ಉಡುಪಿ:ದೊಡ್ಡಣಗುಡ್ಡೆೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಇಂದು ಅಷ್ಟೋತ್ತರ ಶತನಾಳಿಕೇರ ಗಣಯಾಗ

ಉಡುಪಿ: ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ಎ. 16ರಂದು ಅಷ್ಟೋತ್ತರ ಶತ ನಾಳಿಕೇರ ಗಣಯಾಗ ನೆರವೇರಲಿದೆ. ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿಯವರ ಮಾರ್ಗದರ್ಶನದಲ್ಲಿ ನೆರವೇರಲಿರುವ ಗಣಯಾಗವು ಕ್ಷೇತ್ರದಲ್ಲಿ ಶೀಘ್ರದಲ್ಲಿಯೇ ಪ್ರತಿಷ್ಠಾಪನೆಗೊಳ್ಳಲಿರುವ ಹಂಸಾರೂಢ ಪಂಚಮುಖಿ ಗಾಯತ್ರಿ ದೇವಿಯ ಪ್ರತಿಷ್ಠಾಪನೆಯ ಪೂರ್ವಭಾವಿ ಪ್ರಾಯಶ್ಚಿತ್ತ ಕರ್ಮಾಂಗ ಧಾರ್ಮಿಕ ಕಾರ್ಯಕ್ರಮವಾಗಿ ನಡೆಯಲಿದೆ ಎಂದು ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್ ಪ್ರಕಟನೆಯಲ್ಲಿ ತಿಳಿಸಿದ್ದಾಾರೆ.
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಂದ ಚಿಕ್ಕಮಕ್ಕಳಲ್ಲಿ ಪ್ರಾರಂಭಿಕ ಹಂತದ ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ ಪತ್ತೆ ಮಾಡುವ ಯಂತ್ರದ ಅಭಿವೃದ್ಧಿ

ಬಂಟಕಲ್: ಚಿಕ್ಕ ಮಕ್ಕಳಲ್ಲಿ ಪ್ರಾರಂಭಿಕ ಹಂತದಲ್ಲಿ ಆಟಿಸಂಸ್ಪೆಕ್ಟ್ರಮ್ ಡಿಸಾರ್ಡರ್ ಕಾಯಿಲೆಯನ್ನು ಯಂತ್ರ ಕಲಿಕಾತಂತ್ರಜ್ಞಾನವನ್ನು ಬಳಸಿಕೊಂಡು ಪತ್ತೆಮಾಡುವ ಯಂತ್ರವನ್ನು ಗಣಕಯಂತ್ರ ವಿಭಾಗದ ವಿದ್ಯಾರ್ಥಿಗಳಾದ ರಮ್ಯಾ, ಶರಣ್ಯ, ಶ್ರೀಯಾ ಶೆಟ್ಟಿ ಮತ್ತು ವೈಷ್ಣವಿ ಬಿಜೂರ್ ಇವರು ಗಣಕಯಂತ್ರ ವಿಭಾಗದ ಪ್ರಾಧ್ಯಾಪಕಿಯಾದ ಸವಿತಾ ಶೆಣೈ ಇವರಮಾರ್ಗದರ್ಶನದಲ್ಲಿ ಈ ಯೋಜನೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ ಎಂಬುದು ನರಮಂಡಲದಬೆಳವಣಿಗೆಯಲ್ಲಿನ ನ್ಯೂನತೆಯಾಗಿದ್ದು ಅದು ಒಂದುಮಗುವಿನ ನಡವಳಿಕೆ ಮತ್ತು ಸಾಮಾಜಿಕ ಸಂವಹನಗಳ ಮೇಲೆ ಪರಿಣಾಮ ಬೀರುತ್ತದೆ. ಈ ಯಂತ್ರದ ಮೂಲಕ ತಾಂತ್ರಿಕ ಅಧ್ಯಯನ ತಂತ್ರಗಳನ್ನು ಬಳಸಿಕೊಂಡು […]
ಫ್ರಂಟ್ ಆಫೀಸ್ ಸ್ಟಾಫ್ ಹಾಗೂ ಅಕೌಂಟೆಂಟ್ ಹುದ್ದೆಗೆ ನೇಮಕಾತಿ

