ಮಣಿಪಾಲ:Kidzee ಯಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರ ಕಾರ್ಯಕ್ರಮ

ಮಣಿಪಾಲ:Kidzee ಯಲ್ಲಿ ಮಕ್ಕಳಿಗೆ ಬೇಸಿಗೆ ಶಿಬಿರದ ಪ್ರಯುಕ್ತ ಕಲಾತ್ಮಕವಾದ ಚಟುವಟಿಕೆಗಳನ್ನು ಏರ್ಪಡಿಸಲಾಗಿದೆ. ಮಕ್ಕಳಿಗೆ 5 ರಿಂದ 10 ವರ್ಷ ವಯಸ್ಸಾಗಿರಬೇಕು.ಮೇ 2 ರಿಂದ 15 ರವರೆಗೆ ಸೋಮವಾರದಿಂದ ಶನಿವಾರ ಸಮಯ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12:30 ರ ತನಕ ಇರಲಿದೆ. ಮಧ್ಯಾಹ್ನ 12.30 ರಿಂದ ಡೇ ಕೇರ್ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:📞9591982777ಕಿಡ್ಜೀ ಮಣಿಪಾಲ, ಅನಂತನಗರ 1 ನೇ ಹಂತ, ಮಣಿಪಾಲ

ಬ್ರಹ್ಮಾವರ:ಎ.30 ರಂದು ರಾಷ್ಟ್ರೋತ್ಥಾನ ವಿದ್ಯಾಸಂಸ್ಥೆಗಳ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮ

ಉಡುಪಿ: ಬ್ರಹ್ಮಾವರ ತಾಲೂಕು ಚೇರ್ಕಾಡಿ ಗ್ರಾಮದ ಕೇಶವ ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಉಡುಪಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ (ಸಿಬಿಎಸ್‌ಸಿ) ಹಾಗೂ ರಾಷ್ಟ್ರೋತ್ಥಾನ ಪದವಿಪೂರ್ವ ಕಾಲೇಜು ಕಟ್ಟಡಗಳ ಲೋಕಾರ್ಪಣೆ ಎ.30ರಂದು ನಡೆಯಲಿದೆ ಎಂದು ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ.ದಿನೇಶ್ ಹೆಗ್ಡೆ ತಿಳಿಸಿದ್ದಾರೆ. ಕೇಶವನಗರದಲ್ಲಿ 20 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಶಾಲಾ ಕಟ್ಟಡದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು. ಎ.30ರ ಬುಧವಾರ ಸಂಜೆ 4:30ಕ್ಕೆ ಲೋಕಾರ್ಪಣೆ ನಡೆಯಲಿದ್ದು, ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರ ಉಪಸ್ಥಿತಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ದತ್ತಾತ್ರೇಯ […]

ಉಡುಪಿ:ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ಲಾಸ್ಟಿಕ್ ಬಾಟಲಿ ಬಳಕೆ ಸಂಪೂರ್ಣ ನಿಷೇಧ

ಉಡುಪಿ: ಕುದುರೆಮುಖ ವನ್ಯಜೀವಿ ವಿಭಾಗದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ಲಾಸ್ಟಿಕ್ ಬಾಟಲಿಯ ಬಳಕೆಯನ್ನು ಮೇ 01 ರಿಂದ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪ್ರವಾಸಿಗರ ಉಪಯೋಗಕ್ಕೆ ರಾಷ್ಟ್ರೀಯ ಉದ್ಯಾನವನದಲ್ಲಿ ಹಾದು ಹೋಗಿರುವ ರಸ್ತೆಗಳಲ್ಲಿ ಇರುವ ಮುಳ್ಳೂರು ತನಿಖಾ ಠಾಣೆ, ಬಸ್ರಿಕಲ್ಲು ತನಿಖಾ ಠಾಣೆ ಹಾಗೂ ತನಿಕೋಡು ತನಿಖಾ ಠಾಣೆಯಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದ್ದು, ಪ್ರವಾಸಿಗರು ಇದರ ಸಂಪೂರ್ಣ ಪ್ರಯೋಜನ ಪಡೆದುಕೊಂಡು ಲಭ್ಯ ನೀರನ್ನು ಅಲ್ಲಿಯೇ ಕುಡಿಯಬಹುದಾಗಿದೆ. ಪ್ರವಾಸಿಗರು ಯಾವುದೇ ಪ್ಲಾಸ್ಟಿಕ್ ಬಾಟಲಿ ತೆಗೆದುಕೊಂಡು ಹೋಗುವುದನ್ನು ಸಂಪೂರ್ಣವಾಗಿ ನಿಷೇದಿಸಲಾಗಿದ್ದು, […]

