ಕಟಪಾಡಿ:ತ್ರಿಶಾ ಸಂಸ್ಥೆ: ಭಯೋತ್ಪಾದನೆ ವಿರುದ್ಧ ಹೋರಾಟ;ಎಲ್ಲರೂ ಒಂದಾಗಿ ನಿಲ್ಲಬೇಕಿದೆ

ಉಡುಪಿ:ಕಾಶ್ಮೀರದಲ್ಲಿ ನಡೆದ ಭಯಾನಕ ಉಗ್ರ ಕೃತ್ಯದ ವಿರುದ್ಧ ಕಟಪಾಡಿಯ ತ್ರಿಶಾ ಸಂಸ್ಥೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಭಯೋತ್ಪಾದನೆ ವಿರುದ್ಧ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ವಿಧಾನಸಭಾ ಸದಸ್ಯರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿ ಅವರು ಮಾತನಾಡುತ್ತಾ, ಭಯೋತ್ಪಾದನೆ ಮಾನವತೆಯ ವಿರುದ್ಧದ ಹೋರಾಟ. ಇದನ್ನು ಎದುರಿಸಲು ನಾವು ಎಲ್ಲರೂ ಒಂದಾಗಿ ನಿಲ್ಲಬೇಕಿದೆ. ಎಲ್ಲ ಜನರು ಒಂದಾದರೆ, ಯಾವುದೇ ರೀತಿಯ ಭಯೋತ್ಪಾದನೆಯನ್ನೂ ಎದುರಿಸಲು ಸಾಧ್ಯ” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ತ್ರಿಶಾ ಸಂಸ್ಥೆಯ ಅಧ್ಯಕ್ಷರಾದ ಸಿಎ ಗೋಪಾಲಕೃಷ್ಣ ಭಟ್ […]
ಉಡುಪಿ: ನೋವೇಲ್ಟಿ ಜ್ಯುವೆಲ್ಲರಿಯಲ್ಲಿ ಅಕ್ಷಯಾ ತೃತೀಯಾಕ್ಕೆ ವಿಶೇಷ ಆಫರ್

ಉಡುಪಿ:ಜಿಲ್ಲೆಯ ಪ್ರಪ್ರಥಮ ಜುವೆಲ್ಲರಿ ಎಂಬ ಹೆಮ್ಮೆಯೊಂದಿಗೆ 8ನೇ ದಶಕದತ್ತ ಕಾಲಿಡುತ್ತಿರುವ “ನೋವೆಲ್ಟಿ”ಯ ಸಹ ಸಂಸ್ಥೆಯಾಗಿರುವ ಉಡುಪಿಯ ರಥ ಬೀದಿಯಲ್ಲಿರುವ ನೋವೇಲ್ಟಿ ಜುವೆಲ್ಲರಿಯು ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ನಮ್ಮಲ್ಲಿ ಖರೀದಿಸಿದ ಆಭರಣಗಳಿಗೆ 1 ಗ್ರಾಂ.ಗೆ 600 ರೂ. ಡಿಸ್ಕೌಂಟ್ ಇರುತ್ತದೆ.ಇದು ದಿನಾಂಕ 24-04-2025 ರಿಂದ 30-4-2025 ರವರೆಗೆ ಈ ಕೊಡುಗೆಗಳು ಇರಲಿದೆ.ಚಿನ್ನ ಖರೀದಿಸಲು ಶುಭಕರವಾಗಿರುವ ಈ ಅಕ್ಷಯ ತೃತೀಯ ದ ದಿನದಂದು ನಮ್ಮಲ್ಲಿ ಖರೀದಿಸುವ ಚಿನ್ನಾಭರಣಗಳಿಗೆ ಅಷ್ಟೇ ತೂಕದ ಬೆಳ್ಳಿ ನಾಣ್ಯವನ್ನು ಉಚಿತವಾಗಿ ನೀಡುತ್ತಿದ್ದೇವೆ. ಇದಲ್ಲದೆ ಬೆಳ್ಳಿ ಪರಿಕರದ […]
ಉಡುಪಿ:ಮಳೆ ನೀರು ಹರಿಯುವ ತೋಡಿಗೆ ಕಸಕಡ್ಡಿ ಹಾಕದಂತೆ ಸೂಚನೆ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಹೆಚ್ಚಿನ ಮನೆಯವರುಗಳು ತೆಂಗಿನ ಗರಿ, ಸಿಪ್ಪೆ, ಕಸಕಡ್ಡಿಇತ್ಯಾದಿಗಳನ್ನು ಮಳೆ ನೀರು ಹರಿಯುವ ತೋಡಿನಲ್ಲಿ ಹಾಕುತ್ತಿರುವುದು ಕಂಡು ಬಂದಿದ್ದು, ಇದರಿಂದ ಮಳೆಗಾಲದಲ್ಲಿ ಮಳೆ ನೀರು ಸರಾಗವಾಗಿ ಹರಿಯದೇ ಅಲ್ಲಲ್ಲಿ ಕೃತಕ ನೆರೆ ಉಂಟಾಗುವ ಸಾಧ್ಯತೆ ಇರುತ್ತದೆ. ಆದುದರಿಂದಆದುದರಿಂದ ತೆಂಗಿನ ಗರಿ, ಸಿಪ್ಪೆ, ಕಸಕಡ್ಡಿ ಇತ್ಯಾದಿಗಳನ್ನು ಮಳೆ ನೀರು ಹರಿಯುವ ತೋಡಿನಲ್ಲಿ ಹಾಕಿರುವುದನ್ನು ಕೂಡಲೇ ತೆರವುಗೊಳಿಸಿ, ಮಳೆ ನೀರು ಸರಾಗವಾಗಿ ಹರಿಯಲು ಅನುಕೂಲ ಮಾಡಿಕೊಡಬೇಕು. ಮುಂದಿನ ದಿನಗಳಲ್ಲಿ ಮಳೆ ನೀರು ಹರಿಯವ ತೋಡಿಗೆಕಸಕಡ್ಡಿ ಇತ್ಯಾದಿಗಳನ್ನು […]
ಉಡುಪಿ:ಕುದುರೆಮುಖ ವನ್ಯಜೀವಿ ವಿಭಾಗದ ಚಾರಣಾ ಪಥಗಳು ಪ್ರವಾಸಿಗರ ಚಾರಣಕ್ಕೆ ಮುಕ್ತ

ಉಡುಪಿ: ಬೆಂಕಿ ಕಾಲದ ಕಾರಣದಿಂದ ಚಾರಣಿಗರ ಕ್ಷೇಮವನ್ನು ಗಮನದಲ್ಲಿರಿಸಿಕೊಂಡು ನಿರ್ಬಂಧಿಸಲಾಗಿದ್ದ ಕುದುರೆಮುಖ ವನ್ಯಜೀವಿ ವಿಭಾಗದ ವಿವಿಧ ಚಾರಣ ಪಥಗಳಾದ ನೇತ್ರಾವತಿ ಪೀಕ್, ಕುದುರೆಮುಖ ಪೀಕ್, ನರಸಿಂಹಪರ್ವತ, ಹಿಡ್ಲುಮನೆಫಾಲ್ಸ್ ಹಾಗೂ ಕೊಡಚಾದ್ರಿ ಟ್ರೆಕ್ಕ್ಗಳನ್ನು ಪ್ರಸ್ತುತ ಎಲ್ಲಾ ಅರಣ್ಯ ಪ್ರದೇಶಗಳಲ್ಲಿ ಸಾಕಷ್ಟು ಮಳೆ ಸಂಭವಿಸಿರುವ ಹಿನ್ನೆಲೆ, ಮೇ 01ರಿಂದ ಜಾರಿಗೆ ಬರುವಂತೆ ಚಾರಣಿಗರಿಗೆ ವೀಕ್ಷಣೆ ಸಲುವಾಗಿ ಮುಕ್ತಗೊಳಿಸಲಾಗಿದ್ದು, ಪ್ರವಾಸಿಗರು ಆನ್‌ಲೈನ್ https://aranyavihara.karnataka.gov.in ಮೂಲಕ ಟಿಕೆಟ್ ಕಾಯ್ದಿರಿಸಿ ಚಾರಣ ಮಾಡಬಹುದಾಗಿದೆ ಎಂದು ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ […]
ಉಡುಪಿ:ವ್ಯವಸ್ಥಾಪನಾ ಸಮಿತಿ ರಚನೆ : ಅರ್ಜಿ ಆಹ್ವಾನ

ಉಡುಪಿ: ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ ಅಧಿನಿಮಯ 1997ರ ಕಲಂ 25 ರನ್ವಯ ಹಾಗೂ ಧಾರ್ಮಿಕ ಪರಿಷತ್ತಿನ ಜಿಲ್ಲಾ ಧಾರ್ಮಿಕ ಪರಿಷತ್‌ನ ಸಭೆಯ ನಿರ್ಣಯದಂತೆ ಜಿಲ್ಲೆಯಲ್ಲಿರುವ ಪ್ರವರ್ಗ ಸಿ ಗೆ ಸೇರಿದ ಬ್ರಹ್ಮಾವರ ತಾಲೂಕಿನ ಮೂಡಹಡು ಗ್ರಾಮದ ಯಡಬೆಟ್ಟು ಶ್ರೀ ಗೋಪಾಲಕೃಷ್ಣ ದೇವಸ್ಥಾನಕ್ಕೆ ವ್ಯವಸ್ಥಾಪನ ಸಮಿತಿಯನ್ನು ಮೂರು ವರ್ಷಗಳ ಅವಧಿಗೆ ರಚಿಸಲು ಆಸಕ್ತ ಭಕ್ತಾದಿಗಳು ಹಾಗೂ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಕನಿಷ್ಠ 25 ವರ್ಷ ಮೇಲ್ಪಟ್ಟ ಆಸಕ್ತ ಭಕ್ತಾದಿಗಳು ಯಾವುದೇ ಒಂದು […]