ಹೆಬ್ರಿ: ಕುಡಿಯಲು ಹಣ ಕೇಳಿದ ವಿಚಾರದಲ್ಲಿ ಗಲಾಟೆ: ಪತ್ನಿಯಿಂದ ಪತಿಯ ಕೊಲೆ; ಆರೋಪಿ ಬಂಧನ

ಹೆಬ್ರಿ: ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಪತಿಯನ್ನು ಪತ್ನಿಯೇ ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ಎ.30ರಂದು ಮಧ್ಯಾಹ್ನ ವೇಳೆ ನಾಲ್ಕೂರು ಎಂಬಲ್ಲಿ ನಡೆದಿದೆ. ಮೃತರನ್ನು ನಾಲ್ಕೂರು ನಿವಾಸಿ ಗಣಪತಿ ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ಮೃತರ ಪತ್ನಿ ಜಯಂತಿ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಗಣಪತಿ ಮದ್ಯಪಾನ ಮಾಡುವ ಅಭ್ಯಾಸ ಹೊಂದಿದ್ದು, ಪ್ರತಿದಿನ ಕುಡಿದು ಬಂದು ಮನೆಯಲ್ಲಿ ಹೆಂಡತಿಯೊಂದಿಗೆ ಗಲಾಟೆ ಮಾಡುತ್ತಿದ್ದರು. ಎ.30ರಂದು ಕೂಡ ಗಣಪತಿ ಹಾಗೂ ಜಯಂತಿ ನಡುವೆ ಗಲಾಟೆ ನಡೆದಿದ್ದು, ಈ ವೇಳೆ […]
ಉಡುಪಿ: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಹಾಗೂ ರಾಷ್ಟ್ರೋತ್ಥಾನ ಪದವಿ ಪೂರ್ವ ಕಾಲೇಜು ಕಟ್ಟಡಗಳ ಲೋಕಾರ್ಪಣೆ

ಬ್ರಹ್ಮಾವರ: ದೇಶದ ಪ್ರತಿಯೊಬ್ಬ ಮಗುವೂ ಸತ್ಪ್ರಜೆಯಾಗಿ ಬೆಳೆಯಲು ಈ ನೆಲದ ಸಂಸ್ಕೃತಿಯನ್ನು ಮಕ್ಕಳಲ್ಲಿ ತುಂಬಬೇಕು ಎಂದು ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಬುಧವಾರ ಹೇಳಿದ್ದಾರೆ. ರಾಷ್ಟ್ರೋತ್ಥಾನ ಪರಿಷತ್ ವತಿಯಿಂದ ಚೇರ್ಕಾಡಿ ಗ್ರಾಮದ ಕೇಶವ ನಗರದ ರಾಣಿ ಅಬ್ಬಕ್ಕ ರಸ್ತೆಯಲ್ಲಿ ನಿರ್ಮಾಣಗೊಂಡ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ (ಸಿಬಿಎಸ್‌ಇ) ಹಾಗೂ ರಾಷ್ಟ್ರೋತ್ಥಾನ ಪದವಿ ಪೂರ್ವ ಕಾಲೇಜು ಕಟ್ಟಡಗಳ ಲೋಕಾರ್ಪಣೆ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡುತಿದ್ದರು. ದೇಶದ ಅಂತ:ಸ್ಸತ್ವ ಕುಗ್ಗುತ್ತಿದ್ದು, ಇದನ್ನು ತಡೆಗಟ್ಟಿ ಮಾತೃಭೂಮಿ ರಕ್ಷಿಸಲು ನೆಲ, ಜಲ, ಆಚಾರ, ವಿಚಾರ, […]