ಉಡುಪಿ: ನೋವೇಲ್ಟಿ ಜ್ಯುವೆಲ್ಲರಿಯಲ್ಲಿ ಅಕ್ಷಯಾ ತೃತೀಯಾಕ್ಕೆ ವಿಶೇಷ ಆಫರ್

ಉಡುಪಿ:ಜಿಲ್ಲೆಯ ಪ್ರಪ್ರಥಮ ಜುವೆಲ್ಲರಿ ಎಂಬ ಹೆಮ್ಮೆಯೊಂದಿಗೆ 8ನೇ ದಶಕದತ್ತ ಕಾಲಿಡುತ್ತಿರುವ “ನೋವೆಲ್ಟಿ”ಯ ಸಹ ಸಂಸ್ಥೆಯಾಗಿರುವ ಉಡುಪಿಯ ರಥ ಬೀದಿಯಲ್ಲಿರುವ ನೋವೇಲ್ಟಿ ಜುವೆಲ್ಲರಿಯು ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ನಮ್ಮಲ್ಲಿ ಖರೀದಿಸಿದ ಆಭರಣಗಳಿಗೆ 1 ಗ್ರಾಂ.ಗೆ 600 ರೂ. ಡಿಸ್ಕೌಂಟ್ ಇರುತ್ತದೆ.ಇದು ದಿನಾಂಕ 24-04-2025 ರಿಂದ 30-4-2025 ರವರೆಗೆ ಈ ಕೊಡುಗೆಗಳು ಇರಲಿದೆ.ಚಿನ್ನ ಖರೀದಿಸಲು ಶುಭಕರವಾಗಿರುವ ಈ ಅಕ್ಷಯ ತೃತೀಯ ದ ದಿನದಂದು ನಮ್ಮಲ್ಲಿ ಖರೀದಿಸುವ ಚಿನ್ನಾಭರಣಗಳಿಗೆ ಅಷ್ಟೇ ತೂಕದ ಬೆಳ್ಳಿ ನಾಣ್ಯವನ್ನು ಉಚಿತವಾಗಿ ನೀಡುತ್ತಿದ್ದೇವೆ. ಇದಲ್ಲದೆ ಬೆಳ್ಳಿ ಪರಿಕರದ […]

ಉಡುಪಿ:ಮೇ 1ರಂದು ಉಡುಪಿ ಜಿಲ್ಲೆಯಾದ್ಯಂತ ವಿಶ್ವ ಕಾರ್ಮಿಕರ ದಿನಾಚರಣೆ

ಉಡುಪಿ: ಎಂಟು ಗಂಟೆ ಕೆಲಸ, ಎಂಟು ಗಂಟೆ ವಿಶ್ರಾಂತಿ, ಎಂಟು ಗಂಟೆ ಮನೊರಂಜನೆಗಾಗಿ ಅಮೇರಿಕಾದ ಚಿಕಾಗೋ ನಗರದಲ್ಲಿ ನಡೆದ ಹೋರಾಟ ಜಗದಗಲ ಹರಡಿ ಕಾರ್ಮಿಕರನ್ನು ಶೋಷಣೆ ಯಿಂದ ವಿಮೋಚನೆಗೊಳಿಸಿ ಜಯ ಪಡೆದ ದಿನವನ್ನು ಜಗತ್ತಿನಾದ್ಯಂತ ಮೇ 1 ವಿಶ್ವ ಕಾರ್ಮಿಕರ ದಿನಾಚರಣೆಯಾಗಿ ಪ್ರತಿ ವರ್ಷ ನಡೆಸಲಾಗುತ್ತಿದ್ದು, ಉಡುಪಿ ಜಿಲ್ಲೆಯಲ್ಲಿ ಕೇಂದ್ರ ಕಾರ್ಮಿಕ ಸಂಘಟನೆ ಗಳ ಜಂಟಿ ಸಮಿತಿಯ ನೇತೃತ್ವದಲ್ಲಿ ಕಾರ್ಮಿಕ ದಿನವನ್ನು ಆಚರಿಸಲಾಗುವುದು. ಉಡುಪಿ ಕೇಂದ್ರದಲ್ಲಿ ಬೆಳಿಗ್ಗೆ 10 ಗಂಟೆಗೆ ಹಳೇ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿಯಿಂದ […]