ಹುಷಾರ್ :ಈ ಪಾತ್ರೆಗಳಲ್ಲಿ ನೀವು ಮೊಸರು ಸಂಗ್ರಹಿಸಿಟ್ಟರೆ ವಿಷವಾದೀತು ಜೋಕೆ

ಮೊಸರು ಊಟದ ಜೊತೆಗೋ, ಹೀಗೇ ತಿನ್ನಲೋ ದಿನನಿತ್ಯವೂ ನಾವು ಬಳಸಿಯೇ ಬಳಸುತ್ತೇವೆ. ತುಂಬಾ ಮಂದಿ ಮೊಸರನ್ನು ಪ್ಯಾಕೇಟಿನಲ್ಲಿಯೇ ಕುಡಿದರೆ, ಹೆಚ್ಚಿನ ಮಂದಿ ಮೊಸರನ್ನು ಬೇರೆ ಪಾತ್ರೆಗಳಲ್ಲಿ ಸಂಗ್ರಹಿಸಿ ಸೇವಿಸುತ್ತಾರೆ. ಆದರೆ ಮೊಸರನ್ನು ಕೆಲವು ರೀತಿಯ ಪಾತ್ರೆಗಳಲ್ಲಿಸಂಗ್ರಹಿಸಿ ಇಡಲೇಬಾರದು ಇಟ್ಟರೆ ಅದು ವಿಷವಾಘುವ ಸಾಧ್ಯತೆ ಇರುತ್ತದೆ ಎಂದು ತಜ್ಞರು ಎಚ್ಚರಿಸುತ್ತಾರೆ. ಹಿತ್ತಾಳೆ ತಾಮ್ರದಲ್ಲಿ ವಿಷವಾಗುತ್ತಾ? ಹಿತ್ತಾಳೆ ಮತ್ತು ತಾಮ್ರದ ಪಾತ್ರೆಗಳಲ್ಲಿ ಮೊಸರು ಸಂಗ್ರಹಿಸಿಡಬಾರದಂತೆ. ಇಟ್ಟರೆ ಮೊಸರು ವಿಷವಾಗುತ್ತದಂತೆ. ತಾಮ್ರ ಮತ್ತು ಹಿತ್ತಾಳೆ ಲೋಹಗಳೆರಡೂ ಆಮ್ಲೀಯ ವಸ್ತುಗಳೊಂದಿಗೆ ರಾಸಾಯನಿಕವಾಗಿ ಪ್ರತಿಕ್ರಿಯಿಸುತ್ತವೆ.ಇದು […]
ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ:ಇಂದು ಅಷ್ಟಪವಿತ್ರ ನಾಗಮಂಡಲೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮ

ಬ್ರಹ್ಮಾವರ: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಇಂದು ಅಷ್ಟಪವಿತ್ರ ನಾಗಮಂಡಲೋತ್ಸವ ನಡೆಯಲಿದೆ. ಎ.11ರಂದು ಬೆಳಗ್ಗೆ ಶ್ರೀ ಅಮ್ಮನವರಿಗೆ ಪಂಚವಿಂಶತಿ ದ್ರವ್ಯಕಲಶ, ವಿವಿಧ ಹೋಮಗಳು, ಕಲಶಾಭಿಷೇಕ, ಮಹಾ ಪೂಜೆ, ನಾಗ ದೇವರಿಗೆ ಪವಮಾನ ಕಲಾಶಾಭಿಷೇಕ, ರಾತ್ರಿ ನಾಗ ಮಂಡಲ ಚಪ್ಪರದಲ್ಲಿ ರಾಕ್ಷೋಘ್ನ ಹೋಮ, ವಾಸ್ತು ಪೂಜಾ ಬಲಿ, ನಾಗದೇವರ ಸನ್ನಿಧಿಯಲ್ಲಿ ಅಶ್ಲೇಷಾ ಬಲಿ ಪೂಜಾ ಕಾರ್ಯಕ್ರಮ, ಇಂದು ಬೆಳಗ್ಗೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಅನಂತರ ಮಹಾ ಮಂಗಳಾರತಿ, ನಾಗ ದರ್ಶನ, ಪಲ್ಲ ಪೂಜೆ, ಮಹಾಪ್ರಸಾದ ವಿತರಣೆ, ಮಧ್ಯಾಹ್ನ […]
ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಬಹುಕೋಟಿ ಹಗರಣ: ರೈತಸಂಘದ 49 ದಿನಗಳ ಅಹೋರಾತ್ರಿ ಧರಣಿ ಅಂತ್ಯ

ಬ್ರಹ್ಮಾವರ: ಭ್ರಷ್ಟಾಚಾರದ ಪ್ರಕರಣಗಳಲ್ಲಿ ಸರಕಾರದ ಪೂರ್ವಾನುಮತಿಗೆ ಬಂದ 3 ತಿಂಗಳಿನಲ್ಲಿ ಒಪ್ಪಿಗೆ ಅಥವಾ ತಿರಸ್ಕರಿಸಬೇಕೆಂದು ಸುಪ್ರೀಂ ಕೋರ್ಟ್‌ನ ಸ್ಪಷ್ಟ ನಿರ್ದೇಶನವಿದ್ದರೂ ಕೂಡ ಕಳೆದ ಎರಡೂವರೆ ವರ್ಷಗಳಿಂದ ರಾಜ್ಯದಲ್ಲಿರುವ ಕಾರ್ಯಾಂಗದ ಅಧಿಕಾರಿಗಳು, ನ್ಯಾಯಾಂಗ ವ್ಯವಸ್ಥೆ, ಜನ ರಿಂದ ಆರಿಸಿ ಹೋದ ಜನಪ್ರತಿನಿಧಿಗಳು ತೋರಿದ ಅಸಡ್ಡೆ ನಿಜಕ್ಕೂ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮಾರಕವಾಗಿದೆ ಎಂದು ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ,ವಿಧಾನಪರಿಷತ್ ಮಾಜಿ ಸಭಾಪತಿ ಕೆ. ಪ್ರತಾಪ್‌ಚಂದ್ರ ಶೆಟ್ಟಿ ಖೇಧ ವ್ಯಕ್ತಪಡಿಸಿದ್ದಾರೆ. ಬ್ರಹ್ಮಾವರ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಬಹುಕೋಟಿ ವಂಚನೆಯ […]
ಉಡುಪಿ:ಸಿ.ಇ.ಟಿ ಪರೀಕ್ಷೆ : ಪ್ರತಿಬಂಧಕಾಜ್ಞೆ ಜಾರಿ-ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ: 2025 ನೇ ಸಾಲಿನ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯು ಏಪ್ರಿಲ್ 16 ಮತ್ತು 17 ರಂದು ಜಿಲ್ಲೆಯ ಒಟ್ಟು 23 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಸದರಿ ಪರೀಕ್ಷೆಗಳು ಸುಸೂತ್ರವಾಗಿ ಮತ್ತು ಪರೀಕ್ಷೆ ಸಂದರ್ಭದಲ್ಲಿದೋಷರಹಿತವಾಗಿ ನಡೆಸಲು, ಪರೀಕ್ಷೆ ಸಂದರ್ಭದಲ್ಲಿ ನಡೆಯಬಹುದಾದ ಎಲ್ಲಾ ರೀತಿಯ ಅವ್ಯವಹಾರಗಳನ್ನು ತಡೆಗಟ್ಟಲು ಮತ್ತು ನಿಗದಿಪಡಿಸಿದ ಎಲ್ಲಾ ಪರೀಕ್ಷಾ ಕೇಂದ್ರಗಳ ಸುತ್ತಲೂ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಸುತ್ತಲೂ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ, ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 2023 […]
ಉಡುಪಿ:ಮತ್ಸ್ಯ ಸಂಪದ ಯೋಜನೆ : ಅರ್ಜಿ ಆಹ್ವಾನ

ಉಡುಪಿ: ಮೀನುಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ-ಫಲಾನುಭವಿ ಆಧಾರಿತ ಯೋಜನೆಗಳನ್ನು ಅನುಷ್ಠಾನಗೊಳಿಸಲು ಘಟಕವಾರು/ವರ್ಗವಾರು ಗುರಿಗಳನ್ನು ನಿಗದಿಪಡಿಸಿದ್ದು, ಯೋಜನೆಯನ್ನು ಪಾರದರ್ಶಕವಾಗಿ ಅನುಷ್ಠಾನಗೊಳಿಸಲು ಜಿಲ್ಲೆಯ ಅರ್ಹ ಮೀನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಘಟಕಗಳ ವಿವರ: ಪಚ್ಚಿಲೆ ಕೃಷಿ (ಮಸ್ಸೆಲ್ಸ್, ಕಲ್ಲ, ಕ್ಲಾಮ್ಸ್, ಮುತ್ತು ಇತ್ಯಾದಿ), ಸಾಂಪ್ರದಾಯಿಕ ಮೀನುಗಾರರಿಗೆ (ಬದಲಿ) ದೋಣಿ ಮತ್ತು ಬಲೆ ಒದಗಿಸುವುದು ಹಾಗೂ ಐಸ್ ಪ್ಲ್ಯಾಂಟ್ / ಕೋಲ್ಡ್ ಸ್ಟೋರೇಜ್ ಆಧುನೀಕರಣಕ್ಕೆ ಸಹಾಯಧನ. ಆಸಕ್ತರು ಅರ್ಜಿ ಸಲ್ಲಿಸಲು ಏಪ್ರಿಲ್ 28 ಕೊನೆಯ ದಿನ. […]