ಮಣಿಪಾಲ: MSDC ಡ್ರೀಮ್ ಜೋನ್, ಸ್ಕೂಲ್ ಆಫ್ ಪ್ಯಾಶನ್ & ಇಂಟೀರಿಯರ್ ಡಿಸೈನಿಂಗ್’ನಲ್ಲಿ ಮೇ.5, 6 ಹಾಗೂ 7 ರಂದು “CROCHET” ಕಾರ್ಯಾಗಾರ

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ, ಡ್ರೀಮ್ ಜೋನ್, ಸ್ಕೂಲ್ ಆಫ್ ಪ್ಯಾಶನ್ & ಇಂಟೀರಿಯರ್ ಡಿಸೈನಿಂಗ್’ನಲ್ಲಿ ಮೇ.5, 6 ಹಾಗೂ 7 ರಂದು 3 ದಿನ ಕ್ರೋಚೆಟ್ (CROCHET) ಕಾರ್ಯಾಗಾರ ನಡೆಯಲಿದೆ. WHAT TO EXPECT: WHO CAN ATTEND: ನೋಂದಣಿ ಶುಲ್ಕ: ರೂ. 750/- ಹೆಚ್ಚಿನ ವಿವರಗಳು ಅಥವಾ ನೋಂದಣಿಗಾಗಿ, ಸಂಪರ್ಕಿಸಿ: 8123163932 ಮೇ 5 6 ಮತ್ತು 7ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 12:30 ರವರೆಗೆ. ಡ್ರೀಮ್ ಜೋನ್, MSDC ಕಟ್ಟಡ, 2 […]
ಧರ್ಮಾಧಾರಿತ ಭಯೋತ್ಪಾದನೆ ಬಹಳಷ್ಟು ಆತಂಕಕಾರಿ

ಉಡುಪಿ: ಭಯೋತ್ಪಾದನೆಯನ್ನು ಇದುವರೆಗೆ ಮಾನಸಿಕ ಸಮಸ್ಯೆ ಎಂದು ತಿಳಿದಿದ್ದೆವು. ಉಗ್ರರು ಎಲ್ಲೆಂದರಲ್ಲಿ ಜನನಿಬಿಡ ಪ್ರದೇಶಗಳಲ್ಲಿ ಬಾಂಬ್ ಹಾಕುತ್ತಿದ್ದರು. ಆದರೆ ಪಹಲ್ಗಾಮ್‌ನಲ್ಲಿ ನಡೆದ ದಾಳಿ ಹಿಂದೂಗಳನ್ನು ಗುರಿಯಾಗಿಸಿದ್ದು, ಬಹಳಷ್ಟು ಕಳವಳಕಾರಿಯಾಗಿದೆ. ಇದೊಂದು ವ್ಯವಸ್ಥಿತ ಪಿತೂರಿಯಾಗಿದೆ ಎಂದು ಪುತ್ತಿಗೆ ಸುಗುಣೇಂದ್ರ ಶ್ರೀಗಳು ಹೇಳಿದ್ದಾರೆ. ಕೃಷ್ಣಮಠದ ಗೀತಾಮಂದಿರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಧರ್ಮಾಧಾರಿತ ಭಯೋತ್ಪಾದನೆ ಎಂಬುದು ಬಹಳಷ್ಟು ಆತಂಕಕಾರಿ. ಇದಕ್ಕೆ ಕೇಂದ್ರ ಸರಕಾರ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಭಾರತ-ಪಾಕಿಸ್ಥಾನದ ನಡುವೆ ಯುದ್ಧ ಬೇಕೋ, ಬೇಡವೋ ಎಂಬ ಬಗ್ಗೆ ಕೇಂದ್ರ ಸರಕಾರ […]
ಮಣಿಪಾಲದಲ್ಲಿ ಒಳಚರಂಡಿಗೆ ಕೊಳಚೆ ನೀರು ಬಿಡುವ ಹೋಟೆಲ್, ಅಪಾರ್ಟ್ ಮೆಂಟ್ ಗಳ ನೀರು ಸಂಪರ್ಕ ಕಡಿತ: ನಗರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯ

ಉಡುಪಿ: ಮಣಿಪಾಲ ನಗರ ವ್ಯಾಪ್ತಿಯಲ್ಲಿ ಒಳಚರಂಡಿಗೆ ಹೋಟೆಲ್, ಅಪಾರ್ಟ್ ಮೆಂಟ್ ಗಳಿಂದ ಕೊಳಚೆ ನೀರು ಬಿಡಲಾಗುತ್ತಿದ್ದು, ಈಗಾಗಲೇ ಅಂತಹ ಹೋಟೆಲ್, ಅಪಾರ್ಟ್ ಮೆಂಟ್ ಗಳಿಗೆ ನೋಟಿಸ್ ಜಾರಿಗೊಳಿಸಿ ತಲಾ 25 ಸಾವಿರ ದಂಡ ವಿಧಿಸಲಾಗಿದೆ. ಇದೇ ರೀತಿ ಕೊಳಚೆ ನೀರು ಬಿಡುವುದನ್ನು ಮುಂದುವರಿದರೆ ನೀರಿನ ಸಂಪರ್ಕ ಕಡಿತಗೊಳಿಸುತ್ತೇವೆ ಎಂದು ನಗರಸಭೆಯ ಸಹಾಯಕ ಅಭಿಯಂತರ ದುರ್ಗಾಪ್ರಸಾದ್ ತಿಳಿಸಿದರು. ಉಡುಪಿ ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಇಂದು ನಡೆದ ಸಾಮಾನ್ಯಸಭೆಯಲ್ಲಿ ಸದಸ್ಯರ ಪ್ರಶ್ನೆಗೆ ಉತ್ತರಿಸಿದರು.ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ […]
ಪರ್ಕಳ ಮಹಾಲಿಂಗೇಶ್ವರ ಮಹಾಣಗಣಪತಿ ದೇವಸ್ಥಾನ: ಮೇ11ರವರೆಗೆ ಬ್ರಹ್ಮಕಲಶೋತ್ಸವ ಸಂಭ್ರಮ, ಧಾರ್ಮಿಕ-ಸಾಂಸ್ಕೃತಿಕ ವೈಭವ.

ಉಡುಪಿ: ಪರ್ಕಳದಲ್ಲಿರುವ ಐತಿಹಾಸಿಕ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ- ಮಹಾಗಣಪತಿ, ಮಹಿಷಮರ್ದಿನಿ ದೇವಸ್ಥಾನದಲ್ಲಿ ಏ.27ರಿಂದ ಮೇ 11ರವರೆಗೆ ಕ್ಷೇತ್ರಾಧಿಪತಿ ಮಹಾಲಿಂಗೇಶ್ವರ ದೇವರ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ನಡೆಯಲಿದೆ. ಏ.27ರಂದು ಸಂಜೆ 4 ಗಂಟೆಗೆ ಪರ್ಕಳದ ವಿಶ್ವೇಶ್ವರ ಸಭಾಭವನದ ಬಳಿಯಿಂದ ಕ್ಷೇತ್ರಕ್ಕೆ ಹಸಿರು ಹೊರೆಕಾಣಿಕೆ ಮೆರವಣಿಗೆ ಬರಲಿದೆ. ಸಂಜೆ 6 ಗಂಟೆಗೆ ಮಣಿಪಾಲದ ಮಹೇಶ ಭಂಡಾರಿ ಮತ್ತು ಬಳಗದಿಂದ ಭಕ್ತಿ, ಜಾನಪದ ಗೀತಾ ವೈಭವ ನಡೆಯಲಿದೆ. ಏ.28, 29 ಮತ್ತು 30ರಂದು ಬೆಳಗ್ಗೆ 9ರಿಂದ ವಿವಿಧ ವೈದಿಕ ವಿಧಿ-ವಿಧಾನಗಳು ನಡೆಯಲಿದೆ. […]
ಉಳ್ಳಾಲ ಮಂಜನಾಡಿಯಲ್ಲಿ ಯಕ್ಷಗಾನ ಕಾರ್ಯಾಗಾರ ಯಕ್ಷ ಸೌರಭ

ಉಡುಪಿ: ಯಕ್ಷಗಾನ ಕಲೆ ಒಂದು ವಿಶ್ವವಿದ್ಯಾಲಯವಿದ್ದಂತೆ. ಈ ಕಲೆಯ ಆಳ, ವಿಸ್ತಾರ, ಸೊಬಗನ್ನು ಯಕ್ಷಾಸಕ್ತರಿಗೆ ಮುಟ್ಟಿಸಲು ವಿವಿಧ ಕಡೆಗಳಲ್ಲಿ ಯಕ್ಷಗಾನ ಕಾರ್ಯಾಗಾರಗಳನ್ನು ಅಕಾಡೆಮಿ ಹಮ್ಮಿಕೊಳ್ಳುವುದರ ಮೂಲಕ ಕಲೆಯ ಬೆಳೆವಣಿಗೆಗೆ ಪ್ರೋತ್ಸಾಹಿಸುತ್ತಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಭಾನುವಾರ ಮಂಗಳೂರು ಉಲ್ಲಾಳದ ಮಂಜನಾಡಿ ಶ್ರೀ ವಿಷ್ಣುಮೂರ್ತಿ ಜನಾರ್ದನ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ವತಿಯಿಂದ ಹಮ್ಮಿಕೊಂಡ ‘ತೆಂಕುತಿಟ್ಟು ಯಕ್ಷಗಾನ ಮುಖವರ್ಣಿಕೆ ಮತ್ತು ವೇಷಭೂಷಣ ಕಟ್ಟುವ ಬಗ್ಗೆ ಕಾರ್ಯಾಗಾರ, […]