ಶೃಂಗೇರಿಯಲ್ಲಿ ಸಿವಿಲ್ ಎಂಜಿನಿಯರ್ ಹುದ್ದೆಗೆ ನೇಮಕಾತಿ

ಶೃಂಗೇರಿ:ಶೃಂಗೇರಿಯಲ್ಲಿ ಸಿವಿಲ್ ಎಂಜಿನಿಯರ್ ಹುದ್ದೆಗೆ ನೇಮಕಾತಿ ನಡೆಯಲಿದೆ. ಅರ್ಹತೆಗಳು:ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಪದವಿ/ಡಿಪ್ಲೊಮಾ ವಿದ್ಯಾರ್ಹತೆ ಹೊಂದಿದ್ದು, ಕನಿಷ್ಠ 3 ವರ್ಷಗಳ ಅನುಭವವಿರಬೇಕು.ಆಫೀಸ್ ಕೆಲಸ ಮತ್ತು ಸ್ಥಳ ಪರಿಶೀಲನೆಯನ್ನು (Site inspection) ನಿರ್ವಹಿಸುವುದು ಹಾಗೂ ಆಟೋಕ್ಯಾಡ್ ಡ್ರಾಫ್ಟಿಂಗ್, ವೆಚ್ಚಗಳ ಅಂದಾಜು ಇತ್ಯಾದಿಗಳಲ್ಲಿ ಅನುಭವವಿರಬೇಕು. ಉದ್ಯಮ ಮಾನದಂಡಗಳ ಪ್ರಕಾರ ಸಂಬಳ ನೀಡಲಾಗುವುದು.(ಅಗತ್ಯವಿದ್ದರೆ ವಸತಿ ಒದಗಿಸಲಾಗುವುದು) ಸ್ಥಳ:- ಶೃಂಗೇರಿ, ಕರ್ನಾಟಕಸಂಪರ್ಕಿಸಿ:- ಕೆಇಟೆಕ್ ವಾಸ್ತುಶಿಲ್ಪಿಗಳು+91 98454 25889
ಉಡುಪಿಯಲ್ಲಿ ಭಾರೀ ಗಾಳಿಮಳೆ: ಭಾರೀ ಗಾತ್ರದ ಮರ ಬಿದ್ದು ಮೂರು ಮನೆಗಳಿಗೆ ಹಾನಿ

ಉಡುಪಿ: ಉಡುಪಿ ನಗರಸಭೆಯ ಮೂಡಬೆಟ್ಟು ವಾರ್ಡಿನಲ್ಲಿ ಸೋಮವಾರ ಸಂಜೆ ಸುರಿದ ಮಳೆ ಹಾಗೂ ಸುಂಟರಗಾಳಿಯಿಂದ ಭಾರೀ ಗಾತ್ರದ ಮರವೊಂದು 3 ಮನೆಗಳ ಮೇಲೆ ಬಿದ್ದು ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಈ ಬಗ್ಗೆ ಮಾಹಿತಿ ತಿಳಿದ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಕ್ಷಣವೇ ತೆರವು ಕಾರ್ಯಾಚರಣೆ ನಡೆಸುವಂತೆ ಅಗ್ನಿಶಾಮಕ ದಳ, ಮೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿ, ಉಡುಪಿ ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸಂತ್ರಸ್ತ […]
ಏ.16 ರಿಂದ ಏ.21ರ ವರೆಗೆ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ; ಏ.19 ರಂದು ಶ್ರೀಮನ್ನಹಾರಥೋತ್ಸವ.

ಉಡುಪಿ: ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಸ್ಥಾನ ಶ್ರೀ ಕ್ಷೇತ್ರ ಕಮಲಶಿಲೆಯಲ್ಲಿ ಏ.16 ರಿಂದ ಏ.21ರ ವರೆಗೆ ಶ್ರೀ ಅಮ್ಮನವರ ಮಹಾ ಸನ್ನಿಧಿಯಲ್ಲಿ ಜಾತ್ರಾ ಮಹೋತ್ಸವ ನಡೆಯಲಿದೆ. ಕಾರ್ಯಕ್ರಮಗಳ ವಿವರ:ತಾ.16-04-2025 ಚೈತ್ರ ಬಹುಳ 3 ಯು ಬುಧವಾರ ಸುಮುಹೂರ್ತದಲ್ಲಿ ಅಂಕುರಾರೋಪಣ, ಧ್ವಜಾರೋಹಣ, ರಾತ್ರಿ ಭೇರಿ ತಾಡನ, ಯಾಗಶಾಲಾ ಪ್ರವೇಶ, ಕೌತುಕ ಬಂಧನ, ಶಿಬಿಕಾಯನೋತ್ಸವ. ತಾ.17-04-2025 ಚೈತ್ರ ಬಹುಳ 4 ಯು ಗುರುವಾರ ಸಿಂಹವಾಹನೋತ್ಸವ ತಾ.18-04-2025 ಚೈತ್ರ ಬಹುಳ 5 ಯು ಶುಕ್ರವಾರ ಮಹಾ ರಂಗಪೂಜೆ ಮತ್ತು ಪುಷ್ಪಕ ವಾಹನೋತ್ಸವ […]
ಯಕ್ಷಗಾನ ಅಕಾಡೆಮಿ ವತಿಯಿಂದ ಗುರುಪುರದಲ್ಲಿ ಯಕ್ಷಗಾನ ಕಮ್ಮಟ

ಉಡುಪಿ: ಯಕ್ಷಗಾನ ಸಾಂಸ್ಕೃತಿಕವಾಗಿ ಸಮಾಜವನ್ನು ಒಗ್ಗೂಡಿಸುತ್ತದೆ. ಕೇವಲ ಹಿಂದೂಗಳಷ್ಟೇ ಅಲ್ಲ, ಅನ್ಯ ಧರ್ಮಿಯ ಕಲಾವಿದರು ಇಲ್ಲಿ ತೊಡಗಿಸಿಕೊಂಡಿರುವುದು ಈ ಕಲೆಯ ವೈಶಿಷ್ಟ್ಯವಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಶನಿವಾರ ಮಂಗಳೂರು ಗುರುಪುರದ ಮಾಣಿಬೆಟ್ಟು ಗುತ್ತು ವಠಾರದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಹಮ್ಮಿಕೊಂಡ ‘ಯಕ್ಷ ವಸುಂಧರ ‘ ಯಕ್ಷಗಾನ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯಕ್ಷಗಾನ ಅಕಾಡೆಮಿ ಸಾಂಪ್ರಾದಾಯಿಕ ಯಕ್ಷಗಾನವನ್ನು ಉಳಿಸುವ ಪ್ರಯತ್ನ ಮಾಡುತ್ತಿದೆ. ಇಂದಿನ ಬದಲಾವಣೆಯ ಯುಗದಲ್ಲಿ […]
ಹುಬ್ಬಳ್ಳಿ ಎನ್‌ಕೌಂಟರ್ ಕೇಸ್:ಪಿಎಸ್ಐ ‘ಲೇಡಿ ಸಿಂಗಂ’ಗೆ ಮೆಚ್ಚುಗೆಯ ಸುರಿಮಳೆ.!

ಹುಬ್ಬಳ್ಳಿ: 5 ವರ್ಷದ ಪುಟ್ಟ ಕಂದನನ್ನು ಅತ್ಯಾಚಾರ ಮಾಡಿ ಕೊಲೆ ಪ್ರಕರಣ ಜನರನ್ನು ಸಾಕಷ್ಟು ಘಾಸಿಗೊಳಿಸಿತ್ತು. ಹುಬ್ಬಳ್ಳಿ ಜನರು ಆರೋಪಿ ರಿತೇಶ್ನನ್ನು ತಮ್ಮ ಕೈಗೊಪ್ಪಿಸುವಂತೆ ಒತ್ತಾಯಿಸಿದ್ದರು. ಬಳಿಕ ಸ್ಥಳ ಪರಿಶೀಲನೆ ವೇಳೆ ಪೊಲೀಸರ ಮೇಲೆಯೇ ದಾಳೆಗೆ ಮುಂದಾದ ಆರೋಪಿಗೆ ಪಿಎಸ್ಐ ಅನ್ನಪೂರ್ಣ ಗುಂಡು ಹಾರಿಸಿದ್ದರು. ಯಾವಾಗ ಅನ್ನಪೂರ್ಣ ಅಂತಿಮ ತೀರ್ಪು ನೀಡಿದರೋ ಜನರು ಬಹುಪರಾಕ್ ಕೂಗಿದರು. ಈ ಲೇಡಿ ಸಿಂಗಂ ಯಾರು?:ಬಾಲಕಿಯ ಹತ್ಯೆ ಆರೋಪಿಯ ಎನ್‌ಕೌಂಟರ್ ಪ್ರಕರಣ ಇದೀಗ ದೇಶಾದ್ಯಂತ ಚರ್ಚೆಯಾಗುತ್ತಿದೆ. ಮಹಿಳಾ ಪಿಎಸ್ಐ, ಲೇಡಿ ಸಿಂಗಂ […]