ಉಡುಪಿ: ಎ.9ರಿಂದ 12ರವರೆಗೆ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಹೊನಲು ಬೆಳಕಿನ ಖೋ-ಖೋ ಪಂದ್ಯಾಕೂಟ

ಉಡುಪಿ: ಉಡುಪಿ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಹಯೋಗದಲ್ಲಿ 2024-25ನೇ ಸಾಲಿನ “ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಪುರುಷರ ಹೊನಲು ಬೆಳಕಿನ ಖೋ-ಖೋ ಪಂದ್ಯಾಕೂಟ”ವನ್ನು ಎ.9ರಿಂದ 12 ರವರೆಗೆ ನಗರದ ಪಿಪಿಸಿ ಕಾಲೇಜಿನ ವಿಬುಧೇಶತೀರ್ಥ ಸ್ವಾಮೀಜಿ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಜಿ.ಎಸ್. ಚಂದ್ರಶೇಖರ್ ತಿಳಿಸಿದರು. ಈ ಕುರಿತು ಕಾಲೇಜಿನ ಪ್ರಜ್ಞ ಹಾಲ್ ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಅವರು […]
ಕರ್ನಾಟಕ ಲಲಿತ ಕಲಾ ಅಕಾಡೆಮಿ ಸಹ ಸದಸ್ಯರನ್ನಾಗಿ ಹಿರಿಯ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಆಯ್ಕೆ.

ಉಡುಪಿ: ಹಿರಿಯ ಕಲಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಅವರನ್ನು ಕರ್ನಾಟಕ ಲಲಿತ ಕಲಾ ಅಕಾಡೆಮಿಗೆ ಸಹ ಸದಸ್ಯರನ್ನಾಗಿ ನೇಮಕ ಮಾಡಿ ಅಕಾಡೆಮಿ ಆದೇಶ ಹೊರಡಿಸಿದೆ. ಉದಯವಾಣಿ ಮಣಿಪಾಲ ಆವೃತ್ತಿಯಲ್ಲಿ ಹಿರಿಯ ಪತ್ರಿಕಾ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸುತ್ತಿರುವ ಆಸ್ಟ್ರೋ ಮೋಹನ್ ಕಳೆದ ಮೂರುವರೆ ದಶಕಗಳಿಂದ ಸುದ್ದಿ ಹಾಗೂ ಕಲಾತ್ಮಕ ಛಾಯಾಗ್ರಹಣದಲ್ಲಿ ಸುಪ್ರಸಿದ್ಧರು. ಸುಮಾರು 750 ಕ್ಕೂ ಅಧಿಕ ರಾಷ್ಟ್ರೀಯ-ಅಂತಾರಾಷ್ಟೀಯ ಪುರಸ್ಜಾರಗಳನ್ನು ಪಡೆದಿದ್ದಾರೆ. ಉಡುಪಿ – ಮಣಿಪಾಲ ಕುರಿತಂತೆ 5, ಪೇಜಾವರ ಶ್ರೀ ಹಾಗೂ ಪತ್ರಿಕಾ ಛಾಯಾಗ್ರಹಣ ಕುರಿತಂತೆ ಒಂದು […]
ಕಿರಿಮಂಜೇಶ್ವರ ಶಾಲೆಗೆ ಮರುನಾಮಕರಣ

ಕುಂದಾಪುರ: ಶುಭದಾ ಆಂಗ್ಲ ಮಾಧ್ಯಮ ಶಾಲೆಯನ್ನು ಜನತಾ ನ್ಯೂ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರ ಎಂದು ಪುನರ್ ನಾಮಕರಣ ಮಾಡಲಾಗಿದೆ. (ಸಂ:ಜಿ1:ಶಾ.ಹೆ.ಬ:360398:01:2024-25) ಶುಭದಾ ಎಜುಕೇಶನಲ್ ಟ್ರಸ್ಟ್ ನಡೆಸುತ್ತಿರುವ ಶುಭದಾ ಆಂಗ್ಲ ಮಾಧ್ಯಮ ಶಾಲೆಯು 2024-25ನೇ ಶೈಕ್ಷಣಿಕ ವರ್ಷದಿಂದ ನೂತನ ಆಡಳಿತ ಮಂಡಳಿಯವರು ಈ ಸಂಸ್ಥೆಯನ್ನು ಮುನ್ನಡೆಸುತ್ತಿರುವುದರಿಂದ ಶಾಲಾ ಹೆಸರು ಜನತಾ ನ್ಯೂ ಆಂಗ್ಲ ಮಾಧ್ಯಮ ಶಾಲೆ (JANATHA NEW ENGLISH MEDIUM SCHOOL) ಕಿರಿಮಂಜೇಶ್ವರ ಎಂದು ಬದಲಾಯಿಸಲಾಗಿದೆ ಎಂದು ಶಾಲಾ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.
ಕುಂದಾಪುರದ ಹೀರೋ ಶಕ್ತಿ ಮೋಟಾರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ಜನ ಬೇಕಾಗಿದ್ದಾರೆ.

ಕುಂದಾಪುರ:ಕುಂದಾಪುರದ ಹೀರೋ ಶಕ್ತಿ ಮೋಟಾರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ಜನ ಬೇಕಾಗಿದ್ದಾರೆ. ಹುದ್ದೆಗಳು: 🔹ಸೇಲ್ಸ್ ಎಕ್ಸಿಕ್ಯೂಟಿವ್🔹ರ್ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್🔹ಫ್ಲೋರ್ ಸೂಪರ್ವೈಸರ್ 🔹ವಾಷಿಂಗ್ ಎಕ್ಸಿಕ್ಯೂಟಿವ್ ಆಸಕ್ತ ಅಭ್ಯರ್ಥಿಗಳು ದಯವಿಟ್ಟು ನಿಮ್ಮ ರೆಸ್ಯೂಮ್ ಅನ್ನು ಕೆಳಗಿನ ಇಮೇಲ್ ಗೆ ಕಳುಹಿಸಿ.📩[email protected]
ಸಿದ್ಧಾಪುರದ ಹೀರೋ ಶಕ್ತಿ ಮೋಟಾರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಸಿದ್ಧಾಪುರದ ಹೀರೋ ಶಕ್ತಿ ಮೋಟಾರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: ▪ಸರ್ವಿಸ್ ಮ್ಯಾನೇಜರ್▪ಸೇಲ್ಸ್ ಎಕ್ಸಿಕ್ಯೂಟಿವ್▪ಅಡ್ವೈಸರ್ ಫ್ಲೋರ್ ಸೂಪರ್ವೈಸರ್▪ರ್ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್▪ಮೆಕ್ಯಾನಿಕ್ಸ್ ಆಸಕ್ತ ಅಭ್ಯರ್ಥಿಗಳು ದಯವಿಟ್ಟು ನಿಮ್ಮ ರೆಸ್ಯೂಮ್ ಅನ್ನು ಕೆಳಗಿನ ಇಮೇಲ್ ಗೆ ಕಳುಹಿಸಿ.📩[email protected]