ಉಡುಪಿ:ಬಿಸಿಎ:ತಂತ್ರಜ್ಞಾನ ಕ್ಷೇತ್ರದಲ್ಲಿ ಬಹು ಬೇಡಿಕೆಯ ಕೋರ್ಸ್

ಉಡುಪಿ:ಕಡಿಮೆ ವೆಚ್ಚದಲ್ಲಿ ಕಂಪ್ಯೂಟರ್ ಕ್ಷೇತ್ರದಲ್ಲಿ ಹೆಚ್ಚಿನ ಜ್ಞಾನವನ್ನು ಕಲಿಯಲು ಸಹಕಾರಿಯಾಗುವ ಕೋರ್ಸ್ ಬಿಸಿಎ. ಪ್ರಾಯೋಗಿಕ ಅನುಭವದೊಂದಿಗೆ ಸಂಯೋಜಿಸುವ ಮೂಲಕ ಕಂಪ್ಯೂಟರ್ ಅಪ್ಲಿಕೇಶನ್ಗಳ ಕ್ಷೇತ್ರದಲ್ಲಿ ಪರಿಣಿತರಾಗುವಂತೆ ತ್ರಿಶಾ ಸಂಸ್ಥೆ ಈ ಕೋರ್ಸ್ ಅನ್ನು ವಿನ್ಯಾಸಗೊಳಿಸಿದೆ. ಆಧುನಿಕ ತಂತ್ರಜ್ಞಾನಗಳಲ್ಲಿ ಪರಿಣತಿ ಹೊಂದಲು ಕಂಪ್ಯೂಟರ್ ಅಪ್ಲಿಕೇಶನ್ಗಳ ಕಲಿಕೆ ಮಹತ್ವಪೂರ್ಣವಾಗಿದೆ. ಇಂದಿನ ಡಿಜಿಟಲ್ ಯುಗದಲ್ಲಿ ವರ್ಡ್ ಪ್ರೊಸೆಸಿಂಗ್, ಡೇಟಾ ವಿಶ್ಲೇಷಣೆ, ಐಎ, ಮತ್ತು ಪ್ರೋಗ್ರಾಮಿಂಗ್ ಸಾಧನಗಳನ್ನು ಬಳಸುವುದು ಶೈಕ್ಷಣಿಕ ಹಾಗೂ ವೃತ್ತಿಪರ ಯಶಸ್ಸಿಗೆ ಸಹಾಯ ಮಾಡುತ್ತದೆ. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಜ್ಞಾನ : […]

ಉಡುಪಿ: ಮೊಲ್ಟೋಕೇರ್ ಉದ್ಘಾಟನೆ

ಉಡುಪಿ: ಪ್ರಸಿದ್ಧ ತಾಂತ್ರಿಕ ಸೇವಾ ಸಂಸ್ಥೆ “ಮೊಲ್ಟೋಕೇರ್” ಫಾಂಚೈಸಿಯನ್ನು ಉಡುಪಿಯ ಓಷಿಯನ್ ಪರ್ಲ್‌ ಹೋಟೆಲ್‌ ಫೆಸಿಫಿಕ್ ಹಾಲ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಇಂದು ಪ್ರಾರಂಭಿಸಲಾಯಿತು. ಉಡುಪಿಯ ಪ್ರಸಿದ್ದ ಗೃಹ ಸಮುಚ್ಚಯ ನಿರ್ಮಾಣ ಸಂಸ್ಥೆ ಶ್ರೀನಿಧಿ ಡೆವೆಲಪರ್ಸ್ ನ ನಿರ್ದೇಶಕ ಶ್ರೀ ಕೃಷ್ಣರಾಜ ತಂತ್ರಿಯವರು ಮೊಲೋಕೇರ್ ಉಡುಪಿ ಶಾಖೆಯ ಪ್ರವರ್ತಕರಾಗಿದ್ದು, ಅವರ ಮಾತೃಶ್ರೀ ಶ್ರೀಮತಿ ಶಾಂತಾ ತಂತ್ರಿಯವರು ದೀಪ ಬೆಳಗಿಸಿ ಸಂಸ್ಥೆಯನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿಯ ಪ್ರಸಿದ್ಧ ಉದ್ಯಮಿ ಜೆರ್ರಿ ವಿನ್ಸೆಂಟ್ ಡಯಾಸ್ ಮಾತನಾಡುತ್ತಾ “ದುಬೈಯಲ್ಲಿ ಗೃಹ […]

ಉಡುಪಿ: ಅಪಹರಣ ಪ್ರಕರಣ; ಯುವಜೋಡಿ ಹೈಕೋರ್ಟ್‌ಗೆ ಹಾಜರು

ಉಡುಪಿ: ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಹೇಬಿಯಸ್ ಕಾರ್ಪಸ್ ಅರ್ಜಿಯ ಹಿನ್ನೆಲೆಯಲ್ಲಿ ಕೊಡವೂರು ಗ್ರಾಮದ ಉದ್ದಿನಹಿತ್ಲು ಗೋಡ್ವಿನ್ ದೇವದಾಸ್ ಎಂಬವರ ಮಗಳು ಜಿನ ಮೆರಿಲ್(19) ಹಾಗೂ ಆಕೆಯ ಪ್ರಿಯಕರ ಮುಹಮ್ಮದ್ ಅಕ್ರಮ್ ಎ.4 ರಂದು ಹೈಕೋರ್ಟ್ ಮುಂದೆ ಹಾಜರಾಗಿದ್ದಾರೆ. ತನ್ನ ಮಗಳು ಜಿನ ಮೆರಿಲ್‌ಳನ್ನು ಮುಹಮ್ಮದ್ ಅಕ್ರಮ್ ಅಪರಹರಿಸಿರುವುದಾಗಿ ಗೋಡ್ವಿನ್ ದೇವದಾಸ್ ನೀಡಿದ ದೂರಿಗೆ ಸಂಬಂಧಿಸಿದಂತೆ ಮಾ.20ರಂದು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮಾ.28ರಂದು ಯುವತಿಯ ಪೋಷಕರು ಹೈಕೋರ್ಟ್‌ನಲ್ಲಿ ತಮ್ಮ ಮಗಳ ಕುರಿತು ಹೇಬಿಯಸ್ ಕಾರ್ಪಸ್ […]

ಗುಜರಾತ್ ನಲ್ಲಿ ರಾತ್ರಿ ವೇಳೆ ಮನೆಯೊಳಗೆ ಬಂದ ಸಿಂಹ…ಪ್ರಾಣ ಉಳಿಸಿಕೊಳ್ಳಲು ಮನೆಯಿಂದ ಓಡಿ ಹೋದ ಕುಟುಂಬಸ್ಥರು

ಅಹಮದಾಬಾದ್: ಕಾಡಿನಿಂದ ನಾಡಿಗೆ ಬಂದ ಸಿಂಹವೊಂದು ಮನೆಯೊಳಗೆ ಆಗಮಿಸಿ ಸುಮಾರು ಎರಡು ಗಂಟೆಗಳ ಕಾಲ ಮನೆಯವರ ನಿದ್ದೆಗೆಡಿಸಿದ್ದಲ್ಲದೇ, ತಮ್ಮ ಜೀವ ಉಳಿಸಿಕೊಳ್ಳಲು ಮನೆಯಿಂದ ಹೊರಗೆ ಓಡಿಹೋದ ಘಟನೆ ಗುಜರಾತ್‌ ನಲ್ಲಿ ನಡೆದಿದೆ. ಮುಲುಭಾಯ್‌ ರಾಮ್‌ ಭಾಯ್‌ ಲಖ್ನೋತ್ರಾ ಅವರ ಕುಟುಂಬವು ಕೋವಾಯ ಗ್ರಾಮದ ಮನೆಯಲ್ಲಿ ನಿದ್ರಿಸುತ್ತಿದ್ದ ವೇಳೆಯಲ್ಲಿ ಸಿಂಹ ತೆರೆದಿದ್ದ ಛಾವಣಿಯಿಂದ ಒಳಗೆ ನುಸುಳಿರುವುದಾಗಿ ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ತೆರೆದ ಛಾವಣಿಯಿಂದ ಒಳಬಂದ ಸಿಂಹ ಅಡುಗೆ ಮನೆಯ ಗೋಡೆಯ ಮೇಲೆ ಕುಳಿತು ಗೋಡೆಯನ್ನು ಪರಚಲು ಪ್ರಾರಂಭಿಸಿತ್ತು. […]

ಉಡುಪಿ:ಏ.07 ರಂದು ವಿಶ್ವ ಆರೋಗ್ಯ ದಿನಾಚರಣೆ ಮತ್ತು ಮಾಹಿತಿ ಕಾರ್ಯಕ್ರಮ

ಉಡುಪಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಸರ್ವೇಕ್ಷಣಾ ಘಟಕ ಎನ್.ಸಿ.ಡಿ ಘಟಕ, ಜಿಲ್ಲಾ ಆಸ್ಪತ್ರೆ ಎನ್.ಸಿ.ಡಿ ವಿಭಾಗ, ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ,ಕ್ರಿಶ್ಚಿಯನ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಮಿಷನ್ ಆಸ್ಪತ್ರೆ ರೋಡ್ ಉಡುಪಿ ಹಾಗೂ ಎ.ಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಂಗಳೂರು ಇವರ ಸಹಯೋಗದಲ್ಲಿ ಏಪ್ರಿಲ್ 7 ರಂದು ಬೆಳಗ್ಗೆ 10 ಗಂಟೆಗೆ ನಗರದ ಮಿಷನ್ ಆಸ್ಪತ್ರೆ ರೋಡ್‌ನ ಕ್ರಿಶ್ಚಿಯನ್ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನಲ್ಲಿ ವಿಶ್ವ ಆರೋಗ್ಯ […]