ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಗಣೇಶ ಮೊಗವೀರ ಅವರಿಗೆ ರಾಷ್ಟ್ರೀಯ ಮಟ್ಟದ ‘ಸರ್ದಾರ್ ಪಟೇಲ್ ಯುನಿಟಿ ಪ್ರಶಸ್ತಿ’ ಪ್ರದಾನ

ಕುಂದಾಪುರ: ಏಪ್ರಿಲ್ 11ರಂದು ಗೋವಾದಲ್ಲಿ ನಡೆದ ಪ್ರತಿಷ್ಠಿತ ಟೊಪ್ನೆಟೆಕ್ ಪೌಂಡೇಶನ್ ನವರು ಕೊಡಮಾಡುವ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ಸರ್ದಾರ್ ಪಟೇಲ್ ಯುನಿಟಿ ಅವಾರ್ಡ್ಸ್ 2025-“ಶಿಕ್ಷಣ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಅತ್ಯಂತ ಸ್ಪೂರ್ತಿದಾಯಕ ವ್ಯಕ್ತಿತ್ವ” ಪ್ರಶಸ್ತಿಯನ್ನು ಜನತಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು ಹಾಗೂ ಜನತಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗಣೇಶ ಮೊಗವೀರರಿಗೆ ಪ್ರದಾನ ಮಾಡಲಾಯಿತು. ಗಣೇಶ ಮೊಗವೀರ ಅವರು ಇದುವರೆಗೆ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಹಾಗೂ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಹಿಮಾಚಲ […]
ಉಡುಪಿ: ಕೊಡವೂರುದ ಜುಮಾದಿಕೋಲ ಆಮಂತ್ರಣ ಬಿಡುಗಡೆ

ಉಡುಪಿ: ಕೊಡವೂರುದ ಜುಮಾದಿಕೋಲ ಇದರ ಆಮಂತ್ರಣ ಬಿಡುಗಡೆ ಕಾರ್ಯಕ್ರಮವು ಇಂದು ಕೊಡವೂರು ಶ್ರೀ ಶಂಕರ ನಾರಾಯಣ ದೇವಾಲಯದಲ್ಲಿ ಪ್ರಾರ್ಥನೆಯೊಂದಿಗೆ ವಸಂತ ಮಂಟಪದಲ್ಲಿ 10-05-2025ರಂದು ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಪಂಚ ಧೂಮಾವತಿ ದೈವಸ್ಥಾನ ಇದರ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಸುಭಾಷ್ ಮೆಂಡನ್ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭೂ ಸಮರ್ಪಣಾ ಸಮಿತಿಯ ಗೌರವಾಧ್ಯಕ್ಷರು ಸಾಧು ಸಾಲಿಯಾನ್, ಭೂ ಸಮರ್ಪಣಾ ಸಮಿತಿಯ ಗೌರವ ಸಲಹೆಗಾರರು ಕಾಪು ಬೂಡು ಅನಿಲ್ ಬಲ್ಲಾಳ್, ಪಂಚ ಧೂಮಾವತಿ ದೈವಸ್ಥಾನ ಇದರ ಆಡಳಿತ ಮಂಡಳಿಯ […]
ಉಡುಪಿ ಸಿವಿಲ್ ಇಂಜಿನಿಯರ್ ಅಸೋಸಿಯೇಷನ್’ನಿಂದ ಉಡುಪಿ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಮನವಿ.

