ಕಸಾಪ ಉಡುಪಿ ತಾಲೂಕು ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಸಾಧು ಸಾಲಿಯಾನ್, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಕೊಡವೂರ್ ಆಯ್ಕೆ

ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ 15ನೇ ಕನ್ನಡ ಸಾಹಿತ್ಯ ಸಮ್ಮೇಳನವು 2025 ಮೇ ತಿಂಗಳ 17ನೇ ತಾರೀಕು ಶನಿವಾರದಂದು ಕೊಡವೂರಿನ ಶಂಕರನಾರಾಯಣ ದೇವಳದ ಸಭಾಂಗಣದಲ್ಲಿ ನಡೆಯಲಿದ್ದು , ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರಾಗಿ ಉದ್ಯಮಿ ಸಾಧು ಸಾಲಿಯಾನ್ ಅವರನ್ನು ಏಪ್ರಿಲ್ 20ರಂದು ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಕೊಡವೂರು ಹಾಗೂ ವಿವಿಧ ಸಮಿತಿಯ ಸಂಚಾಲಕರನ್ನು ಈ ಸಂದರ್ಭದಲ್ಲಿ ನೇಮಿಸಲಾಯಿತು. ಸಭೆಯಲ್ಲಿ ಕನ್ನಡ ಸಾಹಿತ್ಯ […]
ಸರಕಾರ ದುಷ್ಕೃತ್ಯಗಳ ಮೂಲಬೇರನ್ನು ಕಿತ್ತೆಸೆಯಬೇಕು

ಉಡುಪಿ: ಕಾಶ್ಮೀರದಲ್ಲಿ ಹಿಂದುಗಳ ಮೇಲೆ ಉಗ್ರರ ಆಕ್ರಮಣ ಆತಂಕಕಾರಿಯಾಗಿದ್ದು, ಸರಕಾರ ಕೂಡಲೇ ಎಚ್ಚೆತ್ತುಕೊಂಡು ದುಷ್ಕೃತ್ಯಗಳ ಮೂಲಬೇರನ್ನು ಕಿತ್ತೆಸೆಯಬೇಕು ಎಂದು ಉಡುಪಿ ಪರ್ಯಾಯ ಪುತ್ತಿಗೆ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಹಿಂದೂಗಳ ಮೇಲಿನ ದಾಳಿಯಿಂದ ಸನಾತನ ಧರ್ಮದ ಅಸ್ತಿತ್ವ ಭಾರತದಲ್ಲಿ ನಾಶವಾಗುವ ಆತಂಕದಲ್ಲಿದೆ. ದೇಶದಲ್ಲಿ ಕಾಣದ ಕೈಗಳು ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಹಿಂದುಗಳನ್ನು ನಾಶ ಮಾಡುವುದೇ ಇವರ ಹುನ್ನಾರ ಎಂಬುದು ಇದರಿಂದ ಸ್ಪಷ್ಟವಾಗಿದೆ. ಇದು ಭಯೋತ್ಪಾದನೆ ಅಲ್ಲ ಜಾಗತಿಕ ಷಡ್ಯಂತ್ರ ಎಂದರು. ಕೇರಳ, ಪಶ್ಚಿಮ ಬಂಗಾಳ, ಕಾಶ್ಮೀರದ ಘಟನೆಯಲ್ಲಿ […]
ಕಾಶ್ಮೀರ ಘಟನೆ ಬಹಳ ಆಘಾತಕಾರಿ, ಸರಕಾರ ಕಠಿಣ ಕ್ರಮಕೈಗೊಳ್ಳಬೇಕು: ಪೇಜಾವರ ಶ್ರೀ

ಉಡುಪಿ: ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ನಡೆದ ಉಗ್ರರ ದಾಳಿಯನ್ನು ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ತೀವ್ರವಾಗಿ ಖಂಡಿಸಿದ್ದಾರೆ.ಕಾಶ್ಮೀರದ ದುರ್ಘಟನೆಯಿಂದ ಬಹಳ ಆಘಾತವಾಗಿದೆ. ಆ ಕಡೆ ಪಶ್ಚಿಮ ಬಂಗಾಳ, ಈ ಕಡೆ ಕಾಶ್ಮೀರದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಕಾಶ್ಮೀರ ಫೈಲ್ಸ್ ಚಿತ್ರದಂತೆ ವ್ಯತಿರಿಕ್ತ ಇಲ್ಲದೆ ಈ ಘಟನೆ ನಡೆದಿದೆ. ಈ ಘಟನೆ ಬಹಳ ಆಘಾತಕಾರಿ ಸರಕಾರ ಬಲವಾದ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆ ದೇಶದಲ್ಲೆಲ್ಲೂ ಮರುಕಳಿಸಬಾರದು. ದೇಶದೊಳಗೆ ಸೂಕ್ತ ಭದ್ರತೆ ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಮನವಿ […]