ವಿಟಿಯು ಫೆಸ್ಟ್: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿಗೆ ತೃತೀಯ ಸ್ಥಾನ

ವಿದ್ಯಾಗಿರಿ: ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಆತಿಥ್ಯದಲ್ಲಿ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮಟ್ಟದ 24ನೇ ಅಂತರ ಕಾಲೇಜು ಸಾಂಸ್ಕೃತಿಕ ಯುವಜನೋತ್ಸವದಲ್ಲಿ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತೃತೀಯ ಸ್ಥಾನವನ್ನು ಪಡೆದರು. ಏಕಾದಶಾನನ ಏಕಾಂತ ನಾಟಕ ಹಾಗೂ ಮರ ಮತ್ತು ಮಗು ಕಿರುಪ್ರಹಸನ ಎರಡೂ ಪ್ರಥಮ ಪ್ರಶಸ್ತಿಯನ್ನು ಪಡೆದವು. ಜನಪದ ವಾದ್ಯಮೇಳ ದ್ವಿತೀಯ ಸ್ಥಾನ ಪಡೆದರೆ, ಜನಪದ ನೃತ್ಯ ದಲ್ಲಿ ತೃತೀಯ ಸ್ಥಾನ ಪಡೆದರು. ಈ ಸ್ಪರ್ಧೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಂಯೋಜಿತ […]
ಮಣಿಪಾಲದ ‘ಶ್ರೀ ಶಾರದಾ ಟೀಚರ‍್ಸ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನಲ್ಲಿ – ಮಕ್ಕಳ ಆರೋಗ್ಯ ರಕ್ಷಣೆ, ಪೋಷಣೆ ಮತ್ತು ಸಾಮಾನ್ಯ ಆರೈಕೆಯ ಕುರಿತು ಕಾರ್ಯಾಗಾರ

ಮಣಿಪಾಲ : ಮಣಿಪಾಲದ ಶ್ರೀ ಶಾರದಾ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ದಿನಾಂಕ 1.04.2025ರಂದು ಆರೋಗ್ಯ ರಕ್ಷಣೆ, ಪೋಷಣೆ ಮತ್ತು ಸಾಮಾನ್ಯ ಆರೈಕೆಯ ಕುರಿತು ಕಾರ್ಯಾಗಾರವನ್ನು ಮಾಹೆಯ ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್ ನ ಅಸೋಸಿಯೇಟ್ ಪ್ರೊಫೆಸರ್ ಶ್ರೀಮತಿ ಸುಲೋಚನಾ ಬಿ ಅವರು ನಡೆಸಿಕೊಟ್ಟರು. ಮಕ್ಕಳ ಆರೋಗ್ಯವು ದೈಹಿಕ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಮಾತ್ರವಲ್ಲದೆ ಸಾಮಾಜಿಕ ಅಭಿವೃದ್ಧಿಯನ್ನೂ ಒಳಗೊಂಡಿದೆ. ಚಿಕ್ಕ ವಯಸ್ಸಿನಿಂದಲೂ ಮಕ್ಕಳಲ್ಲಿ ಬೊಜ್ಜು ಮತ್ತು ಆಯಾಸಕ್ಕೆ ಪ್ರಮುಖ ಕಾರಣವಾಗಿರುವ ಕ್ಯಾಲೋರಿ ಭರಿತ ಆಹಾರಕ್ಕಿಂತ ಮಕ್ಕಳ ಆಹಾರದಲ್ಲಿ […]
ಬಂಟಕಲ್: ವಾದಿರಾಜ ಮಠದ ಶೈಕ್ಷಣಿಕ ಸಂಸ್ಥೆಗಳಿಗೆ ಮುಖ್ಯ ಆಡಳಿತಾಧಿಕಾರಿ ನೇಮಕ

ಬಂಟಕಲ್: ಸೋದೆ ಶ್ರೀ ವಾದಿರಾಜ ಮಠದಿಂದ ಪ್ರವರ್ತಿತವಾದ ಶಿಕ್ಷಣ ಸಂಸ್ಥೆಗಳು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸುತ್ತಿದ್ದು ಎಲ್ಲಾ ವಿದ್ಯಾಸಂಸ್ಥೆಗಳು ಬೆಳವಣಿಗೆಯ ಉತ್ತುಂಗದಲ್ಲಿದೆ. ಈ ವಿದ್ಯಾಸಂಸ್ಥೆಗಳು ಇನ್ನಷ್ಟು ಬೆಳವಣಿಗೆ ಹೊಂದಲು ದಕ್ಷ ಆಡಳಿತಾಧಿಕಾರಿಯ ಅಗತ್ಯತೆಯನ್ನು ಮನಗಂಡು ಶಿಕ್ಷಣಕ್ಷೇತ್ರದಲ್ಲಿ ಸುಮಾರು 38 ವರ್ಷಗಳಿಗೂ ಮಿಕ್ಕಿ ಅಪಾರ ಅನುಭವ ಹೊಂದಿರುವ ಮಣಿಪಾಲದ ಅಂತರಾಷ್ಟ್ರೀಯ ಅನ್ವಯಿಕ ವಿಜ್ಞಾನ ಶಿಕ್ಷಣ ಕೇಂದ್ರದ ನಿರ್ದೇಶಕರಾಗಿದ್ದ ಡಾ. ರಾಧಾಕೃಷ್ಣ ಎಸ್ ಐತಾಳ್ ಇವರನ್ನು ಸೋದೆ ಮಠದ ಎಲ್ಲಾ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ದಿನಾಂಕ 31 […]
ಉಡುಪಿ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ; ಶ್ರೀ ಕೈವಲ್ಯ ಮಠ ಸಂಸ್ಥಾನದ ಮಠಾಧಿಪತಿ ಶ್ರೀಮದ್ ಶಿವಾನಂದ ಸರಸ್ಪತಿ ಶ್ರೀಪಾದರು ದೇವಳಕ್ಕೆ ಭೇಟಿ

