ಉಡುಪಿ ಮತ್ತು ಬ್ರಹ್ಮಾವರದಲ್ಲಿ ಆಫೀಸ್ ಕೆಲಸಕ್ಕೆ ಹುಡುಗಿಯರು ಬೇಕಾಗಿದ್ದಾರೆ

ಉಡುಪಿ: ಬ್ರಹ್ಮಾವರ ಮತ್ತು ಉಡುಪಿ ಆಫೀಸಿನಲ್ಲಿ ಕೆಲಸ ಮಾಡಲು ಡಿಗ್ರಿ ಆಗಿರುವ ಕನಿಷ್ಠ ಒಂದು ವರ್ಷ ಕೆಲಸದ ಅನುಭವ ಇರುವ ಹುಡುಗಿಯರು ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:9353517905

ಕನ್ನಡದ ಹಿರಿಯ ನಟ ಬ್ಯಾಂಕ್ ಜನಾರ್ಧನ್ ಇನ್ನಿಲ್ಲ.

ಬೆಂಗಳೂರು: ಕನ್ನಡದ ಹಿರಿಯ ನಟ ಬ್ಯಾಂಕ್ ಜನಾರ್ಧನ್ (76) ನಿಧನ ಹೊಂದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಏಪ್ರಿಲ್ 14 ರಾತ್ರಿ 2.30ರ ಸುಮಾರಿಗೆ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಸುಲ್ತಾನ್ ಪಾಳ್ಯದ ನಿವಾಸದಲ್ಲಿ ಅವರ ಪಾರ್ಥೀವ ಶರೀರ ಇಡಲಾಗಿದೆ. 1949ರಲ್ಲಿ ಬ್ಯಾಂಕ್ ಜನಾರ್ಧನ್ ಅವರು ಚಿತ್ರದುರ್ಗದ ಹೊಳಲ್​ಕೆರೆಯಲ್ಲಿ ಜನಿಸಿದರು. 1985ರಲ್ಲಿ ‘ಪಿತಾಮಹ’ ಚಿತ್ರದ ಮೂಲಕ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ‘ಬೆಟ್ಟದ ತಾಯಿ’, ‘ಪೊಲೀಸ್ ಹೆಂಡತಿ’, ‘ಶ್​..’, ‘ತರ್ಲೆ ನನ್ಮಗ’ ಹೀಗೆ ಹಲವು ಚಿತ್ರಗಳಲ್ಲಿ […]

ಯುಗಾದಿಯ ಈ ಹರುಷದ ಹಸಿರಲ್ಲಿ ಇನ್ನಷ್ಟು ಬೆಳಗೋಣ ಬನ್ನಿ: ಯುಗಾದಿ ಹಬ್ಬಕ್ಕೊಂದು ಅಕ್ಷರ ತೋರಣ

ಆಚೆಯ ತೋಟದಲ್ಲೆಲ್ಲೋ ಮಾವಿನ ಮಿಡಿ ಉದುರಿ ಚಂದದ ಸದ್ದಾದಾಗ, ಪುಟ್ಟ ಪುಟ್ಟ ಕಂಗಳಲ್ಲಿ ಪರೀಕ್ಷೆಯ ಬಿಸಿಯೆಲ್ಲಾ ಕಳೆದು ರಜೆ ಅನ್ನೋ ಐಸ್‌ ಕ್ಯಾಂಡಿ ನಗು ಮೂಡೋವಾಗ, ಅದಕ್ಕಿಂತಲೂ ಹೆಚ್ಚಾಗಿ ತೋಟದ ತುಂಬೆಲ್ಲಾ ಬಣ್ಣ ಬಣ್ಣದ ಹೂವುಗಳು ತೊನೆದಾಡುವಾಗ, ಹೋ ಹೋ ಯುಗಾದಿ ಇಷ್ಟು ಬೇಗ ಬಂದೇ ಬಿಡ್ತಾ ಅನ್ನಿಸಿ ಕಣ್ಣೂ ಹಬ್ಬವಾಗಿ ಬಿಡುತ್ತದೆ. ಯುಗಾದಿ ಬರುವ ಈ ತಿಂಗಳು ಅಂದರೆ ಪೆಪ್ಪರ್ ಮಿಂಟಿಗಿಂತಲೂ ಜಾಸ್ತಿ ರುಚಿ, ಅದಮ್ಯ ಉತ್ಸಾಹ ಅಮಿತಾನಂದದ ಚಿಗುರು ಈ ಯುಗಾದಿ. ಇಲ್ಲಿನ ಒಂದೊಂದು […]

ಉಡುಪಿ: ಹೊಟೇಲ್ ಮಾಲಕ ನಾಪತ್ತೆ

ಉಡುಪಿ: ನಗರದ ತೆಂಕಪೇಟೆಯ ಶ್ರೀರಾಮ ಭವನ ಹೊಟೇಲ್ ಮಾಲಕ, ಉಡುಪಿ ಹರಿಶ್ಚಂದ್ರ ಮಾರ್ಗ ನಿವಾಸಿ ಅಜಿತ್ ಕುಮಾರ್(48) ಎಂಬವರು ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಇವರು ಎ.12ರಂದು ಸಂಜೆ ಹೊಟೇಲಿನ ತಿಂಡಿಯನ್ನು ಪಾರ್ಸೆಲ್ ಕೊಡಲು ಅವರ ಸ್ಕೂಟರ್‌ನಲ್ಲಿ ಹೋದವರು ಹೋಟೆಲ್‌ಗೆ ವಾಪಸ್ಸು ಬಾರದೇ ನಾಪತ್ತೆಯಾಗಿದ್ದಾರೆ. ಇವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು, ಎಲ್ಲಾ ಕಡೆಗಳಲ್ಲಿ ಹುಡುಕಾಟ ನಡೆಸಿದರೂ ಇನ್ನೂ ಪತ್ತೆಯಾಗಿಲ್ಲ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.