ರೋಹನ್ ಕಾರ್ಪೋರೇಶನ್ ಸಂಸ್ಥೆಯ ಹೊಸ ರೆಸಿಡೆನ್ಶಿಯಲ್ ಯೋಜನೆ ‘ರೋಹನ್ ಮಿರಾಜ್’ಗೆ ನಾಳೆ ಭೂಮಿ ಪೂಜೆ

ಕರಾವಳಿ ಕರ್ನಾಟಕದ ರಿಯಲ್ ಎಸ್ಟೇಟ್ ಸಂಸ್ಥೆ ರೋಹನ್ ಕಾರ್ಪೊರೇಶನ್ ತನ್ನ ಮತ್ತೊಂದು ಹೊಸ ಅಪಾರ್ಟ್’ಮೆಂಟ್ ಯೋಜನೆ ‘ರೋಹನ್ ಮಿರಾಜ್’ಗೆ ನಾಳೆ (ಶುಕ್ರವಾರ 04, 2025ರಂದು) ಸಂಜೆ 5.00 ಗಂಟೆಗೆ ಭೂಮಿಪೂಜೆಯನ್ನು ನಡೆಸಲಿದೆ. ಈ ಹೊಸ ಯೋಜನೆಯು ಕುಲಶೇಖರ ಬೈತುರ್ಲಿಯ ಪ್ರಧಾನ ರಸ್ತೆಯ ರೋಹನ್ ಎಸ್ಟೇಟ್ ಬಡಾವಣೆಯ ಮುಖ್ಯದ್ವಾರದಲ್ಲಿ ತಲೆ ಎತ್ತಲಿದೆ. ರೋಹನ್ ಮಿರಾಜ್: ರೋಹನ್ ಮಿರಾಜ್ ಮಂಗಳೂರಿನ ನಗರ ಜೀವನವನ್ನು ಪುನರ್ವ್ಯಾಖ್ಯಾನಿಸುವ ಉದ್ದೇಶದಿಂದ ಯೋಜನಾಬದ್ಧವಾಗಿ ರೂಪಿಸಲಾದ ಅತ್ತ್ಯುತ್ತಮ ರೆಸಿಡೆನ್ಶಿಯಲ್ ಯೋಜನೆಯಾಗಿ ಈ ಪ್ರಾಜೆಕ್ಟ್ 50 ಉತ್ತಮವಾಗಿ ವಿನ್ಯಾಸಗೊಳಿಸಲಾದ […]
ಕಾಂತಾರ ಮಾಡಿದ ರಿಷಬ್ ಶೆಟ್ಟಿ ಶಿವಾಜಿ ಸಿನಿಮಾ ಮಾಡಬಾರದು- ವಾಟಾಳ್ ನಾಗರಾಜ್

ಉಡುಪಿ: ಕಾಂತಾರ ಮಾಡಿದ ರಿಷಬ್ ಶೆಟ್ಟಿ, ಶಿವಾಜಿ ಸಿನಿಮಾ ಮಾಡಬಾರದು. ರಾಜ್ಯದಲ್ಲಿ ದೊಡ್ಡ ದೊಡ್ಡ ಮಹಾನೀಯರು, ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ. ಅದನ್ನು ಬಿಟ್ಟು ಶಿವಾಜಿ ಪಾತ್ರ ಮಾಡಬಾರದು. ಅದು ಒಳ್ಳೆಯ ಸೂಚನೆ ಅಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ರು. ರಿಷಬ್ ಶೆಟ್ಟಿ ಶಿವಾಜಿ ಪಾತ್ರದಲ್ಲಿ ಅಭಿನಯ ವಿಚಾರಕ್ಕೆ ಸಂಬಂಧಿಸಿ ಉಡುಪಿಯಲ್ಲಿಂದು ಪ್ರತಿಕ್ರಿಯೆ ನೀಡಿದ ಅವರು, ಕಾಂತಾರ ಸಿನಿಮಾಕ್ಕೆ ವ್ಯಾಪಕ ಪ್ರಶಂಸೆ, ಹಣ- ಗೌರವ ಬಂದಿದೆ. ಒಂದು ವೇಳೆ ರಿಷಬ್ ಶಿವಾಜಿ ಪಾತ್ರ ಮಾಡಿದ್ರೆ, ಕಾಂತಾರದಲ್ಲಿ ಸಿಕ್ಕ […]
ಮಹಾದಾಯಿ ಯೋಜನೆ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಎ.26ರಂದು ರಾಜ್ಯಾದ್ಯಂತ ಈಡುಗಾಯಿ ಒಡೆಯುವ ಪ್ರತಿಭಟನೆ; ವಾಟಾಳ್ ನಾಗರಾಜ್ ಕರೆ

ಉಡುಪಿ: ಮಹಾದಾಯಿ ಯೋಜನೆ ಸಹಿತ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಎ.26ರಂದು ರಾಜ್ಯಾದ್ಯಂತ ಈಡುಗಾಯಿ ಒಡೆಯುವ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ರಾಜ್ಯಾದ್ಯಂತ 2 ಕೋಟಿ ಈಡುಗಾಯಿ ಒಡಿಬೇಕು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕರೆ ನೀಡಿದರು. ಉಡುಪಿಯ ಪ್ರವಾಸಿ ಮಂದಿರದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾದಾಯಿ ಯೋಜನೆ, ಕಳಸಾ ಬಂಡೂರಿ, ಮೇಕೆದಾಟು ಯೋಜನೆ, ಉದ್ಯೋಗ, ಗ್ರೇಟರ್ ಬೆಂಗಳೂರು, ಸಮಗ್ರ ಕರ್ನಾಟಕದ ಅಭಿವೃದ್ಧಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಇಡೀ ರಾಜ್ಯ ಈಡುಗಾಯಿ ಚಳುವಳಿ ಮೂಲಕ ಒತ್ತಾಯ […]
ಮಣಿಪಾಲ: ಬಸ್ ಟೈಮಿಂಗ್ ವಿಚಾರಕ್ಕೆ ಹೊಡೆದಾಟ; ಚಾಲಕ, ನಿರ್ವಾಹಕನ ಬಂಧನ

ಉಡುಪಿ: ಟೈಮಿಂಗ್ ವಿಚಾರಕ್ಕೆ ಸಂಬಂಧಿಸಿ ಹೊಡೆದಾಡಿಕೊಂಡ ಖಾಸಗಿ ಬಸ್ ನ ನಿರ್ವಾಹಕ ಹಾಗೂ ಚಾಲಕನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಆನಂದ್ ಬಸ್ ನ ನಿರ್ವಾಹಕ ವಿಜಯ ಕುಮಾರ್ ಚಿತ್ರದುರ್ಗ (25) ಹಾಗೂ ಮಂಜುನಾಥ ಬಸ್ ನ ಚಾಲಕ ಉಚ್ಚಿಲ ಮೊಹಮ್ಮದ್ ಆಲ್ಪಾಜ್ (25) ಬಂಧಿತ ಆರೋಪಿಗಳು. ಇವರಿಬ್ಬರು ಎಪ್ರಿಲ್ 2 ರಂದು ಸಂಜೆ 4:30ಕ್ಕೆ ಮಣಿಪಾಲದ ಬಸ್ ನಿಲ್ದಾಣದಲ್ಲಿ ಟೈಮಿಂಗ್ ವಿಚಾರಕ್ಕೆ ಹೊಡೆದಾಡಿಕೊಂಡಿದ್ದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಓರ್ವ ರಾಜಾರೋಷವಾಗಿ […]
ಕಟಪಾಡಿ ತ್ರಿಶಾ ಕಾಲೇಜು: ಸಮಗ್ರ ಚಾಂಪಿಯನ್ ಶಿಪ್ ಪ್ರಶಸ್ತಿ

ಕಟಪಾಡಿ:ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನ ವಿದ್ಯಾರ್ಥಿಗಳು ಮಾರ್ಚ್ 27 ಮತ್ತು 28, 2025 ರಂದು ಮೂಡಬಿದ್ರಿಯ ಆಳ್ವಾ ಸ್ ಕಾಲೇಜಿನಲ್ಲಿ ನಡೆದ Arts Xuberance 2025 –Prithvi Parva ಎಂಬ ರಾಷ್ಟ್ರ ಮಟ್ಟದ ಅಂತರ ಕಾಲೇಜು ಸ್ಪರ್ಧೆಯಲ್ಲಿ ಭಾಗವಹಿಸಿ ಅನೇಕ ಬಹುಮಾನಗಳನ್ನು ಗೆದ್ದು ಸಮಗ್ರ ಚಾಂಪಿಯನ್ ಶಿಪ್ ಟ್ರೋಫಿ 2025 ಅನ್ನು ಪಡೆದಿದ್ದಾರೆ. ನಮ್ಮ ಪ್ರತಿಭಾನ್ವಿತ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಶ್ರೇಷ್ಠತೆ ತೋರಿಸಿ ಅಗ್ರಸ್ಥಾನವನ್ನು ಪಡೆದಿದ್ದಾರೆ. ನಾಟಕ (Street Play), Mock Press, ಪ್ರಬಂಧ ಮಂಡನೆ (Paper […]