ಉಡುಪಿ: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ತೆಂಕಪೇಟೆ ಉಡುಪಿ ,ಶತಮಾನೋತ್ತರ ರಜತ ಮಹೋತ್ಸವ 125 ವರ್ಷದ ಆಚರಣೆ ಪ್ರಯುಕ್ತ 125 ದಿನ ಅಹೋರಾತ್ರಿ ನಿರಂತರ ಭಜನಾ ಮೊಹೋತ್ಸವ ಕ್ಕೆ , ಯುಗಾದಿಯ ಹಬ್ಬದ ಪರ್ವಕಾಲದಲ್ಲಿ ಸೋಮವಾರ ಪೂಜ್ಯಶ್ರೀಶ್ರೀ ಕೈವಲ್ಯ ಮಠ ಸಂಸ್ಥಾನದ ಮಠಾಧಿಪತಿ ಶ್ರೀಮದ್ ಶಿವಾನಂದ ಸರಸ್ಪತಿ ಶ್ರೀಪಾದರು ದೇವಳಕ್ಕೆ ಭೇಟಿ ನೀಡಿದರು. ದೇವಳದ ವತಿಯಿಂದ ಪೂಜ್ಯ ಶ್ರೀಗಳನ್ನು ಮಂಗಳವಾದ್ಯ , ವೇದಘೋಷ ದೊಂದಿಗೆ ಹಾಗೂ ಪೂರ್ಣ ಕುಂಭ ದಿಂದ ಸ್ವಾಗತಿಸಿ ಬರಮಾಡಿಕೊಂಡು ಪಾದ ಪೂಜೆ ಮಾಡಿ […]
ಮಣಿಪಾಲ: ಟೈಮ್ ವಿಚಾರವಾಗಿ ಖಾಸಗಿ ಬಸ್ ಸಿಬ್ಬಂದಿಯ ಬೀದಿ ಕಾಳಗ !

ಉಡುಪಿ: ಮಣಿಪಾಲ ಕರಾವಳಿಯ ವಿದ್ಯಾಕೇಂದ್ರವಾಗಿ ಬಹಳ ಪ್ರಸಿದ್ದಿ ಪಡೆದ ನಗರ. ದೇಶವಿದೇಶಗಳ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇಂತಹ ನಗರದ ಹೃದಯಭಾಗದಲ್ಲೇ ಖಾಸಗಿ ಬಸ್ ಸಿಬ್ಬಂದಿ ಟೈಮ್ ವಿಚಾರವಾಗಿ ಬೀದಿಕಾಳಗ ನಡೆಸಿದ್ದಾರೆ. ಬಸ್ ನಿಲ್ದಾಣದಲ್ಲಿ ಕೈಯಲ್ಲಿ ರಾಡ್.. ಕಲ್ಲು ಹಿಡಿದುಕೊಂಡು ಪರಸ್ಪರ ಹೊಡೆದಾಡಿದ್ದಾರೆ. ಒಬ್ಬನನ್ನು ಇಬ್ಬರು ಸೇರಿ ನೆಲಕ್ಕೆ ಉರುಳಿಸಿದ್ದಾರೆ. ಈ ಭೀಕರ ಮಾರಾಮಾರಿ ಕಂಡು ಸಾರ್ವಜನಿಕರು ತದೇಕಚಿತ್ತರಾಗಿ ನೋಡಿದ್ದಾರೆ. ಪರಸ್ಪರ ಅವಾಚ್ಯವಾಗಿ ಬೈದಾಡಿ ಕಂಡಕ್ಟರ್‌ಗಳ ಜಂಗಿ ಕುಸ್ತಿಯ ದೃಶ್ಯ ವೈರಲ್ ಆಗುತ್ತಿದೆ. ಅಂದಹಾಗೆ ಮಣಿಪಾಲ ಪೊಲೀಸ್ […]