ಜೆ.ಇ.ಇ.ಮೈನ್ ಅಂತಿಮ ಫಲಿತಾಂಶ: ಜ್ಞಾನಸುಧಾದ 9 ವಿದ್ಯಾರ್ಥಿಗಳಿಗೆ 99ಕ್ಕಿಂತ ಅಧಿಕ ಪರ್ಸಂಟೈಲ್.

ಉಡುಪಿ: ರಾಷ್ಟ್ರಮಟ್ಟದಲ್ಲಿ ಇಂಜಿನಿಯರಿಂಗ್ ಪ್ರವೇಶಕ್ಕಾಗಿ ಎನ್.ಟಿ.ಎ ನಡೆಸುವ ಜೆ.ಇ.ಇ ಮೈನ್ ಪರೀಕ್ಷೆಯ 2ನೇ ಫೇಸ್‍ನ ಅಂತಿಮ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 9 ವಿದ್ಯಾರ್ಥಿಗಳು 99ಕ್ಕೂ ಅಧಿಕ ಪರ್ಸಂಟೈಲ್ ಪಡೆದಿದ್ದು, ಇಬ್ಬರು ವಿದ್ಯಾರ್ಥಿಗಳು ಭೌತಶಾಸ್ತ್ರದಲ್ಲಿ 100 ಪರ್ಸಂಟೈಲ್ ಗಳಿಸಿದ್ದಾರೆ. ವಿದ್ಯಾರ್ಥಿಗಳಾದ ಆಕಾಶ್ ಎಚ್. ಪ್ರಭು 99.9194206 ಪರ್ಸಂಟೈಲ್, ಧನುಶ್ ನಾಯಕ್ 99.7330507 ಪರ್ಸಂಟೈಲ್, ತರುಣ್ ಎ. ಸುರಾನ 99.7329879 ಪರ್ಸಂಟೈಲ್, ಕೆ. ಮನೋಜ್ ಕಾಮತ್ 99.6811864 ಪರ್ಸಂಟೈಲ್, ಚಿಂತನ್ ಜೆ.ಮೆಘಾವತ್ 99.6686123 ಪರ್ಸಂಟೈಲ್, ಹೃತ್ವಿಕ್ ಶೆಟ್ಟಿ […]

ಉಡುಪಿ ಜಿಲ್ಲೆಯಲ್ಲಿ ಯೋಗಿ ಮಾದರಿ ಬುಲ್ಡೋಜರ್ ಕಾರ್ಯಾಚರಣೆ: ಕೊರಗ ಮಹಿಳೆ ಮನೆ ದ್ವಂಸಕ್ಕೆ ದಸಂಸ ತೀವ್ರ ಖಂಡನೆ

ಉಡುಪಿ: ಬೈಂದೂರು ತಾಲೂಕಿನ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಅಣತಿ ದೂರದಲ್ಲಿ ಬುಡಕಟ್ಟು ಜನಾಂಗದ ಕೊರಗ ವಿಧವೆ ಮಹಿಳೆ ಶ್ರೀಮತಿ ಗಂಗೆ ಕೊರಗ ಎಂಬ ಬಡ ಮಹಿಳೆಯು ತನ್ನಿಬ್ಬರು ಅಪಕ್ವ ಮಕ್ಕಳೊಂದಿಗೆ ಸುಮಾರು 40 ವರ್ಷಗಳಿಂದ ವಾಸಮಾಡಿಕೊಂಡಿದ್ದು.ಈಗ ಏಕಾಏಕೀ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಕೊಲ್ಲೂರಿನ ಜಗದಾಂಭ ಟ್ರಸ್ಟ್ ನವರು ಉತ್ತರ ಪ್ರದೇಶದ ಯೋಗಿ ಮಾದರಿಯಲ್ಲಿ ವಾಸಿಸುತ್ತಿರುವ ಮನೆಯನ್ನು ಧ್ವಂಸ ಮಾಡಿ ದೌರ್ಜನ್ಯ ಎಸಗಿದ ಅಮಾನವೀಯ ಘಟನೆ ಕೊಲ್ಲೂರಿನಲ್ಲಿ ತಾರೀಖ ಎ.17 ರಂದು ನಡೆದಿದೆ. ಆದ್ಯಾತ್ಮ ಕ್ಷೇತ್ರದಲ್ಲಿ […]

