ಕಾಪು: ಬಿಜೆಪಿಯ ದಮನಕಾರಿ ಪ್ರವೃತ್ತಿ ವಿರುದ್ಧ ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ

ಉಡುಪಿ: ಕೇಂದ್ರ ಸರಕಾರದ ಬೆಲೆ ಏರಿಕೆ, ವಕ್ಫ್ ಕಾಯ್ದೆಗೆ ತಿದ್ದುಪಡಿ, ನ್ಯಾಷನಲ್ ಹೆರಾಲ್ಡ್ ವಿಷಯದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪಕ್ಷದ ನಾಯಕರ ಮೇಲೆ ಪ್ರಕರಣ ದಾಖಲಿಸಲು ಯತ್ನಿಸುತ್ತಿರುವ ಷಡ್ಯಂತ್ರದ ವಿರುದ್ಧ ಉಡುಪಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಪಕ್ಷದ ವಿವಿಧ ಘಟಕಗಳು ಜೊತೆಗೂಡಿ ಗುರುವಾರ ಕಾಪು ಪೇಟೆಯಲ್ಲಿ ಬೃಹತ್ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಯಿತು. ಪ್ರತಿಭಟನಾ ಸಭೆಗೂ ಮೊದಲು ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಳದಿಂದ ಕಾಪು ಪೇಟೆಯವರೆಗೆ ಮೆರವಣಿಗೆ ನಡೆಸಲಾಯಿತು. ಪಕ್ಷದ ನಾಯಕರು ಸೇರಿದಂತೆ ವಿವಿಧ […]

ಪಾಕ್ ನಟ ಫವಾದ್ ಖಾನ್ ಅಭಿನಯದ “ಅಬೀರ್ ಗುಲಾಲ್” ಚಿತ್ರಕ್ಕೆ ಭಾರತದಲ್ಲಿ ಬಹಿಷ್ಕಾರ: ಕಾಶ್ಮೀರದಲ್ಲಿ ಉಗ್ರ ದಾಳಿಗೆ ಚಿತ್ರರಂಗದಲ್ಲೂ ಹೆಚ್ಚಿದ ಖಂಡನೆ

ಪಹಲ್ಗಾಮ್: ಕಾಶ್ಮೀರದ ಪಹಲ್ಗಾಮ್ ನಲ್ಲಿ  ಉಗ್ರರ ದಾಳಿಗೆ ಇಡೀ ಭಾರತವೇ ದುಃಖ ಪಡುತ್ತಿದೆ. ಹೀಗಿರುವಾಗ ಪಾಕಿಸ್ತಾನಿ ನಟನ ಚಿತ್ರವೊಂದು ಭಾರತದಲ್ಲಿ ಬಿಡುಗಡೆಗೊಳ್ಳಲು ತುದಿಗಾಲಲ್ಲಿ ನಿಂತಿತ್ತು. ಇದೀಗ  ಪಾಕಿಸ್ತಾನಿ ನಟ ಫವಾದ್ ಖಾನ್ ಅಭಿನಯದ ‘ಅಬೀರ್ ಗುಲಾಲ್’ ಚಿತ್ರವನ್ನು ಭಾರತದಲ್ಲಿ ಯಾವುದೇ ಕಾರಣಕ್ಕೂ ಬಿಡಗಡೆ ಮಾಡಲಾಗುವುದಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಚಿತ್ರ ಇದೇ ಮೇ. 8 ರಂದು ಬಿಡುಗಡೆಯಾಗಲಿತ್ತು. ಈ ಚಿತ್ರ ಅವರ ಕಾರಿಯರ್ ಗೆ ಮಹತ್ವದ್ದಾಗಿತ್ತು. ಇದೀಗ ಪಾಕಿಸ್ತಾನಕ್ಕೆ ಭಾರತದಲ್ಲಿ ಎಲ್ಲಾ ರೀತಿಯ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ […]

ಮಣಿಪಾಲದಲ್ಲಿ “ಪ್ರೆಸ್ಟೀಜ್ ಎಕ್ಸ್ಚೇಂಜ್ ಆಫರ್”; ನೀವು ಮಿಸ್ ಮಾಡ್ಕೋಬೇಡಿ.!

