ಮಂಗಳೂರು: ಹಿಂದೂ ಕಾರ್ಯಕರ್ತನ ಭೀಕರ ಹತ್ಯೆ.

ಮಂಗಳೂರು: ಬಜಪೆಯ ಕಿನ್ನಿಪದವು ಬಳಿ ಹಿಂದೂ ಕಾರ್ಯಕರ್ತನ ಬರ್ಬರ ಹತ್ಯೆ ನಡೆದಿದೆ. ಸುಹಾಸ್ ಶೆಟ್ಟಿ ಕೊಲೆಯಾದ ಕಾರ್ಯಕರ್ತ. ಸುರತ್ಕಲ್‌ನ ಫಾಜಿಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸುಹಾಸ್ ಶೆಟ್ಟಿಯನ್ನು ರಾತ್ರಿ ಹೊಂಚು ಹಾಕಿ ನಾಲ್ವರು ತಲವಾರಿನಿಂದ ಹತ್ಯೆ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ 2022ರ ಜುಲೈ 28ರಂದು ಸುರತ್ಕಲ್‌ನಲ್ಲಿ ಫಾಜಿಲ್ ಹತ್ಯೆ ನಡೆದಿತ್ತು. ಈ ಹತ್ಯೆ ಪ್ರಕರಣದಲ್ಲಿ ಸುಹಾಸ್ ಶೆಟ್ಟಿ ಮತ್ತು ಇತರ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಈ ಹಿಂದೆ ಬಜರಂಗದಳದ ಗೋರಕ್ಷಾ […]
ನಾಳೆ(ಮೇ.2) SSLC ಪರೀಕ್ಷೆ ಫಲಿತಾಂಶ ಪ್ರಕಟ.

ಬೆಂಗಳೂರು, ಮೇ 01: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ನಡೆಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಮುಕ್ತಾಯಗೊಂಡಿದ್ದು, ವಿದ್ಯಾರ್ಥಿಗಳು ಫಲಿತಾಂಶಕ್ಕೆ ಕಾಯುತ್ತಿದ್ದಾರೆ. ಈಗಾಗಲೇ ಮೌಲ್ಯಮಾಪನ ಕೂಡ ಮುಕ್ತಾಯಗೊಂಡಿದೆ. ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಶುಕ್ರವಾರ (ಮೇ.02) ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಿಸಲಿದೆ.ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಬೆಳಗ್ಗೆ 11.30ಕ್ಕೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಲಿದ್ದಾರೆ. ಮಧ್ಯಾಹ್ನ 12.30ರ ನಂತರ ವೆಬ್‌ಸೈಟ್‌ನಲ್ಲಿ SSLC ಫಲಿತಾಂಶ ಲಭ್ಯವಾಗಲಿದೆ. http://karresults.nic.in ಜಾಲತಾಣದಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ. ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಎಸ್‌ಎಸ್‌ಎಲ್‌ಸಿ […]
ಭಾರತ-ಪಾಕ್ ಯುದ್ಧ, ಪಾಕ್ ನ ನಾಶ ಖಚಿತ! :ನಿಜವಾಗುತ್ತ ಬಾಬಾ ವಂಗಾ ಹೇಳಿದ್ದ ಆ ಭವಿಷ್ಯ: ಸಾಯೋ ಮೊದಲು ಇವರು ಹೇಳಿದ್ದೇನು?

ವಿಶ್ವದಾದ್ಯಂತ ತಮ್ಮ ಭವಿಷ್ಯವಾಣಿಯ ಮೂಲಕ ಇವರು ಈ ಹಿಂದೆ ಸಂಕಲನ ಮೂಡಿಸಿದ್ದರು, ಹೇಳಿದ್ದ ಬಹುತೇಕ ಭವಿಷ್ಯವಾಣಿಗಳೆಲ್ಲಾ ನಿಜವಾದಾಗ ಇಡೀ ಜಗತ್ತೇ ಇವರ ಭವಿಷ್ಯವಾಣಿಯತ್ತ ತಿರುಗಿ ನೋಡಿದ್ದರು. ಹೌದು ಅವರೇ ಬಾಬಾ ವಂಗಾ. ಇವರು ಈವರೆಗೆ ಎರಡನೆಯ ಮಹಾಯುದ್ದದಿಂದ ಹಿಡಿದು, ಅಮೇರಿಕಾ ಮೇಲಿನ ದಾಳಿ ಮತ್ತು ಇಂದಿರಾಗಾಂಧಿ ಸಾವಿನವರೆಗೆ ಹೇಳಿದ್ದ ಭವಿಷ್ಯವೆಲ್ಲಾ ನಿಜವಾಗಿದ್ದು. ಇದೀಗ ಬಾಬಾ ವಂಗಾ ಸಾಯುವ ಮುನ್ನ ಹೇಳಿದ್ದ ಭವಿಷ್ಯವಾಣಿಯ ಕುರಿತು ಚರ್ಚೆ ಶುರುವಾಗಿದೆ. ಮುಂದೊಂದು ದಿನ ಭಾರತ-ಪಾಕ್ ಯುದ್ಧ ನಡೆಯಲಿದೆ ಈ ಯುದ್ಧದಲ್ಲಿಇಸ್ಲಾಮಿಕ್ ದೇಶದ […]
ನಿರ್ಮಾಣ ಕಲ್ಪನೆಗಳು, ಭವಿಷ್ಯವನ್ನು ರೂಪಿಸುವುದು: ಪ್ರೊ. ಕೆ.ಜಿ. ಸುರೇಶ್

ಹೊಸದಿಲ್ಲಿ : ಇಂಡಿಯಾ ಹ್ಯಾಬಿಟ್ಯಾಟ್ ಸೆಂಟರ್ (ಐಎಚ್‌ಸಿ) ತನ್ನ ಹೊಸ ನಿರ್ದೇಶಕರಾಗಿ ಪ್ರೊ. (ಡಾ.) ಕೆ.ಜಿ. ಸುರೇಶ್ ಅವರನ್ನು ನೇಮಕ ಮಾಡಿದೆ. ಪ್ರಸಿದ್ಧ ಪತ್ರಕರ್ತ, ಮಾಧ್ಯಮ ಶಿಕ್ಷಣತಜ್ಞ ಮತ್ತು ಸಂವಹನ ತಂತ್ರಜ್ಞ ಪ್ರೊ. ಸುರೇಶ್ ಪತ್ರಿಕೋದ್ಯಮ, ಬೋಧನೆ ಮತ್ತು ಸಂಸ್ಥೆ ನಿರ್ಮಾಣದಲ್ಲಿ ಮೂರು ದಶಕಗಳ ಅನುಭವವನ್ನು ಹೊಂದಿದ್ದಾರೆ. ಸಂಸ್ಕೃತಿ, ಸಂವಾದ ಮತ್ತು ಸಮುದಾಯ ತೊಡಗಿಸಿಕೊಳ್ಳುವಿಕೆಗೆ ಒಂದು ರೋಮಾಂಚಕ ಕೇಂದ್ರವಾಗಿ ಐಎಚ್‌ಸಿ ತನ್ನ ಪಾತ್ರವನ್ನು ಬಲಪಡಿಸುವತ್ತ ಗಮನಹರಿಸುತ್ತಿರುವ ಸಮಯದಲ್ಲಿ ಅವರ ನಾಯಕತ್ವ ಬರುತ್ತದೆ. ಪ್ರೊ. ಸುರೇಶ್ ಭಾರತದ ಕೆಲವು […]
ಕಸಾಪದ ಬೈಲಾಕ್ಕೆ ತಿದ್ದುಪಡಿ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ: ಮಹೇಶ್ ಜೋಶಿ

ಉಡುಪಿ: ನಾನು ಚುನಾವಣಾ ಪ್ರಣಾಳಿಕೆಯಲ್ಲಿ ಕಸಾಪ ಬೈಲಾಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರುವುದಾಗಿ ಹೇಳಿದ್ದೆ. ಆ ಪ್ರಕಾರ ನಾನು ನಡೆದುಕೊಂಡಿದ್ದೇನೆ. ಬೈಲಾದಲ್ಲಿ ಸ್ಪಷ್ಟತೆ ತರುವುದು ಅಧ್ಯಕ್ಷನ ಕರ್ತವ್ಯ. ನಾನು ಕರ್ತವ್ಯ ಭ್ರಷ್ಟನಾಗಲಾರೆ ಎಂದು ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಸ್ಪಷ್ಟನೆ ನೀಡಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಸಾಪದ ಬೈಲಾಕ್ಕೆ ತಿದ್ದುಪಡಿ ಮಾಡುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಅಲ್ಲದೆ ಕಸಾಪ ಬೈಲಾ ಇದೇ ಮೊದಲ ಬಾರಿಗೆ ತಿದ್ದುಪಡಿ ಮಾಡಲಾಗುತ್ತಿಲ್ಲ, ಈ ಹಿಂದೆಯೂ ಮಾಡಲಾಗಿದೆ. ನಾವು ಈವರೆಗೆ ಮಾಡಲಾದ ತಿದ್ದುಪಡಿ ಯಾವುದೂ […]