ಕರಾವಳಿ ಭಾಗದಲ್ಲಿ ಕೆಲವೇ ವರ್ಷಗಳಲ್ಲಿ ಶೇ.90ರಷ್ಟು ಕನ್ನಡ ಶಾಲೆಗಳು ಮುಚ್ಚುತ್ತವೆ- ಮುರಲಿ ಕಡೆಕಾರ್ ಕಳವಳ

ಉಡುಪಿ: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನಾಚರಣೆಯ ಪ್ರಯುಕ್ತ ಭಾರತ- ಭಾರತಿ ಟ್ರಸ್ಟ್ ಉಡುಪಿ ಇದರ ವತಿಯಿಂದ “ಎಕ್ ಭಾರತ್- ಶ್ರೇಷ್ಠ್ ಭಾರತ್ ಹಾಗೂ ಯುಗಾದಿ ಹಬ್ಬದ ಆಚರಣೆ ಕಾರ್ಯಕ್ರಮ ಉಡುಪಿ ಕುಂಜಿಬೆಟ್ಟುವಿನ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಮಾತನಾಡಿ, ಬ್ರಿಟಿಷರು ಬಿಟ್ಟು ಹೋದ ಮೆಕಾಲೆ ಶಿಕ್ಷಣ ಪದ್ಧತಿ ನಮ್ಮ ಶಾಲಾ ಪಠ್ಯ ಪುಸ್ತಕದಲ್ಲಿ ಸಾಂಕ್ರಾಮಿಕ ರೋಗದಂತೆ ಹರಡಿಕೊಂಡಿದೆ. ಪ್ರಾಥಮಿಕ ಶಾಲಾ ಮಕ್ಕಳಲ್ಲಿ ಯಾವ […]
ಉಡುಪಿಯಲ್ಲಿ ಪ್ರತಿಷ್ಠಿತ ಬೇಕರಿ ಸಂಸ್ಥೆಗೆ ತಿಂಡಿ ತಯಾರಕರು ಬೇಕಾಗಿದ್ದಾರೆ

ಉಡುಪಿ:ಉಡುಪಿಯಲ್ಲಿ ಪ್ರತಿಷ್ಠಿತ ಬೇಕರಿ ಸಂಸ್ಥೆಗೆ ಖಾರ ತಿಂಡಿ ತಿನಿಸುಗಳನ್ನು ತಯಾರಿಸಲು ಅನುಭವಿ ತಿಂಡಿಯವರು ಬೇಕಾಗಿದ್ದಾರೆ. ಉತ್ತಮ ವಸತಿ ಮತ್ತು ವೇತನದ ಸೌಲಭ್ಯಗಳು ಇವೆ.ಸಂಪರ್ಕಿಸಿ :+91 94482 61618
ಉಡುಪಿ:ಸಂಜೀವ ಶೆಟ್ಟಿ ಕುಂಜಾರುಗಿರಿ ನಿಧನ

ಉಡುಪಿ: ಕುಂಜಾರುಗಿರಿ ಅಂಚೆ ಕಚೇರಿಯ ನಿವೃತ್ತ ಅಂಚೆಪಾಲಕ ಸಂಜೀವ ಶೆಟ್ಟಿ [68]ಇವರು ತನ್ನ ಸ್ವಗೃಹದಲ್ಲಿ ತಾರೀಕು 18/04/2025 ರಂದು ತನ್ನ ಸ್ವಗೃಹದಲ್ಲಿ ನಿಧನರಾದರು. ಉಡುಪಿ ಜಿಲ್ಲಾ ಗ್ರಾಮಿಣ ಅಂಚೆ ನೌಕರರ ಸಂಘದ ಜೊತೆ ಕಾರ್ಯದರ್ಶಿ ಹಾಗೂ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಂಚೆ ನೌಕರರ ಮುಷ್ಕರದ ಸಮಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು, ಅಲ್ಲದೇ ಊರಿನ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ,ಇಬ್ಬರು ಪುತ್ರಿಯರು, ಓರ್ವ ಪುತ್ರನನ್ನು ಅಗಲಿರುತ್ತಾರೆ. ಮೃತರ ನಿಧನಕ್ಕೆ ಮಾಜಿ ಮುಖ್ಯಮಂತ್ರಿ […]
ಪ್ರಮೋದ್ ಮಧ್ವರಾಜ್ ಅವರಿಗೆ ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್

ಬೆಂಗಳೂರು: ವಿಶ್ವವಾಣಿ ಪತ್ರಿಕೆಯ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ‘ಗ್ಲೋಬಲ್ ಅಚೀವರ್ಸ್ ಅವಾರ್ಡ್’ ನೀಡಲಾಗುತ್ತಿದ್ದು ಈ ಬಾರಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಆಯ್ಕೆಯಾಗಿದ್ದಾರೆ. ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಮೋದ್ ಮಧ್ವರಾಜ್ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಪಕ್ಷದಲ್ಲಿ 2013 ರಿಂದ 2018 ರವರೆಗೆ ಉಡುಪಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2016ರಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೀನುಗಾರಿಕಾ ಇಲಾಖೆ ಖಾತೆ ಸಚಿವರಾಗಿ ಉಡುಪಿಯ ಅಭಿವೃದ್ಧಿಗೆ ಶ್ರಮಿಸಿದ್ದರು. […]
ಉಡುಪಿ: “ಯಕ್ಷಧ್ರುವ ಪಟ್ಲಾಶ್ರಯ” ಯೋಜನೆಗೆ ಶೃಂಗೇರಿ ಶ್ರೀಗಳಿಂದ ಭೂಮಿಪೂಜೆ

ಉಡುಪಿ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ “ಯಕ್ಷಧ್ರುವ ಪಟ್ಲಾಶ್ರಯ” ಯೋಜನೆ ಅಡಿಯಲ್ಲಿ ನಿರ್ಮಾಣಗೊಳ್ಳಲಿರುವ 100 ಮನೆಗಳ ಪೈಕಿ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ. ಎಮ್.ಎಲ್. ಸಾಮಗರು ದಾನವಾಗಿ ನೀಡಿದ ಕೊಡವೂರಿನ ಲಕ್ಷ್ಮೀನಗರ ಗರ್ಡೆ ಬಳಿಯ 50 ಸೆಂಟ್ಸ್ ಜಾಗದಲ್ಲಿ 20 ಮನೆಗಳ ಗೃಹಸಮುಚ್ಚಯಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಶೃಂಗೇರಿ ಶಾರದಾ ಪೀಠಾಧೀಶ್ವರ ವಿಧುಶೇಖರ ಭಾರತೀ ಸ್ವಾಮಿಗಳು ಭೂಮಿ ಪೂಜೆಯನ್ನು ನೆರವೇರಿಸಿ ಫೌಂಡೇಶನ್ ಮಾಡುವ ಸತ್ಕಾರ್ಯಕ್ಕೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದರು.ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಬೃಹತ್ […]