ಹೊಸದಿಲ್ಲಿ:ಚಿನ್ನದ ಬೆಲೆಯಲ್ಲಿ ಅಲ್ಪ ಇಳಿಕೆ: ಇಂದಿನ ಚಿನ್ನದ ದರ ಎಷ್ಟಿದೆ?

ಹೊಸದಿಲ್ಲಿ: ಬೆಂಗಳೂರಿನಲ್ಲಿ ಗುರುವಾರ 24 ಕ್ಯಾರೆಟ್ ಚಿನ್ನ ಒಂದು ಗ್ರಾಂ.ಗೆ 8,775ರೂ.ಗೆ ಮಾರಾಟವಾಗಿದೆ. ಅದರಂತೆ ಒಂದು ಪವನ್ ಅಂದರೆ 8ಗ್ರಾಂ.ಚಿನ್ನ 70,000ರೂ.ಗೆ ಮಾರಾಟವಾಗಿದೆ. ಬುಧವಾರದ ದರಕ್ಕೆ ಹೋಲಿಕೆ ಮಾಡಿದರೆ ಗುರುವಾರ ಪ್ರತಿ ಗ್ರಾಂ ಚಿನ್ನದ ದರದಲ್ಲಿ 205ರೂ. ಇಳಿಕೆಯಾಗಿದೆ ಎಂದು ವರ್ತಕರು ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಗುರುವಾರ 24 ಕ್ಯಾರೆಟ್ ಚಿನ್ನ ಒಂದು ಗ್ರಾಂ.ಗೆ ದರ 9,573ರೂ.ಗೆ ಮಾರಾಟವಾಗಿದೆ. ಅದರಂತೆ 24 ಕ್ಯಾರೆಟ್‌ನ ಒಂದು ಪವನ್ ಅಂದರೆ 8ಗ್ರಾಂ. ಚಿನ್ನದ ದರ 76,584ರೂ.ಆಗಿದೆ. ದಿಲ್ಲಿಯಲ್ಲಿ ಗುರುವಾರ 22 […]
ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ.!

ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ 4 ದಿನ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನಿಂದ ಮೇ 4ರವರೆಗೆ ಭಾರೀ ಮಳೆಯಾಗಲಿದ್ದು, ಕರಾವಳಿ ಕರ್ನಾಟಕ ಹಾಗೂ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಯೆಲ್ಲೋ ಅಲರ್ಟ್ ಹಾಗೂ ಉತ್ತರ ಒಳನಾಡು ಪ್ರದೇಶಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಹಾಸನ, ಶಿವಮೊಗ್ಗ, ಮೈಸೂರು, ಚಿಕ್ಕಮಗಳೂರು, ಚಾಮರಾಜನಗರ, ಮಂಡ್ಯ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. […]
ದೇಶಾದ್ಯಂತ ಇಂದಿನಿಂದ ಅಮುಲ್ ಹಾಲಿನ ದರ 2 ರೂ. ಏರಿಕೆ.

ಬೆಂಗಳೂರು: ನಂದಿನಿ ಹಾಲಿನ ದರ ಏರಿಕೆ ಬಳಿಕ ಇದೀಗ ದೇಶಾದ್ಯಂತ ಅಮುಲ್ ಹಾಲಿನ ದರ 2 ರೂ. ಏರಿಕೆಯಾಗಿದೆ. ಇತ್ತೀಚಿಗಷ್ಟೇ ಕೆಎಂಎಫ್ ನಂದಿನಿ ಹಾಲಿನ ದರವನ್ನು ಏರಿಕೆ ಮಾಡಿತ್ತು. ಇದೀಗ ಅಮುಲ್ ಹಾಲಿನ ದರ ಹೆಚ್ಚಿಸುವ ಮೂಲ ಗ್ರಾಹಕರಿಗೆ ಮತ್ತೆ ಬರೆ ಎಳೆದಂತಾಗಿದೆ. ದೇಶಾದ್ಯಂತ ಪರಿಷ್ಕೃತ ದರ ಇಂದಿನಿಂದಲೇ (ಮೇ 1) ಜಾರಿಯಾಗಿದೆ. ಈ ದರ ಏರಿಕೆಯು ಅಮುಲ್ ಸ್ಟ್ಯಾಂಡರ್ಡ್, ಅಮುಲ್ ಬಫೆಲೋ, ಅಮುಲ್ ಗೋಲ್ಡ್, ಅಮುಲ್ ಸ್ಲಿಮ್ ಆಂಡ್ ಟ್ರಿಮ್, ಅಮುಲ್ ಚಾಯ್‌ಮಜಾ, ಅಮುಲ್ ತಾಜಾ […]
ಹೊಸದಿಲ್ಲಿ:ಮೇ ತಿಂಗಳಲ್ಲಿ ಬಿಸಿಲ ಬೇಗೆ, ಮಳೆ ಎರಡೂ ಅಧಿಕ!

ಹೊಸದಿಲ್ಲಿ: ಮೇ ತಿಂಗಳಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ತಾಪಮಾನ ವಾಡಿಕೆಗಿಂತ ಅಧಿಕವಾಗಿರಲಿದೆ ಎಂದು ಭಾರತದ ಹವಾಮಾನ ಇಲಾಖೆ ಅಂದಾಜಿಸಿದೆ. ಸಾಮಾನ್ಯಕ್ಕಿಂತ ಹೆಚ್ಚಿನ ಉಷ್ಣಗಾಳಿ ಬೀಸುವ ದಿನಗಳಿಗೆ ವಾಯವ್ಯ, ಕೇಂದ್ರ ಮತ್ತು ಪಕ್ಕದ ಪೂರ್ವಭಾರತ ಸಾಕ್ಷಿಯಾಗಲಿದೆ ಎಂದು ಪ್ರಕಟಿಸಿದೆ. ರಾಜಸ್ಥಾನ, ಹರ್ಯಾಣ, ಪಂಜಾಬ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳದ ಗಂಗಾನದಿ ತೀರ, ಗುಜರಾತ್, ಒಡಿಶಾ, ಛತ್ತೀಸ್ಗಢ, ಮಹಾರಾಷ್ಟ್ರ, ತೆಲಂಗಾಣ ಮತ್ತು ಉತ್ತರ ಕರ್ನಾಟಕದಲ್ಲಿ ಉಷ್ಣಗಾಳಿ ಬೀಸಲಿದೆ ಎಂದು ಮುನ್ಸೂಚನೆ ನೀಡಿದೆ.ವಾಯವ್ಯ ಭಾರತ, ಇಂಡೋ-ಗಂಗಾಬಯಲು ಪ್ರದೇಶ […]
ಪಹಲ್ಗಾಮ್ ಉಗ್ರರ ದಾಳಿ: ಪಾಕ್ ವಿಮಾನಗಳಿಗೆ ವಾಯುಪ್ರದೇಶ ನಿರ್ಬಂಧ.!

ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನದೊಂದಿಗೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತ ಸರಕಾರವು ಪಾಕಿಸ್ತಾನ ವಿಮಾನಯಾನ ಸಂಸ್ಥೆಗಳು ತನ್ನ ವಾಯುಪ್ರದೇಶ ಬಳಸುವುದನ್ನು ಬುಧವಾರ ನಿಷೇಧಿಸಿದೆ. ಪಾಕಿಸ್ತಾನ ವಿಮಾನಯಾನ ಸಂಸ್ಥೆಗಳು ಭಾರತೀಯ ವಾಯುಪ್ರದೇಶ ಬಳಸುವುದನ್ನು ನಿಷೇಧಿಸುವಂತೆ ವಾಯುಪಡೆಗೆ ನೋಟಾಮ್ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನವು ಭಾರತೀಯ ವಿಮಾನಯಾನ ಸಂಸ್ಥೆಗಳು ತನ್ನ ವಾಯುಪ್ರದೇಶ ಬಳಸುವುದನ್ನು ನಿಷೇಧಿಸಿದ ಒಂದು ವಾರದ ನಂತರ ಈ ಬೆಳವಣಿಗೆ ನಡೆದಿದೆ.