ಉಡುಪಿಯಲ್ಲಿ ಪ್ರತಿಷ್ಠಿತ ಬೇಕರಿ ಸಂಸ್ಥೆಗೆ ತಿಂಡಿ ತಯಾರಕರು ಬೇಕಾಗಿದ್ದಾರೆ

ಉಡುಪಿ:ಉಡುಪಿಯಲ್ಲಿ ಪ್ರತಿಷ್ಠಿತ ಬೇಕರಿ ಸಂಸ್ಥೆಗೆ ಖಾರ ತಿಂಡಿ ತಿನಿಸುಗಳನ್ನು ತಯಾರಿಸಲು ಅನುಭವಿ ತಿಂಡಿಯವರು ಬೇಕಾಗಿದ್ದಾರೆ. ಉತ್ತಮ ವಸತಿ ಮತ್ತು ವೇತನದ ಸೌಲಭ್ಯಗಳು ಇವೆ.ಸಂಪರ್ಕಿಸಿ :+91 9448261618
ಅಂಬಲಪಾಡಿಯಲ್ಲಿ ಮಕ್ಕಳ ರಂಗ ತರಬೇತಿ ಶಿಬಿರ ಸಂಪನ್ನ

ಉಡುಪಿ: ರಂಗಭೂಮಿ ಚಟುವಟಿಕೆಗಳಿಗೆ ಅಂಬಲಪಾಡಿ ದೇವಳದ ವತಿಯಿಂದ ಧರ್ಮದರ್ಶಿ ಅಣ್ಣಾಜಿ ಬಲ್ಲಾಳರ ಕಾಲದಿಂದಲೂ ಹೆಚ್ಚಿನ ಪ್ರೋತ್ಸಾಹ ನೀಡಲಾಗಿದೆ. ಮಕ್ಕಳಲ್ಲಿ ಸೃಜನಶೀಲತೆಯನ್ನು ಬೆಳೆಸಲು, ಸಾಮಾಜಿಕ ಮೌಲ್ಯಗಳನ್ನು ಉತ್ತೇಜಿಸಲು ಇಂತಹ ಚಟುವಟಿಕೆಗಳು ಬೇಕು. ಹೆತ್ತವರು ಇಂತಹ ರಂಗಶಿಕ್ಷಣ ಪಡೆಯಲು ಮಕ್ಕಳಿಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ಎನ್.ಬಿ.ವಿಜಯ ಬಲ್ಲಾಳ್ ಹೇಳಿದರು. ಅವರು ಭಾನುವಾರ ಅಂಬಲಪಾಡಿ ದೇವಳದ ಭವಾನಿ ಮಂಟಪದಲ್ಲಿ ಏ.12ರಿಂದ 20ರವರೆಗೆ 12ರಿಂದ 15 ವರ್ಷದ ರಂಗಾಸಕ್ತ ಮಕ್ಕಳಿಗಾಗಿ ಖ್ಯಾತ ರಂಗ ನಿರ್ದೇಶಕ ವಿದ್ದು ಉಚ್ಚಿಲ್ […]
ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ದತ್ತಿನಿಧಿ ಪ್ರಶಸ್ತಿಗೆ ಪತ್ರಕರ್ತ ರಾಮ್ ಅಜೆಕಾರ್ ಆಯ್ಕೆ.