ಉಡುಪಿ:ಫ್ರಂಟ್ ಆಫೀಸ್ ಸ್ಟಾಫ್ ಹಾಗೂ ಅಕೌಂಟೆಂಟ್ ಹುದ್ದೆಗೆ ನೇಮಕಾತಿ ನಡೆಯಲಿದೆ. ಉತ್ತಮ ಸಂವಹನ ಕೌಶಲ್ಯವನ್ನು ಹೊಂದಿದ್ದು, ಹಿಂದಿ ಇಂಗ್ಲಿಷ್ ಮಾತನಾಡಬಲ್ಲ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತರು ನಿಮ್ಮ ರೆಸ್ಯುಮ್ ಅನ್ನು ಈ ನಂಬರ್ ಗೆ ಕಳುಹಿಸಿ 9113666184
ಉಡುಪಿ:ಬ್ರಹ್ಮಾವರದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ: ಬ್ರಹ್ಮಾವರದಲ್ಲಿ ಬಿಲ್ಡಿಂಗ್ ಕನ್ಸ್ಟ್ರಕ್ಷನ್, ಸೈಟ್ ಸ್ಟೋರ್‌ಕೀಪರ್, ಮೇಲ್ವಿಚಾರಕ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅರ್ಹತೆಗಳು: ಸ್ಟಾಕ್ ನಿರ್ವಹಣೆಯಲ್ಲಿ ಉತ್ತಮ ಕಂಪ್ಯೂಟರ್ ಜ್ಞಾನ ಹೊಂದಿದ್ದು,ಸ್ಥಳೀಯರಿಗೆ ಮೊದಲ ಆದ್ಯತೆ ನೀಡಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:ಸ್ಥಳ: ಬ್ರಹ್ಮಾವರ, ಉಡುಪಿ ಜಿಲ್ಲೆ, ಕರ್ನಾಟಕ ಸಂಪರ್ಕ:- 9741470799
ಏ.16 ರಂದು ನೀಲಾವರ ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ “ಶ್ರೀಮನ್ಮಹಾರಥೋತ್ಸವ”

ಬ್ರಹ್ಮಾವರ: ನೀಲಾವರ ಮಹತೋಭಾರ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಏಪ್ರಿಲ್ 18ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದ್ದು, ಏ.16 ರಂದು “ಶ್ರೀಮನ್ಮಹಾರಥೋತ್ಸವ” ನಡೆಯಲಿದೆ. ಕಾರ್ಯಕ್ರಮಗಳು:ಏ.11 ರಂದು ವಿಘ್ನೇಶ್ವರ ಪ್ರಾರ್ಥನಾ ಅಂಕು ರಾರೋಪಣ, ಏ.12 ರಂದು ಧ್ವಜಾರೋಹಣ, ಸಿಂಹವಾಹನೋತ್ಸವ, ಭೇರಿತಾಡನ ಇತ್ಯಾದಿ., ಏ.13 ರಂದು ಮಯೂರ ವಾಹನೋತ್ಸವ, ಏ.14 ರಂದು ಹಂಸವಾಹನೋತ್ಸವ, ಏ.15 ರಂದು ಗಜವಾಹನೋತ್ಸವ, ಏ.16ರಂದು “ಶ್ರೀಮನ್ಮಹಾರಥೋತ್ಸವ” ಏ.17 ರಂದು ಚೂರ್ಣೋತ್ಸವ, ಅವಭೃತ, ಏ.18 ರಂದು ಸಂಪ್ರೋಕ್ಷಣೆ ನಡೆಯಲಿದೆ. ತಮಗೆಲ್ಲರಿಗೂ ಆದರದ ಸ್ವಾಗತ ಶ್ರೀಮತಿ ಅನುಷಾ ಎಂ.ಎಸ್. ಕಾರ್ಯನಿರ್ವಹಣಾಧಿಕಾರಿ ಶ್ರೀ […]