ಕರ್ನಾಟಕ ಜಾನಪದ ಪರಿಷತ್ತು ರಾಜ್ಯಾಧ್ಯಕ್ಷ ಪ್ರೊ. ಹಿ.ಚಿ ಬೋರಲಿಂಗಯ್ಯ ಅವರಿಗೆ ತಲ್ಲೂರ್ಸ್ ಜಾನಪದ ರತ್ನ ಪ್ರಶಸ್ತಿ ಪ್ರದಾನ

ಉಡುಪಿ: ಬಯಲು ಸೀಮೆಯ ಮೂಡಲಪಾಯ, ಉತ್ತರ ಕರ್ನಾಟಕದ ಶ್ರೀಕೃಷ್ಣ ಪಾರಿಜಾತಾ ಮೊದಲಾದ ಕಲಾಪ್ರಕಾರಗಳು ಸೂಕ್ತ ಪ್ರೋತ್ಸಾಹವಿಲ್ಲದೆ ಅಳಿವಿನಂಚಿನಲ್ಲಿವೆ. ಆದರೆ ಕರಾವಳಿಯ ಯಕ್ಷಗಾನ ಇಂದು ವಿಶ್ವಧರ್ಜೆಯ ಕಲೆಯಾಗಿ ಮೆರೆಯುವಂತೆ ಮಾಡಿದ ಇಲ್ಲಿನ ವಿದ್ಯಾವಂತರು, ಕಲಾ ಪ್ರೋತ್ಸಾಹಕರು ಅಭಿನಂದನಾರ್ಹರು ಎಂದು ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಪ್ರೊ.ಹಿ.ಚಿ.ಬೋರಲಿಂಗಯ್ಯ ಹೇಳಿದರು. ಅವರು ಭಾನುವಾರ ಬ್ರಹ್ಮಾವರದ ಎಸ್ಎಂಎಸ್ ಕಾಲೇಜಿನ ಮಕ್ಕಳ ಮಂಟಪದಲ್ಲಿ ಭೂಮಿಕಾ ಹಾರಾಡಿ, ಕರ್ನಾಟಕ ಜಾನಪದ ಪರಿಷತ್ತು (ರಿ.) ಬೆಂಗಳೂರು, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ (ರಿ.) ಹಾಗೂ ಜಾನಪದ ಸಾಹಿತ್ಯ ಸಾಂಸ್ಕೃತಿಕ […]
ಕಿಚ್ಚ ಸುದೀಪ್ ಅಭಿನಯದ ‘ಬಿಲ್ಲ ರಂಗ ಬಾಷಾ’ (BRB) ಸಿನಿಮಾ ಶೂಟಿಂಗ್ ಶುರು: ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್.

ಕಿಚ್ಚ ಸುದೀಪ್ ಅಭಿನಯಿಸುತ್ತಿರುವ ಬಿಗ್ ಬಜೆಟ್ನ ಬಹುನಿರೀಕ್ಷಿತ ‘ಬಿಲ್ಲಾ ರಂಗ ಬಾಷಾ’ ಸಿನಿಮಾ ಚಿತ್ರೀಕರಣ ಇಂದಿನಿಂದ (ಏ.16) ಪ್ರಾರಂಭವಾಗಿದೆ. ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ಸಿನಿಮಾ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಸುದೀಪ್ ಪೋಸ್ಟ್ ಹಂಚಿಕೊಂಡಿದ್ದಾರೆ. ‘2209 AD BRB first blood’ ಎಂದು ಸಿನಿಮಾಗೆ ಟೈಟಲ್ ಇಡಲಾಗಿದೆ. ಪೋಸ್ಟರ್ನಲ್ಲಿ ಸುದೀಪ್ ಜಬರ್ದಸ್ತ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಎರಡು ಚಾಪ್ಟರ್ಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. ಮೊದಲ ಚಾಪ್ಟರ್ಗೆ ‘ಫಸ್ಟ್ ಬ್ಲಡ್’ ಎಂದು ಚಿತ್ರತಂಡ ಕರೆದಿದೆ. ಅನೂಪ್ […]
ಕಾರ್ಕಳ:ಸಂವಿಧಾನವನ್ನು ತೆರೆದ ಮನಸ್ಸಿನಿಂದ ಓದಬೇಕು” -ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ

ಕಾರ್ಕಳ:ಭಾರತೀಯ ಸಂವಿಧಾನ ಯಾವುದೇ ಜಾತಿಧರ್ಮ ಭಾಷೆ ಪ್ರದೇಶಕ್ಕೆ ಸೀಮಿತವಾದ ಗ್ರಂಥವಲ್ಲ.ಇದೊಂದು ರಾಷ್ಟ್ರೀಯತೆಯನ್ನು ಪ್ರತಿಬಿಂಬಿಸುವ ಪವಿತ್ರವಾದ ಮೇರು ಗ್ರಂಥ.ನಾವು ಪೂರ್ವ ಗ್ರಹ ಪೀಡಿತರಾಗಿ ಭಾರತೀಯ ಸಂವಿಧಾನವನ್ನು ಹಿಡಿದು ನೇೂಡಿದಾಗ ನಾವು ಅಲ್ಪ ಮಾನವರಾಗಿ ಬಿಂಬಿತರಾಗುತ್ತೇವೆ.ಇದು ಇಂದಿನ ಅತೀ ದೊಡ್ಡ ಸಮಸ್ಯೆ ಕೂಡ.ಸಮಾನತೆ ಭಾತೃತ್ವ ಸೌಹಾರ್ದತೆಯ ಗುಣಗಳೇ ನಮ್ಮ ಸಂವಿಧಾನದ ಆಶಯಯೂ ಹೌದು. ಡಾ.ಬಿ.ಆರ್.ಅಂಬೇಡ್ಕರ್ ರಂತಹ ಮಹಾನ್ ಸಂವಿಧಾನ ತಜ್ಜರ ಅವಿರತವಾದ ಪ್ರಯತ್ನದಿಂದಲೇ ಜಗತ್ತಿನಲ್ಲಿಯೇ ಅತಿ ಶ್ರೇಷ್ಠವಾದ ಸಂವಿಧಾನವನ್ನು ಹೊಂದುವ ಯೇೂಗ ನಮ್ಮದಾಗಿದೆ.ಹಾಗಾಗಿ ಭಾರತದ ಸಂವಿಧಾನವನ್ನು ನಮ್ಮೆಲ್ಲರ ಸುಖ ನೆಮ್ಮದಿಗಾಗಿ […]
ಬೈಂದೂರು:ಮಾನಸಿಕ ಅಸ್ವಸ್ಥ ನಾಪತ್ತೆ

ಉಡುಪಿ: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಬೈಂದೂರು ತಾಲೂಕು ಕೊಲ್ಲೂರು ಗ್ರಾಮದ ಹೆಗ್ಡೆಮಠ ನಿವಾಸಿ ಮೋಹನ್ ರಾಮ್ ಹೆಗ್ಡೆ (52) ಎಂಬ ವ್ಯಕ್ತಿಯು 2019 ರ ಏಪ್ರಿಲ್ 1 ರಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ಇದುವರೆಗೂ ಮನೆಗೆ ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 5 ಇಂಚು ಎತ್ತರ, ದುಂಡು ಮುಖ, ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ, ಮಲಯಾಳಂ ಹಾಗೂ ತಮಿಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ […]
ಉಡುಪಿ:ಸಾಹಿತಿ ವೈ.ಕೆ. ಸಂಧ್ಯಾಶರ್ಮ ‘ಕಲಾಪ್ರವೀಣ’ ಪ್ರಶಸ್ತಿಗೆ ಆಯ್ಕೆ

ಉಡುಪಿ: ಕನ್ನಡದ ಹಿರಿಯ ಕಾದಂಬರಿಕಾರ್ತಿ, ಸಾಹಿತಿ, ರಂಗ ಕರ್ಮಿ ಹಾಗೂ ವಿಮರ್ಶಕಿ ವೈ.ಕೆ. ಸಂಧ್ಯಾ ಶರ್ಮ ಅವರನ್ನು 2025ನೇ ಸಾಲಿನ ಹಿರಿಯ ಪತ್ರಕರ್ತ, ವಿಮರ್ಶಕ ದಿ.ಈಶ್ವರಯ್ಯ ಅನಂತಪುರ ಹೆಸರಿನಲ್ಲಿ ನೀಡುವ ‘ಕಲಾ ಪ್ರವೀಣ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಮುಖ ಹೆಸರಾದ ಸಂಧ್ಯಾಶರ್ಮ ಅವರು ಖ್ಯಾತ ಲೇಖಕಿಯಾಗಿರುವ ಜೊತೆಗೆ ಅಂಕಣ ಬರಹಗಾರ್ತಿ, ನೃತ್ಯ ನಾಟಕ ಗಳ ವಿಮರ್ಶಕಿ ಕೂಡ ಆಗಿದ್ದಾರೆ. ಕೂಚುಪುಡಿ ನೃತ್ಯ ಕಲಾವಿದೆಯಾಗಿರುವ ಇವರು ಸಂಗೀತ ವಿಮರ್ಶೆಯಲ್ಲೂ ಪಳಗಿದವರು. ಹಲವು ಪತ್ರಿಕೆಗಳಲ್ಲಿ ಪತ್ರಕರ್ತರಾಗಿಯೂ ಸೇವೆ […]