ಉಡುಪಿ: ನಿಮ್ಮ ಹಳೆಯ ಕುಕ್ಕರ್, ಕುಕ್ವೇರ್, ಗ್ಯಾಸ್ ಸ್ಟೋವ್, ಅಥವಾ ಮಿಕ್ಸರ್ ಗ್ರೈಂಡರ್ ಅನ್ನು ಕೊಟ್ಟು, ಹೊಸದಾದ Prestige ಉತ್ಪನ್ನಗಳನ್ನು 24% – 60% ರಿಯಾಯಿತಿಯಲ್ಲಿ ಪಡೆದುಕೊಳ್ಳಬಹುದು. ಸ್ಥಳ: RSB ಭವನ, ಮಣಿಪಾಲದಿನಾಂಕ: ಎ.26 ರಿಂದ ಎ.28ರವರೆಗೆ, 10AM- 7 PM.📞 ಹೆಚ್ಚಿನ ಮಾಹಿತಿಗೆ ಕರೆ ಮಾಡಿ: 98455 85710 ನೀವು ಮಿಸ್ ಮಾಡ್ಕೋಬೇಡಿ. ಪ್ರೆಸ್ಟೀಜ್ ನಲ್ಲಿ ಹಳೆಯದನ್ನು ಬದಲಿಸಿ ಹೊಸದನ್ನು ತಂದುಕೊಳ್ಳುವ ಇದೊಂದು ಸುವರ್ಣಾವಕಾಶವಾಗಿದೆ.

ಪಹಲ್ಗಾಮ್’ನಲ್ಲಿ ಉಗ್ರರ ದಾಳಿ: ಭಯೋತ್ಪಾದಕರಿಗೆ ಕಠಿಣ ಶಿಕ್ಷೆ – ಪ್ರಧಾನಿ ಮೋದಿ ಎಚ್ಚರಿಕೆ.

ಬಿಹಾರ: ಪಹಲ್ಗಾಮ್’ನಲ್ಲಿ ಉಗ್ರರ ದಾಳಿಯ ನಂತರದ ತಮ್ಮ ಮೊದಲ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಇಂದು (24) ಮಾತನಾಡಿದರು. ಮತ್ತು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮಡಿದ ಜೀವಗಳಿಗೆ ಪ್ರಧಾನಿ ಮೋದಿ ಅವರು ಶೋಕ ವ್ಯಕ್ತಪಡಿಸಿದರು. ಬಿಹಾರದ ಮಧುಬನಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಷಣ ಮಾಡುವ ಮೊದಲು ಪ್ರಧಾನಿ ಮೋದಿ ಅವರು ಮಂಗಳವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಸಾವನ್ನಪ್ಪಿದ 26 ಜನರಿಗೆ ಶ್ರದ್ಧಾಂಜಲಿ ಸಲ್ಲಿಸಲು ಸಾರ್ವಜನಿಕರೊಂದಿಗೆ ಒಂದು ನಿಮಿಷ ಮೌನ ಆಚರಿಸಿದರು. ವೇದಿಕೆ ಮೇಲೆ ಆಗಮಿಸಿದ ಮೋದಿ, […]

ಮಂಗಳೂರು: ಬಸ್‌ನಲ್ಲಿ ಮಹಿಳೆಗೆ ಕಿರುಕುಳ; ಕಂಡಕ್ಟರ್ ಬಂಧನ.

ಮಂಗಳೂರು: ಕೆಎಸ್‌ಆರ್‌ಟಿಸಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಕಂಡಕ್ಟರ್ ಒಬ್ಬ ಮಹಿಳಾ ಪ್ರಯಾಣಿಕರೊಬ್ಬರಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ನಂತರ ಕೊಣಾಜೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಬಾಗಲಕೋಟೆಯ ಮೂಲದ ಪ್ರದೀಪ್ ಕಾಶಪ್ಪ ನಾಯ್ಕರ್ (35) ಎಂದು ಗುರುತಿಸಲಾಗಿದೆ. ಏಪ್ರಿಲ್ 22 ರಂದು ಮುಡಿಪುವಿನಿಂದ ಸ್ಟೇಟ್ ಬ್ಯಾಂಕ್‌ಗೆ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಈ ಘಟನೆ ನಡೆದಿತ್ತು. ಪ್ರಯಾಣದ ಸಮಯದಲ್ಲಿ ನಿದ್ದೆಗೆಟ್ಟು ಹೋಗಿದ್ದ ಮಹಿಳೆಗೆ ಕಂಡಕ್ಟರ್ ಲೈಂಗಿಕ ಕಿರುಕುಳ ನೀಡಿದ್ದಾನೆ. […]