ಹೆಬ್ರಿ ಚಾಣಕ್ಯ ಟ್ಯೂಟೋರಿಯಲ್ ಕಾಲೇಜಿನಲ್ಲಿ ನಲಿಕಲಿ, ಬೇಸಿಗೆ ರಜಾ ಶಿಬಿರ

ಹೆಬ್ರಿ: ರಜಾ ಸಮಯದಲ್ಲಿ ತಮ್ಮ ಮಕ್ಕಳು ಮೊಬೈಲ್ ಟಿವಿಯಿಂದ ವ್ಯರ್ಥ ಕಾಲಹರಣ ಮಾಡುವ ಬದಲು ಬದುಕು ಶಿಕ್ಷಣ ಜೊತೆ ಮನರಂಜನೆ ನೀಡುವ ವೈವಿಧ್ಯಯಯ ಬೇಸಗೆ ಶಿಬಿರಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಮಕ್ಕಳ ಪ್ರತಿಭೆ ಗಳು ಹೊರಬರಲು ಸಾಧ್ಯ ಎಂದು ಭಾರತೀಯ ಮಾನವ ಹಕ್ಕುಗಳ ಮಂಡಳಿಯ ರಾಜ್ಯಾಧ್ಯಕ್ಷ ಪ್ರಸಾದ್ ರೈ ಹೇಳಿದರು. ಅವರು ಚಾಣಕ್ಯ ಏಜ್ಯುಕೇಶನ್ ಮತ್ತು ಕಲ್ಚರಲ್ ಆಕಾಡೆಮಿ ಆಶ್ರಯದಲ್ಲಿ ಹೆಬ್ರಿ ಎಸ್.ಆರ್.ಸ್ಕೂಲ್ ಬಳಿಯ ಗುರುಕೃಪಾ ಬಿಲ್ಡಿಂಗ್‌ನಲ್ಲಿರುವ ಚಾಣಕ್ಯ ಟ್ಯೂಟೋರಿಯಲ್ ಕಾಲೇಜಿನಲ್ಲಿ ನಡೆಯುತ್ತಿರುವ ಚಾಣಕ್ಯ ನಲಿಕಲಿ ವೈವಿಧ್ಯಮಯ ಬೇಸಿಗೆ […]

ಹೆಮ್ಮಾಡಿಯಲ್ಲಿ ಜನತಾ ಕ್ರಾಂತಿ: ಸತತ 3 ನೇ ವರ್ಷವೂ ಜನತಾ ಪಿಯು ಕಾಲೇಜಿಗೆ ದಾಖಲೆಯ 100 ಫಲಿತಾಂಶ; ರಾಜ್ಯ ಮಟ್ಟದ 7 ರ‍್ಯಾಂಕ್.

ಕುಂದಾಪುರ: 2024 -25ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದ್ದು ಕುಂದಾಪುರ ಭಾಗದ ಪ್ತತಿಷ್ಟಿತ ಶಿಕ್ಷಣ ಸಂಸ್ಥೆ ಹೆಮ್ಮಾಡಿಯ ಜನತಾ ಪದವಿ ಪೂರ್ವ ಕಾಲೇಜು ಸತತ ಮೂರನೇ ವರ್ಷವೂ ಶೇಕಡಾ ನೂರು ಫಲಿತಾಂಶದೊಂದಿಗೆ ಸಾರ್ವತ್ರಿಕ ದಾಖಲೆ ಸೃಷ್ಟಿಸಿದೆ. ವಿಜ್ಞಾನ ವಿಭಾಗದಲ್ಲಿ 204 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 113 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ 113 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 88 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 36 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ […]

ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ವೀರವಿಠ್ಠಲ ದೇವಸ್ಥಾನ: ಶ್ರೀ ಹನುಮಂತ ದೇವರಿಗೆ ರಜತ ಕವಚ ಸಮರ್ಪಣೆ

ಉಡುಪಿ: ದಕ್ಷಿಣ ಪಂಢರಾಪುರ ಖ್ಯಾತಿಯ ಶ್ರೀ ಕ್ಷೇತ್ರ ಭದ್ರಗಿರಿಯ ಶ್ರೀ ವೀರವಿಠ್ಠಲ ದೇವಸ್ಥಾನದಲ್ಲಿರುವ ಒಂದು ಕೈಯಲ್ಲಿ ತಂಬೂರಿ ಮತ್ತೊಂದು ಕೈಯಲ್ಲಿ ಚಿಟಿಕೆ ಹಿಡಿದಿರುವ ಅಪರೂಪದ ಶ್ರೀ ಹನುಮಂತ ದೇವರ ವಿಗ್ರಹಕ್ಕೆ ಶ್ರೀ ಹನುಮಜ್ಜಯಂತಿಯ ಪರ್ವದಿನದಂದು ಭಕ್ತಾದಿಗಳ ವತಿಯಿಂದ ನೂತನ ರಜತ ಕವಚ ಸಮರ್ಪಣೆ ಆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಪುರೋಹಿತರಾದ ವೇದಮೂರ್ತಿ ಕಲ್ಯಾಣಪುರ ಕಾಶೀನಾಥ ಭಟ್ಟರು ಆಡಳಿತ ಮೊಕ್ತೇಸರರಾದ ಭದ್ರಗಿರಿ ಪಾಂಡುರಂಗ ಆಚಾರ್ಯ, ಅರ್ಚಕ ಸದಾನಂದ ಆಚಾರ್ಯ, ದಾನಿಗಳು ಪ್ರಭಾಕರ ಭಟ್, ಸುಧೀರ ಭಟ್, ಕೆ.ಸಿ ಪ್ರಭು, […]

ಅಖಿಲ ಭಾರತ ಅಂತರ ವಿವಿ ಪುರುಷರ ಖೋ ಖೋ ಪಂದ್ಯಾಟ: ಎರಡನೇ ಬಾರಿ ಮಂಗಳೂರು ವಿವಿ ಚಾಂಪಿಯನ್ಸ್

ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯ ಹಾಗೂ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯಗಳ ಪುರುಷರ ಖೋ-ಖೋ ಚಾಂಪಿಯನ್ಶಿಪ್‌ನ ಫೈನಲ್ ಪಂದ್ಯಾಟದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವು ಮುಂಬೈ ವಿಶ್ವವಿದ್ಯಾನಿಲಯದ ವಿರುದ್ಧ 11-10 ಅಂಕಗಳು ಹಾಗೂ 5 ನಿಮಿಷಗಳ ಅಂತರದಿಂದ ಗೆದ್ದು ಎರಡನೇ ಬಾರಿಗೆ ಚಾಂಪಿಯನ್ಸ್ ಆಗಿ ಹೊರಹೊಮ್ಮಿತು. ಮಂಗಳೂರು ವಿವಿ ಪ್ರತಿನಿಧಿಸಿದ ತಂಡದ ಒಟ್ಟು 15 ಆಟಗಾರರಲ್ಲಿ 13 ಆಟಗಾರರು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಾಗಿದ್ದರು. ಅಂಗಣದಲ್ಲಿ ಆಡಿದ 9 ಜನ ಆಟಗಾರರಲ್ಲಿ ಎಲ್ಲಾ ಆಟಗಾರರು […]

ರಾಜ್ಯದ ಎಲ್ಲಾ ಪದವಿ ಕಾಲೇಜುಗಳಲ್ಲಿ ‘ಗಾಂಧಿ ಭಾರತ’ ಲಾಂಛನ ಅಳವಡಿಕೊಳ್ಳುವಂತೆ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಬೆಳಗಾವಿಯಲ್ಲಿ ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಆಚರಣೆಯ ಸಲುವಾಗಿ ‘ಗಾಂಧಿ ಭಾರತ’ ಲಾಂಛನವನ್ನು ರಾಜ್ಯದ ಎಲ್ಲ ಪದವಿ ಕಾಲೇಜುಗಳು ಅಳವಡಿಕೊಳ್ಳುವಂತೆ ರಾಜ್ಯ ಸರಕಾರ ಆದೇಶಿಸಿದೆ. ಶುಕ್ರವಾರ ಕಾಲೇಜು ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿದ್ದು, ಗಾಂಧಿ ಭಾರತ ಕಾರ್ಯಕ್ರಮದ ಲಾಂಛನ ಎಲ್ಲ ಸರಕಾರಿ, ಖಾಸಗಿ ಮತ್ತು ಅನುದಾನರಹಿತ ಪದವಿ ಕಾಲೇಜುಗಳ ಪತ್ರವ್ಯವಹಾರ, ಲೆಟರ್ ಹೆಡ್, ಆಮಂತ್ರಣ ಪತ್ರಿಕೆ, ಸಭೆ-ಸಮಾರಂಭಗಳ ಬ್ಯಾನರ್, ಜಾಹೀರಾತು ಮತ್ತು ಇತರೆ ಪ್ರಚಾರ ಸಾಮಗ್ರಿಗಳಲ್ಲಿ ಕಡ್ಡಾಯವಾಗಿ ಅಳವಡಿಸಬೇಕು ಎಂದು ಸೂಚಿಸಿದೆ. ಮಹಾತ್ಮಾ […]