ಕಾಸರಗೋಡು: ಕಾಸರಗೋಡು ಜಿಲ್ಲೆಯ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ದತ್ತಿನಿಧಿ ಪ್ರಶಸ್ತಿಗೆ ಕನ್ನಡಪ್ರಭ ವರದಿಗಾರ ರಾಮ್ ಅಜೆಕಾರ್ ಆಯ್ಕೆಯಾಗಿದ್ದಾರೆ. ಕನ್ನಡಪ್ರಭ ಪತ್ರಿಕೆಯಲ್ಲಿ ಜನವರಿ 31ರಂದು ಪ್ರಕಟವಾದ ಭಗೀರಥ ಅಪ್ಪಿಯಣ್ಣನ ಹೋರಾಟಕ್ಕೆ ಜಯ ಸಿಕ್ಕೀತೇ? ಶೀರ್ಷಿಕೆಯಡಿ ಪ್ರಕಟವಾದ ಅಜೆಕಾರಿನ ಡೊಂಬರಪಲ್ಕೆಯ ಶ್ರೀನಿವಾಸ್ ಯಾನೆ ಅಪ್ಪಿಯಣ್ಣ ಅವರು ಕಳೆದ ಐವತ್ತು ವರ್ಷಗಳಿಂದ ರಸ್ತೆ ದುರಸ್ತೀ ಮಾಡುವ ಸುದ್ದಿ ಪ್ರಕಟವಾಗಿತ್ತು. ಈ ಸುದ್ದಿಗೆ ಮರ್ಣೆ ಪಂಚಾಯತ್ ಸ್ಪಂದಿಸಿ ರಸ್ತೆ ದುರಸ್ಥಿ ಗೊಳಿಸಿತ್ತು. ಅಂದಿನ ತಾಪಂ ಸಿಇಒ ಅಗಿದ್ದ ಕೆ ಜಿ ಶಶಿಧರ್ […]
ಉಡುಪಿ:ವ್ಯಕ್ತಿ ನಾಪತ್ತೆ

ಉಡುಪಿ: ಮಾಬುಕಳದಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದ ಬ್ರಹ್ಮಾವರ ತಾಲೂಕು ಹಂಗಾರಕಟ್ಟೆ ಬಾಳ್ಕುದ್ರುನಿವಾಸಿ ಸ್ಟೀವನ್ ಪಾಯಸ್ (49) ಎಂಬ ವ್ಯಕ್ತಿಯು ಮಾರ್ಚ್ 31 ರಂದು ಬೆಳಗ್ಗೆ 5 ಗಂಟೆಯ ಸುಮಾರಿಗೆ ಕೋಳಿ ಅಂಗಡಿಗೆ ಹೋಗುತ್ತೇನೆ ಎಂದು ಹೇಳಿ ಮೊಬೈಲ್ ಫೋನ್ ಅನ್ನು ಮನೆಯಲ್ಲಿಯೇ ಬಿಟ್ಟು ಹೋದವರು ಅಂಗಡಿಗೂ ಹೋಗದೇ ಮನೆಗೂ ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 5 ಇಂಚು ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಶರೀರ, ಕೋಲು ಮುಖ ಹೊಂದಿದ್ದು, ಕನ್ನಡ, ಹಿಂದಿ ಹಾಗೂ ಕೊಂಕಣಿ ಭಾಷೆ ಮಾತನಾಡುತ್ತಾರೆ. […]
ಉಡುಪಿ:ಮದ್ಯವ್ಯಸನಿ ನಾಪತ್ತೆ

ಉಡುಪಿ: ಕುಡಿತದ ಅಭ್ಯಾಸ ಹೊಂದಿದ್ದ ಬ್ರಹ್ಮಾವರ ತಾಲೂಕು ಸಾಸ್ತಾನದ ಗುಂಡ್ಮಿ ನಿವಾಸಿ ರವಿಕುಮಾರ್ (60)ಎಂಬ ವ್ಯಕ್ತಿಯು ಮಾರ್ಚ್ 22 ರಂದು ಸಂಜೆ ಪೇಟೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವರು ಈವರೆಗೂ ಮನೆಗೆ ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 8 ಇಂಚು ಎತ್ತರ, ಸಾಧಾರಣ ಶರೀರ, ಕೋಲು ಮುಖ, ಎಣ್ಣೆಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೋಟ ಪೊಲೀಸ್ ಠಾಣೆ ದೂ.ಸಂಖ್ಯೆ: 0820-2564155, […]