ಉಡುಪಿ: ದಲಿತರಿಗೆ ಜಿಲ್ಲಾಡಳಿತದಿಂದ ಅಸಹಕಾರ – ದಿನಕರ್ ಬಾಬು

ಉಡುಪಿ: ಜಿಲ್ಲಾಧಿಕಾರಿಯವರು ಒಳ ಮೀಸಲಾತಿ ಕುರಿತಾದ ಸಭೆಯನ್ನು ಕೇವಲ ಸೀಮಿತ ದಲಿತ ನಾಯಕರನ್ನು ಕರೆದು ಮಾಡುತ್ತಿರುದು ಇಡೀ ದಲಿತ ಸುಮುದಾಯಕ್ಕೆ ಮಾಡುತ್ತಿರುವ ಅನ್ಯಾಯ ಇದರಿಂದ ಒಳ ಮೀಸಲಾತಿಯ ಬಗ್ಗೆ ಮಾಹಿತಿ ಪಡೆಯಲು ಅವಕಾಶ ಇರುವುದಿಲ್ಲ ಎಂದು ರಾಜ್ಯ ಎಸ್ ಸಿ ಮೋರ್ಚಾ ದ ಉಪಾಧ್ಯಕ್ಷ ದಿನಕರ್ ಬಾಬು ತಿಳಿಸಿದ್ದಾರೆ. ಇದರ ಬಗ್ಗೆ ಜಿಲ್ಲಾಧಿಕಾರಿ ಅವರಿಗೆ ಮನವರಿಕೆ ಮಾಡಲು ಸಾಕಷ್ಟು ಬಾರಿ ಫೋನ್ ಕರೆ ಮಾಡಿದರು ಸ್ಪಂದನೆ ಸಿಕ್ಕಿಲ್ಲ‌. ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಸರಿಯಾದ ಮಾಹಿತಿ ಕೊಡುತ್ತಿಲ್ಲ. […]

ಕುಂದಾಪುರ:ದ್ವಿತೀಯ ಪಿಯುಸಿ ಪರೀಕ್ಷೆ ಯಲ್ಲಿ ರಾಜ್ಯಕ್ಕೆ 5 ನೇ ಸ್ಥಾನ, ಜಿಲ್ಲೆಗೆ ದ್ವಿತೀಯ, ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವೆಂಕಟರಮಣ ಕಾಲೇಜಿನ ವಿದ್ಯಾರ್ಥಿನಿ ವೈಷ್ಣವಿ ಅರಸ್.

ಕುಂದಾಪುರ : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಯ ಮರು ಮೌಲ್ಯ ಮಾಪನದ ನಂತರ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗ ದ ವಿದ್ಯಾರ್ಥಿನಿ ವೈಷ್ಣವಿ ಅರಸ್ 595 ಅಂಕದೊಂದಿಗೆ ರಾಜ್ಯ ಮಟ್ಟದಲ್ಲಿ 5 ನೇ rank ಪಡೆದುಕೊಂಡು, ಉಡುಪಿ ಜಿಲ್ಲೆಗೆ ದ್ವಿತೀಯ, ಕುಂದಾಪುರ ತಾಲೂಕಿಗೆ ಪ್ರಥಮ ಸ್ಥಾನ ವನ್ನು ಪಡೆದುಕೊಂಡಿದ್ದಾಳೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

ಕಟಪಾಡಿ:ತ್ರಿಶಾ ಸಂಸ್ಥೆ: CRM ಪರಿಹಾರಗಳನ್ನು ಬಳಸಿಕೊಂಡು ಇಂಟಲಿಜೆನ್ಟ್ ತಂತ್ರಾಂಶ ನಿರ್ಮಾಣ ಕಾರ್ಯಾಗಾರ

ಉಡುಪಿ:ತ್ರಿಶಾ ವಿದ್ಯಾ ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ಕಾಲೇಜು, ಕಟಪಾಡಿಯಲ್ಲಿ “CRM ಪರಿಹಾರಗಳನ್ನು ಬಳಸಿಕೊಂಡು ಬುದ್ಧಿವಂತ ತಂತ್ರಾಂಶ ನಿರ್ಮಾಣ” ವಿಷಯದ ಮೇಲೆ ಕಾರ್ಯಾಗಾರವನ್ನು ಏಪ್ರಿಲ್ 19 ರಂದು ಕಂಪ್ಯೂಟರ್ ಸೈನ್ಸ್ ವಿಭಾಗದ ಆಶ್ರಯದಲ್ಲಿ ಆಯೋಜಿಸಲಾಯಿತು. ಈ ಕಾರ್ಯಾಗಾರವನ್ನು Accenture ಸಂಸ್ಥೆಯ ಖ್ಯಾತ ತಂತ್ರಜ್ಞಾನ ತರಬೇತುದಾರರಾದ ಶ್ರೀ ಸುರೇಶ್ ಅವರು ನಡೆಸಿಕೊಟ್ಟರು. ತಂತ್ರಜ್ಞಾನ ಕ್ಷೇತ್ರದಲ್ಲಿ ತಮ್ಮ ಸಮೃದ್ಧ ಅನುಭವವನ್ನು ಹಂಚಿಕೊಂಡು, ವಿದ್ಯಾರ್ಥಿಗಳಿಗೆ ಪ್ರೇರಣೆಯಾದರು. ಈ ಕಾರ್ಯಾಗಾರ ವಿದ್ಯಾರ್ಥಿಗಳಿಗೆ ಗ್ರಾಹಕರ ಸಂಪರ್ಕ ನಿರ್ವಹಣಾ ವ್ಯವಸ್ಥೆಗಳ (CRM) ಇತ್ತೀಚಿನ ಪ್ರವೃತ್ತಿಗಳನ್ನು ಪರಿಚಯಿಸುವುದಾಗಿತ್ತು. ಶ್ರೀ […]

ಮೂಡುಬಿದಿರೆ:ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಸಮಾಜಕಾರ್ಯ ವಿಭಾಗದಿಂದ ಮಾದಕ – ದ್ರವ್ಯ ವಿರೋಧಿ ಜಾಗೃತಿ ಜಾಥಾ‘ಡ್ರಗ್ಸ್’ ಜಗತ್ತಿನ ತುಂಬಾ ಅಪಾಯಕಾರಿ ವ್ಯವಸ್ಥೆ

ಮೂಡುಬಿದಿರೆ: ಭಾರತ ದೇಶ ಮಾತ್ರವಲ್ಲದೇ ಇಡೀ ಜಗತ್ತಿಗೆ ಡ್ರಗ್ಸ್ ಅತ್ಯಂತ ಅಪಾಯಕಾರಿ ವ್ಯವಸ್ಥೆಯಾಗಿ ಮಾರ್ಪಟ್ಟಿದೆ. ಇಂದಿನ ಯುವಕರು, ವಿದ್ಯಾರ್ಥಿಗಳು ನಶೆಗಾಗಿ ಸೇವನೆ ಮಾಡುವುದರಿಂದ ತಮ್ಮ ಜೀವನವನ್ನು ತಾವೇ ಹಾಳು ಮಾಡುಕೊಳ್ಳುತ್ತಿದ್ದಾರೆ. ಭಾರತದ ಶಕ್ತಿಯೇ ಯುವಕರು. ದೇಶದ ಯುವಶಕ್ತಿಯನ್ನು ಡ್ರಗ್ಸ್ ಮುಕ್ತರನ್ನಾಗಿಸಲು ಎಲ್ಲರೂ ಕೈ ಜೋಡಿಸಿಬೇಕು ಎಂದು ಕರ್ನಾಟಕ ಸರ್ಕಾರದ ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು. ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಸಮಾಜಕಾರ್ಯ ವಿಭಾಗದ ‘ರಜತ ಮಹೋತ್ಸವ’ದ ಅಂಗವಾಗಿ ಸುಂದರಿ ಆನಂದ ಆಳ್ವ ಕ್ಯಾಂಪಸ್‌ನಿAದ ಮೂಡುಬಿದಿರೆ ತಾಲೂಕು ಕಚೇರಿಯವರೆಗೆ […]

ಉಡುಪಿ: ಎ.29ರಂದು ಅಂತರ್ ಜಿಲ್ಲಾಮಟ್ಟದ ಚೆಸ್ ಪಂದ್ಯಕೂಟ

ಉಡುಪಿ: ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪುತ್ತಿಗೆ ಮಠ ಹಾಗೂ ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಷನ್ ನ ಸಹಭಾಗಿತ್ವದಲ್ಲಿ ಅಂತರ್ ಜಿಲ್ಲಾಮಟ್ಟದ ಚೆಸ್ ಪಂದ್ಯಕೂಟವನ್ನು ಇದೇ ಎ.29ರಂದು ಉಡುಪಿ ಶ್ರೀ ಕೃಷ್ಣ ಮಠದ ಮಧ್ವಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ್ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಪಂದ್ಯಕೂಟವು 7, 9, 11, 13 […]