ಉಡುಪಿ: ಪತ್ರಕರ್ತ ಸಂದೀಪ್ ಪೂಜಾರಿ ನಿಧನ

ಉಡುಪಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಹಾಗೂ ಈಟಿವಿ ಭಾರತ್ ಉಡುಪಿ ಜಿಲ್ಲಾ ವರದಿಗಾರ ಸಂದೀಪ್ ಪೂಜಾರಿ(37) ಎ.20ರಂದು ಬೆಳಿಗ್ಗೆ ನಿಧನ ಹೊಂದಿದರು. ಇವರು ಸಕಲೇಶಪುರ ಸಮೀಪದ ಬಾಳ್ಳುಪೇಟೆ ಎಂಬಲ್ಲಿ ಮಾ.29ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಪಘಾತದಿಂದ ಬೆನ್ನು ಹುರಿ(ಸ್ಪೈನಲ್ ಕಾಡ್)ಗೆ ತೀವ್ರ ಪೆಟ್ಟಾಗಿ ಗಂಭೀರ ಸ್ಥಿತಿಯಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರಕಾಪು ತಾಲೂಕಿನ ಶಿರ್ವ ನಿವಾಸಿಯಾಗಿರುವ ಇವರು, ಮಾಧ್ಯಮ ಕ್ಷೇತ್ರದಲ್ಲಿ ಹಲವು […]

ಖಡಕ್ ಹಿರಿಯಡಕ ಸಬ್ ಇನ್ಸ್ಪೆಕ್ಟರ್ ಮಂಜುನಾಥ್ ಶಿರ್ವ ಠಾಣೆಗೆ

ಉಡುಪಿ: ಹಿರಿಯಡಕ ಠಾಣೆಯಲ್ಲಿ ಕಾರ್ಯನಿರ್ವಾಹಿಸುತ್ತಿದ್ದ ಖಡಕ್ ಪೊಲೀಸ್ ಅಧಿಕಾರಿ ಮಂಜುನಾಥ ಮರಬದ ಅವರನ್ನು ಶಿರ್ವ ಠಾಣೆಗೆ ಪಿಎಸ್ ಐ ಆಗಿ ವರ್ಗಾವಣೆ ಮಾಡಿ, ಪೊಲೀಸ್ ಮಹಾ ನಿರೀಕ್ಷಕರು ಪಶ್ಚಿಮ ವಲಯ ಆದೇಶ ಹೊರಡಿಸಿದ್ದಾರೆ.ವಿಜಯಪುರ ಜಿಲ್ಲೆ ಇಂಡಿ ತಾಲೂಕಿನವರಾದ ಮಂಜುನಾಥ್ ಅವರು, 2020ರ ಬ್ಯಾಚಿನ ಸಬ್ ಇನ್ಸ್ಪೆಕ್ಟರ್. ಉಡುಪಿಯಲ್ಲಿ ಇತ್ತೀಚಿಗೆ ಸಂಚಲನ ಹುಟ್ಟಿಸಿದ ಗರುಡ ಗ್ಯಾಂಗ್ ಪ್ರಕರಣದಲ್ಲಿ, ಗರುಡ ಗ್ಯಾಂಗ್ ಸದಸ್ಯ ಇಸಾಕ್ ಶೂಟೌಟ್ ಪ್ರಕರಣದಲ್ಲಿ ಮತ್ತು ನೇಜಾರು ಒಂದೇ ಕುಟುಂಬದ ನಾಲ್ವರ ಹತ್ಯೆ ಕೇಸ್ ನ ಆರೋಪಿಯ […]