ಉಡುಪಿ ಎ.12: ಉಡುಪಿ ಸಿವಿಲ್ ಇಂಜಿನಿಯರ್ಸ್ ಎಸೋಸಿಯೇಷನ್ (ರಿ.) ಉಡುಪಿ ಇದರ ವತಿಯಿಂದ ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಮನಗೊಂಡು ಶುಕ್ರವಾರ ಸಂಸ್ಥೆಯ ಅಧ್ಯಕ್ಷರಾದ ಇಂಜಿನಿಯರ್.ಕೆ.ರಂಜನ್ ರವರು ಪ್ರಾಧಿಕಾರದ ಅಧ್ಯಕ್ಷರಾದ ದಿನಕರ್ ಹೇರೂರ್ ರವರಿಗೆ ಮನವಿಯನ್ನು ನೀಡಿದರು. ಈ ಸಂದರ್ಭದಲ್ಲಿ ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಕಾನೂನಾತ್ಮಕವಾಗಿ ಕಟ್ಟಡ ಕಟ್ಟುವಲ್ಲಿ ಮತ್ತು ಇನ್ನಿತರ ವೈಜ್ಞಾನಿಕ ರೀತಿಯ ತೊಡಕುಗಳಿಂದ ಇಂಜಿನಿಯರ್ಸ್ ಹಾಗೂ ನಾಗರೀಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ತೊಂದರೆಗಳನ್ನು ನಿವಾರಿಸಿ ಪ್ರಾಧಿಕಾರದಿಂದ ಉತ್ತಮ ಸೇವೆ ನೀಡುವಂತೆ ವಿನಂತಿಸಿ […]
ಎಸ್. ಕೆ. ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ 6.09 ಕೋಟಿ ರೂ. ಲಾಭ: ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ

ಮಂಗಳೂರು: ವಜ್ರಮಹೋತ್ಸವ ಸಂಭ್ರಮಾಚರಣೆಯಲ್ಲಿರುವ ಎಸ್.ಕೆ.ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ 2024-25ನೇ ಸಾಲಿನಲ್ಲಿ 1292.45 ಕೋಟಿ ರೂ. ವ್ಯವಹಾರ ನಡೆಸಿ 6.09 ಕೋಟಿ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಪಿ.ಉಪೇಂದ್ರ ಆಚಾರ್ಯ ತಿಳಿಸಿದ್ದಾರೆ. 1964ರಲ್ಲಿ ದೇವಮಾನವ ದಿ|ಪಾಲ್ಕೆ ಬಾಬುರಾಯ ಆಚಾರ್ಯರ ಮುಂದಾಳತ್ವದಲ್ಲಿ ಸ್ಥಾಪನೆಗೊಂಡ ಎಸ್.ಕೆ.ಗೋಲ್ಡ್‌ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯು ಒಟ್ಟು 22848 ಸದಸ್ಯ ರಿಂದ 7.03 ಕೋಟಿ ರೂ ಪಾಲು ಬಂಡವಾಳ ಹೊಂದಿದೆ. ಒಟ್ಟು ಠೇವಣಿ 253.86 ಕೋಟಿ ರೂ. ಇದ್ದು, ಸದಸ್ಯ/ಗ್ರಾಹಕರಿಗೆ ಚಿನ್ನಾಭರಣ ಸಾಲ, […]
ಉಡುಪಿ: ನೂತನ ಉಪನ್ಯಾಯಾಲಯ ಸಂಕೀರ್ಣಕ್ಕೆ ಶಿಲಾನ್ಯಾಸ

ಉಡುಪಿ: ಸುಮಾರು 15.14 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಉಡುಪಿ ನ್ಯಾಯಾಲ ಯದ ನೂತನ ಉಪ ನ್ಯಾಯಾಲಯ ಸಂಕೀರ್ಣಕ್ಕೆ ಇಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯ ಮೂರ್ತಿಗಳೂ, ಉಡುಪಿ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರೂ ಆದ ಜಸ್ಟೀಸ್ ಇ.ಎಸ್.ಇಂದಿರೇಶ್ ಶಿಲಾನ್ಯಾಸ ನೆರವೇರಿಸಿದರು. ಉಡುಪಿ ವಕೀಲರ ಸಂಘದ ವತಿಯಿಂದ ಆಯೋಜಿತವಾದ ಕಾರ್ಯಕ್ರಮ ದಲ್ಲಿ ಹೊಸ ಕಟ್ಟಡದ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಇಂದಿರೇಶ್, ಕಕ್ಷಿದಾರರ ಭೇಟಿಯೂ ಸೇರಿದಂತೆ ಇಂದು ವಕೀಲರಿಗೂ ಸುಸಜ್ಜಿತ ಭವನದ ಅಗತ್ಯವಿದೆ ಎಂದರಲ್ಲದೇ, ಗುಣಮಟ್ಟದ ಕಾಮಗಾರಿ ನಡೆಯು […]