ಪಂಚಮಿ ಟ್ರಸ್ಟ್(ರಿ.) ಉಡುಪಿ ಇದರ ಬೆಳ್ಳಿಹಬ್ಬದ ಆಚರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ: ಪಂಚಮಿ ಟ್ರಸ್ಟ್(ರಿ.) ಉಡುಪಿ ಕಳೆದ 25ವರ್ಷಗಳಿಂದ ಹಲವಾರು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಇದೇ ಬರುವ ಮೇ 4, 2025ರಂದು ಬೆಳ್ಳಿಹಬ್ಬವನ್ನು ಆಚರಿಸುತ್ತಿದೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿಯವರು ಬಿಡುಗಡೆಗೊಳಿಸಿದರು. ಪಂಚಮಿ ಟ್ರಸ್ಟ್(ರಿ.) ಉಡುಪಿ ಇದರ ಟ್ರಸ್ಟಿಗಳಾದ ಎಂ. ಹರಿಶ್ಚಂದ್ರ, ಲಕ್ಷ್ಮೀ ಹಾಗೂ ಪಂಚಮಿ ಉಪಸ್ಥಿತರಿದ್ದರು.

ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

ಬೆಂಗಳೂರು: 2025 ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಏಪ್ರಿಲ್ 8 (ಇಂದು) ರಂದು ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಇಂದು ತಿಳಿಸಿದೆ. ಮಾರ್ಚ್ 1ರಿಂದ ಮಾರ್ಚ್ 20ರವರೆಗೆ ದ್ವಿತೀಯ ಪಿಯು ಪರೀಕ್ಷೆಗಳು ನಡೆದಿದ್ದವು. ಇಂದು ಮಂಡಳಿಯ ಕೇಂದ್ರ ಕಚೇರಿಯಲ್ಲಿ ಶಿಕ್ಷಣ ಸಚಿವರ ಸುದ್ದಿಗೋಷ್ಟಿ ನಂತರ ಮಧ್ಯಾಹ್ನ 1 ಗಂಟೆಗೆhttps://karresults.nic.in/ ನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು.