ಉಡುಪಿ: ಸಿವಿಲ್ ಇಂಜಿನಿಯರ್ ರವಿರಾಜ್ ಉಡುಪ ನಿಧನ

ಉಡುಪಿ, ಮೇ 02: ಉಡುಪಿ ಕುಕ್ಕಿಕಟ್ಟೆ ನಿವಾಸಿ ಸಿವಿಲ್ ಇಂಜಿನಿಯರ್ ರವಿರಾಜ್ ಉಡುಪ 57 ವರ್ಷ ತಮ್ಮ ಸ್ವಗ್ರಹದಲ್ಲಿ ಮೇ01 ರಂದು ಗುರುವಾರ ಹೃದಯಘಾತದಿಂದ ನಿಧನ ರಾದರು. ಮೃತರು ಪತ್ನಿ, ಪುತ್ರ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಉಡುಪಿ ಪರಿಸರದಲ್ಲಿ ನೂರಾರು ಮನೆ, ಕಟ್ಟಡಗಳನ್ನೂ ನಿರ್ಮಿಸಿ ಪ್ರಸಿದ್ದರಾಗಿದ್ದರು. ಉಡುಪಿ ಸಿವಿಲ್ ಇಂಜಿನಿಯರ್ಸ್ ಸಂಸ್ಥೆಯ ನಿರ್ದೇಶಕರಾಗಿ ಸೇವೆ ನೀಡುತಿದ್ದರು, ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಕೆ.ರಂಜನ್ ಸಂತಾಪ ವ್ಯಕ್ತಪಡಿಸಿ ಶೃದ್ದಾಂಜಲಿ ಕೋರಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ: ಉಡುಪಿಯ ಕೆ. ಶ್ರೀನಿತ್ ಎಸ್. ಶೇರಿಗಾರ್ ಗೆ 623 ಅಂಕ

ಉಡುಪಿ: ಉಡುಪಿಯ ಶ್ರೀ ಅನಂತೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಕೆ. ಶ್ರೀನಿತ್ ಎಸ್. ಶೇರಿಗಾರ್ ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 623 ಅಂಕ ಪಡೆದು ರಾಜ್ಯಕ್ಕೆ ತೃತೀಯ ಸ್ಥಾನ ಗಳಿಸಿದ್ದಾರೆ. ಇವರು ದಿ. ಸುರೇಶ್ ಶೇರಿಗಾರ್ ಬೈಲಕೆರೆ ಹಾಗೂ ಗಾಯತ್ರಿ ಶೇರಿಗಾರ್ ಅವರ ಸುಪುತ್ರ.

ಮೇ 3ರಂದು ಉಡುಪಿಯಲ್ಲಿ “ಮರಳಿ ಮನಸಾಗಿದೆ” ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ

ಉಡುಪಿ: ಮರಳಿ ಮನಸಾಗಿದೆ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಮೇ 3ರಂದು ಸಂಜೆ 4.30ಕ್ಕೆೆ ಯಕ್ಷಗಾನ ಕಲಾಕೇಂದ್ರದ ಐವೈಸಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಚಿತ್ರದ ನಿರ್ಮಾಪಕ ಮುದೇಗೌಡ್ರು ನವೀನ್ ಕುಮಾರ್ ತಿಳಿಸಿದರು. ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಸಮಾರಂಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್‌ಪಾಲ್ ಎ.ಸುವರ್ಣ ಸಹಿತ ಹಲವಾರು ಮಂದಿ ಜನಪ್ರತಿನಿಧಿಗಳು ಹಾಗೂ ಗಣ್ಯರು ಭಾಗವಹಿಸಲಿದ್ದಾಾರೆ ಎಂದರು. ಉಡುಪಿ, ಮಂಗಳೂರು, ಸುರತ್ಕಲ್, ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ನಾಗರಾಜ್ ಶಂಕರ್ ನಿರ್ದೇಶಿಸಿರುವ […]

ಮೇ 3 ರಂದು ಕೊಡವೂರು ಜುಮಾದಿ ಕೋಲ

ಉಡುಪಿ: ಮೇ 3 ಶನಿವಾರ ದಂದು ನಡೆಯುವ ಜುಮಾದಿ ಕೋಲಕ್ಕೆ ಬೇಕಾದ ಎಲ್ಲಾ ಅನುಮತಿಯನ್ನು ಪಡೆದಿದ್ದು, ಕೊಡವೂರು ಜುಮಾದಿ ಕೊಲವು ನಿಗದಿಯಂತೆ ಖಾಸಗಿ ಪಟ್ಟೆ ಜಾಗದಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ಮಾನ್ಯ ಜಿಲ್ಲಾಧಿಕಾರಿಯವರ ಆದೇಶ 67 ಸೆನ್ಸ್ ಸರಕಾರಿ ಜಾಗಕ್ಕೆ ಮಾತ್ರ ನಿಷೇಧಾಜ್ಞೆಯನ್ನು ಜಾರಿಗೊಳಿಸಿರುತ್ತಾರೆ. ಕೊಡವೂರ್ದ ಕೋಲವು ಖಾಸಗಿ ಪಟ್ಟೆ ಜಾಗದಲ್ಲಿರುವುದರಿಂದ ಮಾನ್ಯ ಜಿಲ್ಲಾಧಿಕಾರಿಯವರ ಆದೇಶವು ಕೊಡವೂರ್ದ ಜುಮಾದಿ ಕೋಲ ನಡೆಯುವ ಸ್ಥಳದ ಮೇಲೆ ಅನ್ವಹಿಸುವುದಿಲ್ಲ. ಆದೇಶವು ದೈವಸ್ಥಾನ ವಿರುವ ಜಾಗಕ್ಕೆ 8 ಜನ ಹೋಗಲು ಅವಕಾಶ ಕೊಟ್ಟಿದ್ದು […]

ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದಿಂದ ಕೈಗಾರಿಕಾ ನಾವೀನ್ಯತೆಗೆ ಮತ್ತೊಂದು ಹೆಜ್ಜೆ

ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ ಶ್ರೀ ವಿನಯಚಂದ್ರ ಅವರು ಈಸಿಐಸಿಡಿ – 11 ಎಂಬ ಮೊಬೈಲ್ ಅಪ್ಲಿಕೇಶನ್ ,ಅಭಿವೃದ್ದಿಗೊಳಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಐಸಿಡಿ – 11 ವೈದ್ಯಕೀಯ ಕೋಡ್‌ಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವ ಯೋಜನೆ ಇದಾಗಿದೆ. ಈ ಅಪ್ಲಿಕೇಶನ್‌ನ್ನು ಅಲಾರ್ ಇನ್ನೋವೇಶನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಡಾ.ಸಚಿನ್ ಎಸ್ ಭಟ್ ಅವರ ಮಾರ್ಗದರ್ಶನದಲ್ಲಿ ಅಭಿವೃದ್ದಿ ಪಡಿಸಲಾಗಿದೆ. ಈಸಿ ಐಸಿಡಿ – […]