳ ಹೊರತಾಗಿಯೂ ಅವರನ್ನು ಉಳಿಸಲಾಗಲಿಲ್ಲ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ:ಪುಸ್ತಕ ಬಹುಮಾನಕ್ಕೆ ಜಾನಪದ ಕೃತಿಗಳ ಆಹ್ವಾನ

ಉಡುಪಿ: ಕರ್ನಾಟಕ ಜಾನಪದ ಅಕಾಡೆಮಿಯು 2024 ನೇ ಸಾಲಿನಲ್ಲಿ ಪ್ರಥಮ ಆವೃತ್ತಿಯಲ್ಲಿ ಮುದ್ರಣಗೊಂಡಿರುವತಾಂತ್ರಿಕ ಹಾಗೂ ಪೂರ್ವಭಾವಿ ಪುಟಗಳನ್ನು ಹೊರತುಪಡಿಸಿ, ಕನಿಷ್ಠ 150 ಪುಟಗಳಿಗೂ ಮೇಲ್ಪಟ್ಟಿರುವಂತೆ ಜನಪದ ಗದ್ಯ, ಜನಪದ ಪದ್ಯ, ಜನಪದ ವಿಚಾರ-ವಿಮರ್ಶೆ-ಸಂಶೋಧನೆ ಹಾಗೂ ಜನಪದ ಸಂಕೀರ್ಣ ಪ್ರಕಾರಗಳ ಅತ್ಯುತ್ತಮ ಜಾನಪದ ಕೃತಿಗಳಿಗೆ ಬಹುಮಾನ ನೀಡುವ ಯೋಜನೆಯಡಿ ಜಾನಪದ ಕೃತಿಗಳನ್ನು ಪುಸ್ತಕ ಬಹುಮಾನಕ್ಕಾಗಿ ಆಹ್ವಾನಿಸಿದೆ. ಪುಸ್ತಕ ಬಹುಮಾನಕ್ಕಾಗಿ ಲೇಖಕರು, ಪ್ರಕಾಶಕರು ಹಾಗೂ ಸಂಪಾದಕರು ತಮ್ಮ ಒಂದು ಕೃತಿಗಳನ್ನು ರಿಜಿಸ್ಟಾçರ್, ಕರ್ನಾಟಕ ಜಾನಪದ ಅಕಾಡೆಮಿ, ಎರಡನೇ ಮಹಡಿ, ಕನ್ನಡ […]

ಉಡುಪಿ:ಯುವ ಪರಿವರ್ತಕರ ಹುದ್ದೆ : ಅರ್ಜಿ ಆಹ್ವಾನ

ಉಡುಪಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಯುವ ಸ್ಪಂದನ ಕೇಂದ್ರದಲ್ಲಿ ಗೌರವಧನ ಆಧಾರದ ಮೇಲೆಯುವ ಪರಿವರ್ತಕರ ಹುದ್ದೆಯ ಕರ್ತವ್ಯ ನಿರ್ವಹಿಸಲು ಯಾವುದೇ ಪದವಿ ಅಥವಾ ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರುವ 21 ರಿಂದ 35 ವರ್ಷದೊಳಗಿನ ಅರ್ಹ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕನ್ನಡ ಸ್ಪಷ್ಠವಾಗಿ ಮಾತನಾಡಬಲ್ಲ, ಸಂವಹನ ಕಲೆ ಕೌಶಲ್ಯ ಹೊಂದಿರುವ ಹಾಗೂ ಸಮುದಾಯದಲ್ಲಿ ಕೆಲಸ ಮಾಡಿದವರಿಗೆ ಆದ್ಯತೆ ನೀಡಲಾಗುವುದು. ಸ್ವ-ವಿವರ ಹಾಗೂ ಮೂಲ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ಮೇ 15 ಕೊನೆಯ ದಿನವಾಗಿದ್ದು, ಹೆಚ್ಚಿನ […]

ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ನೂತನ ಪದಾಧಿಕಾರಿಗಳ ಆಯ್ಕೆ.

ಉಡುಪಿ: ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ನೂತನ ಪದಾಧಿಕಾರಿಗಳ ಆಯ್ಕೆ ಅನ್ಸಾರ್ ಅಹಮದ್ ರವರ ಅಧ್ಯಕ್ಷತೆಯಲ್ಲಿ ನೂತನವಾಗಿ ಆಯ್ಕೆಯಾದ ಜಿಲ್ಲಾಧ್ಯಕ್ಷರಾದ ಸುಜಯ್ ಪೂಜಾರಿ ಮಹಿಳಾ ಜಿಲ್ಲಾಧ್ಯಕ್ಷರಾದ ಜ್ಯೋತಿ ಸೇರಿಗಾರ್ತಿ ರವರ ನೇತೃತ್ವದಲ್ಲಿ ಮೇ.4 ರಂದು ನಡೆಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ಸಮಿತಿ ರಚನೆಯಾಗಿ ಘೋಷಿಸಲಾಯಿತು. ಕರವೇ ನೂತನ ಜಿಲ್ಲಾ ಉಪಾಧ್ಯಕ್ಷರಾಗಿ ಸಯ್ಯದ್ ನಿಜಾಮ್, ಅಲ್ಫೋನ್ಸ್ ಮಿನೇಜಸ್, ಸುಧೀರ್ ಪೂಜಾರಿ ಅವರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ವಿಜಯ ಪೂಜಾರಿ ಕಾರ್ಯದರ್ಶಿಯಾಗಿ ಸಂತೋಷ ಕುಲಾಲ ಸಂಘಟನಾ […]